/newsfirstlive-kannada/media/post_attachments/wp-content/uploads/2024/11/DEEPIKA.jpg)
ಬೆಂಗಳೂರು: ಕಿರುತೆರೆ ನಟಿ, ನಾಗಿಣಿ ಖ್ಯಾತಿಯ ದೀಪಿಕಾ ದಾಸ್ ಅವರು ಸೀರಿಯಲ್ ಮೂಲಕ ಎಲ್ಲರಿಗೂ ಪರಿಚಿತರು. ಕನ್ನಡ ಬಿಗ್ಬಾಸ್ನ ಮಾಜಿ ಸ್ಪರ್ಧಿ ಕೂಡ ಆಗಿದ್ದರು. ಸದ್ಯ ಇವರು ಮದುವೆಯಾಗಿ ಪತಿ ಜೊತೆ ಇದ್ದಾರೆ. ಆದರೆ ಬೆಂಗಳೂರಲ್ಲಿ ಇರುವ ಇವರ ತಾಯಿಗೆ ಕಿಡಿಗೇಡಿಯೊಬ್ಬ ಬೆದರಿಕೆ ಹಾಕಿದ್ದಾನೆ.
ಕಿರುತೆರೆ ನಟಿ ದೀಪಿಕಾ ದಾಸ್ ಅವರ ತಾಯಿ ಪದ್ಮಲತಾಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆ. ಬೆಂಗಳೂರು ಹೊರವಲಯದ ಮಾದನಾಯಕನಹಳ್ಳಿಯಲ್ಲಿ ಇರುವ ದೀಪಿಕಾ ದಾಸ್ ನಿವಾಸಕ್ಕೆ ಕಿಡಿಗೇಡಿಗಳು ಮಧ್ಯರಾತ್ರಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಜೊತೆಗೆ ಬೆದರಿಕೆ ಕೂಡ ಹಾಕಿದ್ದಾರೆ. ಸದ್ಯ ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ಕಿಡಿಗೇಡಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ:ಹಿಂದಿಯಲ್ಲಿ ಟ್ವೀಟ್ ಖಾತೆ ತೆರೆದ RCB.. ಕನ್ನಡಿಗರು, ಅಭಿಮಾನಿಗಳು ಆಕ್ರೋಶ
ಕನ್ನಡ ಕಿರುತೆರೆಯಲ್ಲಿ ನಾಗಿಣಿ, ಕೃಷ್ಣ ರುಕ್ಮಿಣಿ, ಬಿಗ್ಬಾಸ್ ಶೋ ಮೂಲಕ ದೀಪಿಕಾ ದಾಸ್ ಅಪಾರ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ದೀಪಕ್ ಎನ್ನುವರ ಜೊತೆ ಮದುವೆ ಮಾಡಿಕೊಂಡಿದ್ದರು. ಸದ್ಯ ತಾಯಿ ಮನೆಯಲ್ಲಿರುವಾಗ ಕಿಡಿಗೇಡಿ ಒಬ್ಬ ನಿಂದಿಸಿ ಹೋಗಿದ್ದಾನೆ. ಇವನಿಗಾಗಿ ಪೊಲೀಸರು ಹುಟುಕಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ