Advertisment

ಮ್ಯೂಸಿಯಮ್​​ನಲ್ಲಿ ಬರೋಬ್ಬರಿ 15 ಕೋಟಿ ಚಿನ್ನದ ನಾಣ್ಯಗಳು ಕದ್ದ ಕಳ್ಳ; ಈತ ಸಿಕ್ಕಿಬಿದ್ದಿದ್ದೇ ರೋಚಕ!

author-image
Bheemappa
Updated On
ಮ್ಯೂಸಿಯಮ್​​ನಲ್ಲಿ ಬರೋಬ್ಬರಿ 15 ಕೋಟಿ ಚಿನ್ನದ ನಾಣ್ಯಗಳು ಕದ್ದ ಕಳ್ಳ; ಈತ ಸಿಕ್ಕಿಬಿದ್ದಿದ್ದೇ ರೋಚಕ!
Advertisment
  • ಟಿಕೆಟ್ ತಗೊಂಡು ಒಳಗೆ ಹೋದವನು ಸಿಕ್ಕಿ ಬಿದ್ದಿರುವುದೇಗೆ?
  • ಕೋಟಿ ಕೋಟಿ ರೂಪಾಯಿಗಳ ಮೌಲ್ಯದ ವಸ್ತುಗಳು ಕಳ್ಳತನ
  • ಗುಪ್ತ, ಮೊಘಲರ ನಾಣ್ಯಗಳು, ಕಲಾಕೃತಿಗಳನ್ನು ಕದ್ದಿದ್ದ ಕಳ್ಳ

ಭೋಪಾಲ್‌: ಮ್ಯೂಸಿಯಂನಲ್ಲಿನ ಪುರಾತನ ಕಾಲದ ಕಲಾಕೃತಿ ಹಾಗೂ ನಾಣ್ಯಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದ ಕಿರಾತಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. 15 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿರುವುದು ಮಧ್ಯಪ್ರದೇಶದ ಭೋಪಾಲ್​ನ ಮ್ಯೂಸಿಯಂನಲ್ಲಿ ನಡೆದಿದೆ.

Advertisment

ಇದನ್ನೂ ಓದಿ:ಕನ್ನಡ ಚಿತ್ರರಂಗದ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ.. ಚೇತನ್ ಜೊತೆ ಕೈ ಜೋಡಿಸಿದ ಸುದೀಪ್, ರಮ್ಯಾ!

ಮ್ಯೂಸಿಯಂನಲ್ಲಿ ಕಳ್ಳತನ ಮಾಡಲು ಯತ್ನಿಸಿದ್ದ ವ್ಯಕ್ತಿ ವಿನೋದ್ ಯಾದವ್ ಎಂದು ಗುರುತಿಸಲಾಗಿದೆ. ಈತ ಎಲ್ಲರಂತೆ ಟಿಕೆಟ್​ ಖರೀದಿಸಿ ಒಳ ಹೋಗಿ ಪುರಾತನ ವಸ್ತುಗಳನ್ನ ವೀಕ್ಷಣೆ ಮಾಡುವಂತೆ ಮಾಡಿ ಮ್ಯೂಸಿಯಂನ ಮೆಟ್ಟಿಲುಗಳ ಕೆಳಗೆ ಉಳಿದುಕೊಂಡಿದ್ದಾನೆ. ಬಳಿಕ ಸಂಜೆ ಹೊತ್ತಿಗೆ ಮ್ಯೂಸಿಯಂ ಮುಚ್ಚಿದ ಮೇಲೆ ಒಳಗಿದ್ದ 15 ಕೋಟಿ ರೂಪಾಯಿ ಮೌಲ್ಯದ ಮೊಘಲರು ಹಾಗೂ ಗುಪ್ತರ ಕಾಲದ ಪುರಾತನ 200 ನಾಣ್ಯಗಳು, ಕಲಾಕೃತಿಗಳನ್ನು ಕಳ್ಳತನ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

publive-image

ನಂತರ ಕಳ್ಳತನ ಮಾಡಿದ ವಸ್ತುಗಳು ಸಮೇತ ಮ್ಯೂಸಿಯಂನ 25 ಅಡಿಯ ದೊಡ್ಡದಾದ ಗೋಡೆ ಜಂಪ್ ಮಾಡಲು ಪ್ರಯತ್ನ ಮಾಡಿದ್ದಾನೆ. ಆದರೆ ಗೋಡೆ ದೊಡ್ಡದಾಗಿದ್ದರಿಂದ ಕಳ್ಳ ಗಾಯಗೊಂಡು ಕೆಳಗೆ ಬಿದ್ದಿದ್ದಾನೆ. ಮರುದಿನ ಬೆಳಗ್ಗೆ ಮ್ಯೂಸಿಯಂಗೆ ಬಂದ ಅಧಿಕಾರಿಗಳು ಮುರಿದ ಬೀಗ, ನಾಣ್ಯ, ಕಲಾಕೃತಿ ಇಲ್ಲದನ್ನ ಕಂಡು ಗಾಬರಿಯಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಸಿಸಿಟಿವಿ ಕ್ಯಾಮೆರಾಗಳನ್ನು ನೋಡಿದ್ದಾರೆ. ಕ್ಯಾಮೆರಾದಲ್ಲಿ ಗೋಡೆ ಬಳಿ ಕಳ್ಳ ನೆಲಕ್ಕೆ ಬಿದ್ದಿರುವುದು ನೋಡಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಮಾಡಿದ್ದ ಎಲ್ಲ ಕೃತ್ಯವನ್ನು ಕಕ್ಕಿದ್ದಾನೆ ಎಂದು ಹೇಳಲಾಗಿದೆ.

Advertisment

ಇದನ್ನೂ ಓದಿ: ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್​! 

ಇನ್ನು ಕಳ್ಳ ಒಟ್ಟು 15 ಕೋಟಿ ರೂಪಾಯಿ ಮೊತ್ತದ ಪುರಾತನದ ಅಮೂಲ್ಯ ವಸ್ತುಗಳನ್ನು ಕಳ್ಳತನ ಮಾಡಲು ಯತ್ನಿಸಿದ್ದನು. ಕಳ್ಳನ ಬ್ಯಾಗ್​ನಲ್ಲಿ ಮೊಘಲರ, ಗುಪ್ತರ ಕಾಲದ 98 ಬಂಗಾರ, ಲೋಹದ ನಾಣ್ಯಗಳು, 75 ಬೆಳ್ಳಿಯ ನಾಣ್ಯಗಳು, 38 ತಾಮ್ರದ ನಾಣ್ಯಗಳು ಹಾಗೂ 12 ಮಿಕ್ಸ್​ ಆಗಿರುವ ಲೋಹದ ಪದಕಗಳು ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಈ ಸಂಬಂಧ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment