newsfirstkannada.com

ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ನಮಸ್ಕರಿಸಿ ಬಿಗಿದಪ್ಪಿದ ಫ್ಯಾನ್.. ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ..!

Share :

Published January 15, 2024 at 1:26pm

    ಅಫ್ಘಾನಿಸ್ತಾನದ ವಿರುದ್ಧ 2ನೇ ಟಿ-20 ಪಂದ್ಯದಲ್ಲಿ ಘಟನೆ

    ಹಲವು ತಿಂಗಳ ಬಳಿಕ ಟಿ-20 ಕ್ರಿಕೆಟ್​ಗೆ ಕೊಹ್ಲಿ ಕಂಬ್ಯಾಕ್

    15 ಬಾಲ್​ನಲ್ಲಿ 29 ರನ್​ ಬಾರಿಸಿರುವ ವಿರಾಟ್ ಕೊಹ್ಲಿ

14 ತಿಂಗಳಿಗಿಂತಲೂ ಹೆಚ್ಚು ಕಾಲಗಳ ಬಳಿಕ ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್​​ಮನ್ ವಿರಾಟ್ ಕೊಹ್ಲಿ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಕಂಬ್ಯಾಕ್ ಮಾಡಿದ್ದಾರೆ. ಅಫ್ಘಾನಿಸ್ತಾದನ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಕೊಹ್ಲಿ ತಂಡಕ್ಕೆ ವಾಪಸ್ ಆಗಿದ್ದಾರೆ.

ಮಧ್ಯ ಪ್ರದೇಶದ ಹೊಲ್ಕರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಅಭಿಮಾನಿಗಳು ಕೊಹ್ಲಿಯನ್ನು ಕಂಡು ಖುಷಿಪಟ್ಟರು. ಟೀಂ ಇಂಡಿಯಾ ಫೀಲ್ಡಿಂಗ್ ವೇಳೆ ಅಭಿಮಾನಿಯೊಬ್ಬ ಸ್ಟೇಡಿಯಂಗೆ ನುಗ್ಗಿ ಕೊಹ್ಲಿಯ ಕಾಲಿಗೆ ನಮಸ್ಕಾರ ಮಾಡಿ ತಬ್ಬಿಕೊಂಡು ಗೊಂದಲ ಸೃಷ್ಟಿಸಿದ್ದಾನೆ. ಕೊಹ್ಲಿಯತ್ತ ಓಡೋಡಿ ಬರುವ ಅಭಿಮಾನಿ ಏಕಾಏಕಿ ಕಾಲಿಗೆ ಬೀಳಲು ಯತ್ನಿಸಿದ್ದಾರೆ. ಆಗ ಕೊಹ್ಲಿ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಿದ್ದಂತೆಯೇ ಬಿಗಿದಪ್ಪಿದ್ದಾನೆ.

ಅಷ್ಟರಲ್ಲಿ ಭದ್ರತಾ ಸಿಬ್ಬಂದಿ ಓಡಿ ಬಂದು ಕೊಹ್ಲಿಯಿಂದ ಆತನನ್ನು ಬಿಡಿಸಿಕೊಂಡು ವಶಕ್ಕೆ ಪಡೆದಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಕೊಹ್ಲಿ 15 ಬಾಲ್​ಗಳಲ್ಲಿ 29 ರನ್​​ ಬಾರಿಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೈದಾನಕ್ಕೆ ನುಗ್ಗಿ ಕೊಹ್ಲಿ ಕಾಲಿಗೆ ನಮಸ್ಕರಿಸಿ ಬಿಗಿದಪ್ಪಿದ ಫ್ಯಾನ್.. ವಿಡಿಯೋ ನೋಡಿದ್ರೆ ಶಾಕ್ ಆಗುತ್ತೆ..!

https://newsfirstlive.com/wp-content/uploads/2024/01/KOHLI-FAN.jpg

Load More