ಬೆಳ್ಳಿ ಬಳೆಗಳಿಗಾಗಿ ತಾಯಿಯ ಚಿತೆ ಮೇಲೆ ಮಲಗಿದ ಮಗ.. ದುಃಖದ ಮಡುವಿನಲ್ಲಿ ಸುಪುತ್ರನ ವಿಲಕ್ಷಣ ವರ್ತನೆ..

author-image
Ganesh
Updated On
ಬೆಳ್ಳಿ ಬಳೆಗಳಿಗಾಗಿ ತಾಯಿಯ ಚಿತೆ ಮೇಲೆ ಮಲಗಿದ ಮಗ.. ದುಃಖದ ಮಡುವಿನಲ್ಲಿ ಸುಪುತ್ರನ ವಿಲಕ್ಷಣ ವರ್ತನೆ..
Advertisment
  • ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಾಗ ಹೈಡ್ರಾಮಾ
  • ದುಃಖದಲ್ಲಿದ್ದಾಗ ವಿಲಕ್ಷಣ ವರ್ತನೆ, ವ್ಯಕ್ತಿಯ ನಡೆಗೆ ಆಕ್ರೋಶ
  • ಮಗನ ನಾಟಕದಿಂದ 2 ಗಂಟೆ ತಡವಾಗಿ ನಡೆದ ಅಂತ್ಯಸಂಸ್ಕಾರ

ರಾಜಸ್ಥಾನದ ಜೈಪುರದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಹೆತ್ತ ತಾಯಿ ಕೈಯಲ್ಲಿದ್ದ ಬೆಳ್ಳಿ ಬಳೆಗಳನ್ನು ಪಡೆಯಲು, ಪಾಪಿ ಮಗನೊಬ್ಬ ಆಕೆಯ ಚಿತೆಯ ಮೇಲೆ ಮಲಗಿ ರಂಪಾಟ ನಡೆಸಿದ್ದಾನೆ. ಮಗನ ಅಮಾನುಷ ನಡೆಗೆ ಖಂಡನೆ ವ್ಯಕ್ತವಾಗುತ್ತಿದೆ.

80 ವರ್ಷದ ಚಟೀರಾ ರೇಗರ್ ಅನ್ನೋರು ವಯೋ ಸಹಜ ಕಾರಣದಿಂದ ನಿಧನರಾಗಿದ್ದರು. ಅಂತ್ಯಸಂಸ್ಕಾರಕ್ಕೆ ಹೋದಾಗ ಮಗ ಹೈಡ್ರಾಮಾ ಶುರು ಮಾಡಿದ್ದಾನೆ. ತಾಯಿ ಕೈಯಲ್ಲಿದ್ದ ಬೆಳ್ಳಿ ಬಳೆ ತನಗೆ ಬೇಕು ಎಂದು ರಂಪಾಟ ಮಾಡಿದ್ದಾನೆ.

ಇದನ್ನೂ ಓದಿ: ಬೆಂಗಳೂರು ಇಸ್ಕಾನ್​ಗೆ ಸುಪ್ರೀಂ ಕೋರ್ಟ್​ನಲ್ಲಿ ದೊಡ್ಡ ಗೆಲುವು.. ಏನಿದು ಮಾಲೀಕತ್ವದ ವಿವಾದ..?

ರಂಪಾಟ ಮಾಡಿದ ವ್ಯಕ್ತಿಯ ಹೆಸರು ಓಂ ಪ್ರಕಾಶ್. ಈ ಓ ಪ್ರಾಂಕಾಶ್ ಚಟೀರಾ ರೇಗರ್​​ಗೆ ಕಿರಿಯ ಮಗ. ಹಿರಿಯ ಮಗ ವೃದ್ಧ ತಾಯಿಯನ್ನು ನೋಡಿಕೊಂಡಿದ್ದ. ಹೀಗಾಗಿ ಸಂಬಂಧಿಕರು ತಾಯಿ ಬಳಿಯಿದ್ದ ಬಳೆಗಳನ್ನು ಹಿರಿಯ ಮಗನಿಗೆ ಕೊಟ್ಟಿದ್ದರು.
ಇದಕ್ಕೆ ಮುನಿಸಿಕೊಮಡ ಕಿರಿಯ ಮಗ ಓಂ ಪ್ರಕಾಶ್, ತನಗೆ ಬೆಳ್ಳಿ ಬಳೆಗಳನ್ನು ನೀಡುವವರೆಗೂ ಅಂತ್ಯಸಂಸ್ಕಾರಕ್ಕೆ ಅವಕಾಶ ಕೊಡಲ್ಲ ಎಂದು ಚಿತೆಯ ಮೇಲೆ ಮಲಗಿದ್ದಾನೆ. ಇದರಿಂದ ಅಂತ್ಯಸಂಸ್ಕಾರ ಎರಡು ಗಂಟೆಗಳ ಕಾಲ ವಿಳಂಬ ಆಗಿದೆ. ಕೊನೆಗೆ ಸ್ಥಳೀಯರು, ಸಂಬಂಧಿಕರು ಮಧ್ಯಸ್ಥಿಕೆ ವಹಿಸಿ ಹಿರಿಯ ಮಗನಿಂದ ಕಿರಿಯ ಮಗನಿಗೆ ಬೆಳ್ಳಿ ಬಳೆಗಳನ್ನು ಕೊಡಿಸಿದ್ದಾರೆ.

ಇದನ್ನೂ ಓದಿ: ಮಗಳ ಕೈಹಿಡಿದು ಮಂತ್ರಾಲಯಕ್ಕೆ ಬಂದ ಪವಿತ್ರ ಗೌಡ.. ಇನ್​ಸ್ಟಾಗ್ರಾಮ್​​ನಲ್ಲಿ ಏನೆಂದು ಬರೆದುಕೊಂಡಿದ್ದಾರೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment