/newsfirstlive-kannada/media/post_attachments/wp-content/uploads/2025/04/I-want-image-on-man-sniffing-his-dirty-socks.jpg)
ಚೀನಾದ ಲಿ ಕೀ ಎಂಬ ವ್ಯಕ್ತಿಗೆ ನಿಧಾನಕ್ಕೆ ಕೆಮ್ಮು ಶುರುವಾಗಿ, ರಾತ್ರಿಯಿಡೀ ನಿದ್ದೆ ಮಾಡೋಕೆ ಬಿಡದ ಭೀಕರ ಕಫವಾಗಿಬಿಟ್ಟಿದೆ. ಎಷ್ಟು ಕೆಮ್ಮಿನ ಸಿರಪ್ಗಳನ್ನ ಕುಡಿದರೂ.. ಯಾವುದೇ ಟ್ಯಾಬ್ಲೆಟ್ ತಗೊಂಡರೂ ಏನೂ ಪ್ರಯೋಜನ ಇರ್ಲಿಲ್ಲ. ಸ್ವಲ್ಪ ದಿನಗಳಲ್ಲೇ ಲಿ ಕೀಗೇ. ಕಣ್ಣಲ್ಲಿ ರಕ್ತ ಸುರಿದು, ರಕ್ತಕಣ್ಣೀರಾಗಿಬಿಡುತ್ತೆ. ಅಲ್ಲಿವರೆಗೂ ನಾರ್ಮಲ್ ಕೆಮ್ಮು ಅಂತ ಅಂದುಕೊಂಡಿದ್ದ ಲಿಕೀಗೆ.. ಭಯ ಶುರುವಾಗಿ ಆಸ್ಪತ್ರೆಗೆ ಓಡಿದ್ದಾನೆ.
ಆಸ್ಪತ್ರೆಗೆ ಹೋಗಿದ್ದ ಲಿಕೀ ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ ಅಂತೆಲ್ಲಾ ಮಾಡಿ ಆದ ಮೇಲೆ, ಲಿಕೀಯ ಬಲ ಶ್ವಾಸಕೋಶದಲ್ಲಿ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದವು. ಈ ಸೋಂಕು ವೈದ್ಯರನ್ನೇ ತಳಮಳ ಮಾಡಿತ್ತು ಅಂದ್ರೆ ನೀವು ನಂಬಲೇಬೇಕು. ಯಾಕೆ ಗೊತ್ತಾ ಅದು ಲಿಕೀ ತಾನಾಗೇ ತಂದುಕೊಂಡಿದ್ದ ರೋಗವಾಗಿತ್ತು.
ಇದನ್ನೂ ಓದಿ: ಕೂದಲು ಆಯ್ತು, ಈಗ ಉಗುರು ಉದುರುವ ಸಮಸ್ಯೆ.. ಇಡೀ ಗ್ರಾಮವೇ ಕಂಗಾಲು..!
ಆಸ್ಪತ್ರೆಯಲ್ಲಿ ಲಿಕೀಗೆ ಉಸಿರಾಟಕ್ಕೆ ಬೇಕಾದ ಟ್ರೀಟ್ಮೆಂಟ್ಗಳನ್ನೆಲ್ಲಾ ಡಾಕ್ಟರ್ಸ್ ಕೊಟ್ಟಿದ್ದರು. ಲಿಯಾಂಗ್ ಪೀಕಿಯಾಂಗ್ ಅನ್ನುವ ಡಾಕ್ಟರ್, ಕೆಲ ಟೆಸ್ಟ್ಗಳನ್ನ ಮಾಡಿ ಇದೊಂದು ಆಸ್ಪರ್ಜಿಲಸ್ ಇನ್ಫೆಕ್ಷನ್ ಅಂತ ಹೇಳ್ತಾರೆ. ಸಾಮಾನ್ಯವಾಗಿ ಇದು ಫಂಗಸ್ನಿಂದ ಬರುತ್ತೆ. ಲಿ ಕೀ ಈಗ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದಾರೆ ಅಂತ ದೃಢಪಡಿಸ್ತಾರೆ.
ಸಾಮಾನ್ಯವಾಗಿ, ಈ ಫಂಗಸ್ನ ಸಣ್ಣ ಸಣ್ಣ ಕಣಗಳು ಉಸಿರಾಡುವಾಗ ಮೂಗಿನಿಂದ ದೇಹ ಸೇರುತ್ತವೆ. ಹಾಗೆ ಸೇರಿದ್ದ ಫಂಗಸ್ ಆಸ್ಪರ್ಜಿಲೋಸಿಸ್ ಅನ್ನೋ ಇನ್ಫೆಕ್ಷನ್ಗೆ ಕಾರಣವಾಗುತ್ತೆ. ಅದೇ ಉಸಿರಾಟದ ತೊಂದರೆ, ಕೆಮ್ಮಿನಂಥ ರೋಗಗಳಿಗೆ ಕಾರಣವಾಗುತ್ತೆ ಅಂತ ಡಾಕ್ಟರ್ಸ್ ಹೇಳಿದ್ದರು.
ಈಗ ಡಾಕ್ಟರ್ಸ್ಗೆ ಈ ಫಂಗಸ್ ಲಿಕೀಗೆ ಹೇಗೆ ಸೋಕಿತ್ತು ಅನ್ನೋದೇ ಅರ್ಥವಾಗಿರ್ಲಿಲ್ಲ. ಈ ಫಂಗಸ್ ಹೆಚ್ಚಾಗಿ ಮಣ್ಣು, ಕೊಳೆಯುತ್ತಿರೋ ಎಲೆಗಳು, ಇನ್ನೂ ಅನೇಕ ತೇವ ಇರೋ ಕಡೆ ಬೆಳೆಯುತ್ತವೆ. ಅಷ್ಟೇಯಲ್ಲ ಈ ಫಂಗಸ್ ಧೂಳು, ಒದ್ದೆಯಾದ ಬಿಲ್ಡಿಂಗ್ಸ್, ಹಾಸಿಗೆ, ಎಸಿಗಳಲ್ಲೂ ಕೂಡ ಬೆಳೆಯೋ ಸಾಧ್ಯತೆ ಇದೆ ಎಂದಿದ್ದ ಡಾಕ್ಟರ್ಸ್. ಲಿಕೀಗೆ ಈ ಫಂಗಸ್ ಎಲ್ಲಿಂದ ಸೋಕಿರ್ಬೋದು ಅಂತ ತಿಳಿದುಕೊಳ್ಳೋ ಅಗತ್ಯ ಇತ್ತು.
ಈ ಬಗ್ಗೆ ಲಿಕೀಗೆ ನೆನಪಿಸಿಕೊಳ್ಳುವಂತೆ ಡಾಕ್ಟರ್ಸ್ ಹೇಳಿದಾಗ, ಲಿಕೀ ತಲೆ ತಿರುಗುವಂಥ ಸತ್ಯ ಹೇಳಿದ್ದ. ಅದೇ ಆತನಿಗೆ ಶೂ ಸಾಕ್ಸ್ ಮೂಸುವ ಅಭ್ಯಾಸ ಇದೆ ಅನ್ನೋದು. ಡಾಕ್ಟರ್ಸ್ ಎಲ್ಲರಿಗೂ ಶಾಕ್ ಆದರೂ.. ಒಂದರು ಬಾರಿ ಸಾಕ್ಸ್‌ಗಳನ್ನ ಚೆಕ್ ಮಾಡೋ ಉದ್ದೇಶದಲ್ಲಿ, ಲಿಕೀ ಸಾಕ್ಸ್ ಟೆಸ್ಟ್ ಮಾಡಿದ್ದರು. ಅಚ್ಚರಿಯಾಗಿ ಆ ಸಾಕ್ಸ್ಗಳಲ್ಲಿ ಆಸ್ಪರ್ಜಿಲಸ್‌ನ ಕಣಗಳು ಕಂಡು ಬಂದಿದ್ದವು.
ಲಿ ಕೀ ಪ್ರತಿದಿನ ಕೆಲಸ ಮುಗಿಸಿ ಬಂದ ಮೇಲೆ ತನ್ನ ಸಾಕ್ಸ್‌ನ ವಾಸನೆಯನ್ನ ಅನುಭವಿಸಿದ ನಂತರ ಮಲಗುತ್ತಿದ್ದನಂತೆ. ಹೀಗೆ ದಿನ ನಿತ್ಯ ಕೊಳಕು ಸಾಕ್ಸ್‌ಗಳನ್ನ ಮೂಸಿ ನೋಡುತ್ತಿದ್ದ ಲಿಕೀಗೆ ಶ್ವಾಸಕೋಶದ ರೋಗ ಬಂದಿದೆ. ನಾವು ನೀವೆಲ್ಲಾ ಬಳಸುವ ಸಾಕ್ಸ್ ಬೆವರು ಉಪ್ಪು, ಯೂರಿಯಾಗಳಿಂದ ಕೂಡಿರುತ್ತೆ. ಶೂಗಳಲ್ಲಿ ಆ ಸಾಕ್ಸ್‌ನ್ನ ಹಾಗೆ ಹೆಚ್ಚು ದಿನ ಬಿಟ್ಟರೆ, ಬಿಸಿ ಉಂಟಾಗಿ ಇನ್ನಷ್ಟು ಹೆಚ್ಚು ಫಂಗಸ್ನ ಕ್ರಿಯೆಟ್ ಮಾಡುತ್ತೆ. ಅದು ದಿನ ದಿನಕ್ಕೂ ಹೆಚ್ಚಾಗುತ್ತಲೇ ಇರುತ್ತೆ. ಈ ಫಂಗಸ್ ಕಾರಣದಿಂದ ಕೆಟ್ಟ ವಾಸನೆ ಬರುತ್ತೆ. ಹಾಗೆ ಇದು ಉಸಿರಲ್ಲಿ ಸೇರಿದರೆ, ಇಂಥಾ ಶ್ವಾಸಕೋಶಕ್ಕೆ ಸಂಬಂಧ ಪಟ್ಟ ರೋಗಗಳು ತಪ್ಪಿದ್ದಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ