/newsfirstlive-kannada/media/post_attachments/wp-content/uploads/2025/03/COMA-PATIENT.jpg)
ಮಧ್ಯಪ್ರದೇಶದ ರತ್ಲಮ್ ನಗರದಲ್ಲೊಂದು ಹಿಂದೆಂದೂ ಕಂಡು ಕೇಳರಿಯದಂತಹ ಘಟನೆಯೊಂದು ನಡೆದಿದೆ. ಕೋಮಾದಲ್ಲಿದ್ದ ರೋಗಿಯೊಬ್ಬ ಮೂಗಿಗೆ ಅಳವಡಿಸಿದ ಬ್ರೀಥಿಂಗ್ ಟ್ಯೂಬ್ ಸಮೇತ ಆಸ್ಪತ್ರೆಯ ಅಂಗಳದಲ್ಲಿ ಬಂದು ಪ್ರತಿಭಟನೆಗೆ ನಿಂತಿದ್ದಾರೆ. ಇಡೀ ಆಸ್ಪತ್ರೆ ಹಾಗೂ ಆಡಳಿತ ಮಂಡಳಿಯೇ ದೊಡ್ಡ ವಂಚಕರು ಎಂದು ಆರೋಪ ಮಾಡಿದ್ದಾನೆ. ಅದಕ್ಕೆ ಕಾರಣ ಆಸ್ಪತ್ರೆ ತಾನು ನೀಡಿದ ಚಿಕಿತ್ಸೆಗೆ ಕೊಟ್ಟ ಬಿಲ್
ಬಂಟಿ ನಿಮಾಮ್ ಎಂಬ ವ್ಯಕ್ತಿಯನ್ನು ಜಿಡಿ ಆಸ್ಪತ್ರೆಯ ಬೆಡ್ನಲ್ಲಿ ಕೈ ಕಾಲು ಕಟ್ಟಿ ಮಲಗಿಸಲಾಗಿತ್ತಂತೆ. ಮತ್ತು ಕುಟುಂಬದವರಿಗೆ ಅವನು ಕೋಮಾಗೆ ಹೋಗಿದ್ದಾನೆ ಎಂದು ಹೇಳಲಾಗಿತ್ತಂತೆ. ಹೀಗಾಗಿ ಅವನ ಕುಟುಂಬ ದುಬಾರಿ ಔಷಧಿಗಳನ್ನು ಮತ್ತು ಚಿಕಿತ್ಸೆಗಾಗಿ ದುಡ್ಡು ಹೊಂದಿಸಲು ಓಡಾಡಿದ್ದಾರೆ. ಆಸ್ಪತ್ರೆಯ ಬಿಲ್ ನೋಡಿ ಕೋಮಾದಲ್ಲಿದ್ದ ನಿಮಾಮ್ ಅಲ್ಲಿಯೇ ಗಲಾಟೆ ಶುರುಮಾಡಿದ್ದಾನೆ ಎಂದು ಆಸ್ಪತ್ರೆಯ ಸಿಬ್ಬಂದಿ ಸಿಸಿಟಿವಿಯ ದೃಶ್ಯಗಳನ್ನು ತೋರಿಸಿವೆ. ಗಲಾಟೆ ಶುರು ಮಾಡಿದ ನಿಮಾಮ್ ಐಸಿಯುನಲ್ಲಿದ್ದ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಕೂಡ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.
A hospital in Madhya Pradesh's Ratlam witnessed unprecedented scenes when a patient walked out onto the road with a catheter and breathing tube still attached to him and accused the authorities of the institution of carrying out a fraud. pic.twitter.com/oGyhffi25v
— PUNEET VIZH (@Puneetvizh) March 8, 2025
ಸದ್ಯ ಮೂಗಿಗೆ ಅಳವಡಿಸಿದ ಬ್ರಿಥಿಂಗ್ ಟ್ಯೂಬ್ನೊಂದಿಗೆ ಆಸ್ಪತ್ರೆಯ ರಸ್ತೆಯ ಬಳಿ ಪ್ರತಿಭಟನೆ ಮಾಡುತ್ತಿದ್ದ ನಿಮಾಮ್ನ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸದ್ಯ ಇಂಡಸ್ಟ್ರೀಯಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಜಿಲ್ಲಾಡಳಿತ ಮಂಡಳಿ ಈ ಒಂದು ವಿಚಾರವನ್ನು ತನ್ನ ಗಂಭೀರವಾಗಿ ಪರಿಗಣಿಸಿದೆ.
ಇದನ್ನೂ ಓದಿ: ಭಾರತದ ಮೊಟ್ಟ ಮೊದಲ ಎಸಿ ಟ್ರೇನ್ ಯಾವುದು ಗೊತ್ತಾ? ಎಲ್ಲಿಂದ ಎಲ್ಲಿಯವರೆಗೆ ಸಂಚಾರ ಮಾಡಿತ್ತು?
ನಿಮಾಮ್ನ ಕುಟುಂಬ ಹೇಳುವ ಪ್ರಕಾರ ಈ ಆಸ್ಪತ್ರೆಗೆ ಬರುವ ಮುಂಚೆ ಬೇರೆ ವೈದ್ಯಕೀಯ ಸಂಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಲ್ಲಿಯೂ ಕೂಡ ಪಕ್ಕದ ಪೇಷಂಟ್ಗಳ ಜೊತೆ ಜಗಳವಾಗಿದ್ದರಿಂದ ನಿಮಾಮ್ರನ್ನು ಪಕ್ಕದ ಖಾಸಗಿ ಆಸ್ಪತ್ರೆಯಾದ ಜಿಡಿ ಹಾಸ್ಪಿಟಲ್ಗೆ ಶಿಫ್ಟ್ ಮಾಡಲಾಯಿತಂತೆ.
ಸದ್ಯ ವಿಡಿಯೋ ವೈರಲ್ ಆದ ಬಳಿಕ ಜಿಲ್ಲಾಧಿಕಾರಿ ರಾಜೇಶ್ ಬಾಥಮ್ ಆಸ್ಪತ್ರೆಗೆ ಭೇಟಿ ನೀಡಿ ತನಿಖೆ ಕೈಗೊಳ್ಳುವಂತೆ ಮೂರು ಅಧಿಕಾರಿಗಳ ತಂಡವನ್ನು ರಚಿಸಿದ್ದಾರೆ. ತಂಡದಲ್ಲೊಬ್ಬರಾಗಿರುವ ಅಧಿಕಾರಿ ಆಶೀಶ್ ಚೌರಾಸಿಯವರು ಹೇಳುವ ಪ್ರಕಾರ ಪ್ರಕರಣವನ್ನು ತುಂಬಾ ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸಲಾಗುವುದು. ಎಲ್ಲರ ಹೇಳಿಕೆಯನ್ನು ದಾಖಲಿಸಿಕೊಂಡು ಕೊನೆಗೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಏರ್‌ಪೋರ್ಟ್‌ನಲ್ಲಿ ವ್ಹೀಲ್ ಚೇರ್ ನೀಡದ ಏರ್ ಇಂಡಿಯಾ ಯಡವಟ್ಟು.. ಕುಸಿದು ಬಿದ್ದ 82ರ ವೃದ್ಧೆ! ಆಮೇಲಾಗಿದ್ದೇನು?
ಸದ್ಯ ಐಸಿಯುನ ಸಿಸಿಟಿವಿ ಫೂಟೇಜ್ಗಳನ್ನು ಬಿಡುಗಡೆ ಮಾಡಿರುವ ಆಸ್ಪತ್ರೆಯ ಸಿಬ್ಬಂದಿ, ನಿಮಾಮ್ ಐಸಿಯುನಲ್ಲಿ ದೊಡ್ಡ ಗಲಾಟೆ ಮಾಡಿದ್ದಾನೆ. ಅದರ ಜೊತೆಗೆ ಅವನಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರನ್ನು ಕೂಡ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಎಂದು ಆರೋಪಿಸಿ ನಿಮಾಮ್ ವಿರುದ್ಧ ಇಂಡಸ್ಟ್ರೀಯಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ