newsfirstkannada.com

ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕ.. ಗರ್ಭಿಣಿ ಮಾಡಿದ ಅತ್ಯಾಚಾರಿಗೆ 106 ವರ್ಷ ಜೈಲು ಶಿಕ್ಷೆ

Share :

Published April 30, 2024 at 9:03am

Update April 30, 2024 at 9:05am

    15 ವರ್ಷದ ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಅತ್ಯಾಚಾರ

    ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ ತಾಯಿಯ ಸ್ನೇಹಿತ

    ಅತ್ಯಾಚಾರಿಗೆ ಕೋರ್ಟ್​ ನೀಡಿತು 106 ವರ್ಷಗಳ ಜೈಲು ಶಿಕ್ಷೆ

ಕೇರಳ: 15 ವರ್ಷ ವಯಸ್ಸಿನ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಗರ್ಭ ಧರಿಸುವಂತೆ ಮಾಡಿದ ವ್ಯಕ್ತಿಗೆ ಕೇರಳ ನ್ಯಾಯಾಲಯವು 106 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.

ಸಂತ್ರಸ್ತೆಯ ತಾಯಿಯ ಸ್ನೇಹಿತನಿಂದ ಮಾನಸಿಕ ಅಸ್ವಸ್ಥ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. 44 ವರ್ಷದ ವ್ಯಕ್ತಿ ಆಕೆಗೆ ಗರ್ಭ ಧರಿಸುವಂತೆ ಮಾಡಿದ್ದಾನೆ. ಈ ಪ್ರಕರಣ ದೇವಿಕುಲಂ ಫಾಸ್ಟ್​ ಟ್ರ್ಯಾಕ್​​ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿತ್ತು. ನ್ಯಾಯಾಧೀಶ ಸಿರಾಜುದ್ದೀನ್​​ ಪಿಎ ಸಂತ್ರಸ್ತೆಗೆ ನ್ಯಾಯ ಕೊಡಿಸಿದ್ದಾರೆ. ಆರೋಪಿಗೆ ಪೋಕ್ಸೋ ಕಾಯ್ದೆಯಡಿ 106 ವರ್ಷಗಳ ಜೈಲು ಶಿಕ್ಷೆ ಜೊತೆಗೆ ವಿವಿಧ ಶಿಕ್ಷೆ ವಿಧಿಸಿದ್ದಾರೆ.

ಶಿಕ್ಷೆಯನ್ನು ಏಕಕಾಲದಲ್ಲಿ ನೀಡಲಾಗಿದೆ. 22 ವರ್ಷಗಳ ಕಾಲ ಗರಿಷ್ಠ ಜೈಲು ಶಿಕ್ಷೆಯನ್ನು ಅನುಭವಿಸಬೇಕಿದೆ. ಜೊತೆಗೆ ನ್ಯಾಯಾಲಯವು ವ್ಯಕ್ತಿಗೆ 60 ಸಾವಿರ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ದಂಡ ಪಾವತಿಸದೇ ಇದ್ದಲ್ಲಿ 22 ತಿಂಗಳ ಕಠಿಣ ಸಜೆ ಅನುಭವಿಸಬೇಕು.

ಆರೋಪಿ ದಂಡ ಪಾವತಿಸಿದರೆ ಇಡುಕ್ಕಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂತ್ರಸ್ತ ಪರಿಹಾರ ಯೋಜನೆಯಿಂದ ಬಾಲಕಿಗೆ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ತಿಳಿಸಿದೆ.

ತಾಯಿಯ ಸ್ನೇಹಿತನೇ ಮಾಡಿದ ಈ ಕೆಲಸ

ಆರೋಪಿ ತ್ರಿಶೂಲ್​ ಮೂಲದವನಾಗಿದ್ದು, 2022ರಲ್ಲಿ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದನು. ಹುಡುಗಿಯ ತಾಯಿ ಕೂಡ ಅದೇ ಹೊಟೇಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಸ್ನೇಹ ಬೆಳೆಸಿ ಆಕೆಯ ಮನೆಗೆ ಬರುತ್ತಿದ್ದನು.

ಯಾರು ಇಲ್ಲದಾಗ ಅತ್ಯಾಚಾರ

ಒಂದು ದಿನ ಬಾಲಕಿಯ ತಾಯಿ ಮತ್ತು ಸಹೋದರರು ಮನೆಯಲ್ಲಿ ಇಲ್ಲದಿದ್ದಾಗ ಆರೋಪಿ ಆಕೆಯನ್ನು ಅತ್ಯಾಚಾರ ನಡೆಸಿದ್ದಾನೆ. ಬಳಿಕ ಯಾರಿಗಾದರು ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನೆ. ಆದರೆ ಕೊನೆಗೆ ಬಾಲಕಿಗೆ ಹದೈಹಿ ತೊಂದರೆ ಕಾಣಿಸಿದೆ. ಅಲ್ಲಿನ ತಾಲೂಕು ಆಸ್ಪತ್ರೆಗೆ ಕರೆತಂದಾಗ ನಿಜ ಸಂಗತಿ ಬಯಲಾಗಿದೆ. ಬಳಿಕ ಆಖೆಗೆ ಗರ್ಭಪಾತ ಮಾಡಲಾಗಿದೆ.

ಡಿಎನ್​​ಎ ಟೆಸ್ಟ್​ನಲ್ಲಿ ಹೊರಬಿತ್ತು ಸತ್ಯ

ಗರ್ಭಪಾತದ ಬಳಿಕ ಡಿಎನ್​ಎ ಪರೀಕ್ಷೆ ನಡೆಸಲಾಗಿದ್ದು, ತಾಯಿಯ ಸ್ನೇಹಿತನಿಂದ ಸಂತ್ರಸ್ತೆ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಾನಸಿಕ ಅಸ್ವಸ್ಥ ಬಾಲಕಿಯನ್ನೂ ಬಿಡದ ಕಾಮುಕ.. ಗರ್ಭಿಣಿ ಮಾಡಿದ ಅತ್ಯಾಚಾರಿಗೆ 106 ವರ್ಷ ಜೈಲು ಶಿಕ್ಷೆ

https://newsfirstlive.com/wp-content/uploads/2023/11/Girl-Rape.jpg

Load More