/newsfirstlive-kannada/media/post_attachments/wp-content/uploads/2024/07/KLB-MAN.jpg)
ಕಲಬುರಗಿ: ಹೊರವಲಯದ ಶಾಹಬಾದ್ ರಸ್ತೆಯ ಡಾಮಿನೆಂಟ್ ಡಾಬಾ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರ ಹತ್ಯೆ ಮಾಡಲಾಗಿದೆ.
ಬೊಮ್ಮನಹಳ್ಳಿ ಗ್ರಾಮದ ಪ್ರವೀಣ್ ಬಿರಾದಾರ್ (24) ಕೊಲೆಯಾದ ವ್ಯಕ್ತಿ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪ್ರವೀಣ್ನನ್ನು ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಇದನ್ನೂ ಓದಿ:Audi, BMW, 5 ಕೆಜಿ ಬೆಳ್ಳಿ! ಐಷಾರಾಮಿ ಬಂಗಲೆಗಳು.. ಕೋಚ್ ಗಂಭೀರ್ ಆಸ್ತಿ ಅಬ್ಬಾಬ್ಬ..!
ಎಣ್ಣೆ ಪಾರ್ಟಿ ಬಳಿಕ ಪ್ರವೀಣ್‌ನನ್ನ ಕೊಚ್ಚಿ ಕೊಚ್ಚಿ ಕೊಲೆ ಮಾಡಿರೋ ಅನುಮಾನ ಇದೆ. ಸ್ಥಳಕ್ಕೆ ಸಿಟಿ ಪೊಲೀಸ್ ಕಮಿಷನರ್ ಚೇತನ್, ಡಿಸಿಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಜ್ಞರೂ ಕೂಡ ಸ್ಥಳಕ್ಕೆ ಬಂದಿದ್ದಾರೆ. ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ