Advertisment

ಬೀದರ್​​ನಲ್ಲಿ ಹರಿದ ನೆತ್ತರು.. ಕುಚಿಕು ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ.. ಕಾರಣ ರಿವೀಲ್..

author-image
Ganesh
Updated On
ಬೀದರ್​​ನಲ್ಲಿ ಹರಿದ ನೆತ್ತರು.. ಕುಚಿಕು ಗೆಳೆಯನ ಕತ್ತು ಸೀಳಿ ಬರ್ಬರ ಕೊಲೆ.. ಕಾರಣ ರಿವೀಲ್..
Advertisment
  • ತಾನಿದ್ದ ಜಾಗಕ್ಕೆ ಕರೆಸಿಕೊಂಡು ಕೊಲೆ ಮಾಡಿದ ಸ್ನೇಹಿತ
  • ಘಟನಾ ಸ್ಥಳಕ್ಕೆ ಎಸ್​ಪಿ ಭೇಟಿ, ಆರೋಪಿ ಅರೆಸ್ಟ್
  • ಗೆಳೆಯನ ಬರ್ಬರವಾಗಿ ಹತ್ಯೆ ಮಾಡಲು ಕಾರಣ ಏನು?

ಬೀದರ್: ಕುಚಿಕು ಗೆಳೆಯ ಸ್ನೇಹಿತನ ಕತ್ತುಕೊಯ್ದು ಬರ್ಬರವಾಗಿ ಹತ್ಯೆಗೈದ ಘಟನೆ ತಾಲೂಕಿನ ಯಾಕತ್‌ಪುರ್ ಗ್ರಾಮದಲ್ಲಿ ನಡೆದಿದೆ.

Advertisment

ಶಹಾಗಂಜ್ ನಿವಾಸಿ ಮೊಹಮ್ಮದ್ ಸಿರಾಜ್ ಹತ್ಯೆಯಾದ ವ್ಯಕ್ತಿ. ಯಾಸೀನ್‌ ಹತ್ಯೆಗೈದ ಆರೋಪಿ. ಯಾಸೀನ್ ಹಾಗೂ ಸಿರಾಜ್ ಬಾಲ್ಯದ ಸ್ನೇಹಿತರು. ಯಾಸೀನ್​ಗೆ 12 ಲಕ್ಷ ರೂಪಾಯಿ ಸಾಲ‌‌ವನ್ನು ಸಿರಾಜ್ ನೀಡಿದ್ದ ಎನ್ನಲಾಗಿದೆ.

ಇದನ್ನೂ ಓದಿ:ಸೋತು ಸುಣ್ಣವಾದ ವಿಶ್ವಚಾಂಪಿಯನ್.. ಬಾಂಗ್ಲಾದೇಶದ ಕೈಯಲ್ಲಿ ಆಸ್ಟ್ರೇಲಿಯಾ ಭವಿಷ್ಯ​..!

12 ಲಕ್ಷ ರೂಪಾಯಿ ಸಾಲದಲ್ಲಿ 11 ಲಕ್ಷ ರೂಪಾಯಿ ಹಣವನ್ನು ಯಾಸೀನ್ ಮರಳಿ ನೀಡಿದ್ದ. ಇನ್ನುಳಿದ ಒಂದು ಲಕ್ಷ ರೂಪಾಯಿ ಬಾಕಿ ಹಣಕ್ಕಾಗಿ ಸಿರಾಜ್ ಪೀಡಿಸುತ್ತಿದ್ದ. ಇದರಿಂದ ಕೋಪಗೊಂಡಿದ್ದ ಯಾಸೀನ್, ದುಡ್ಡು ಕೊಡ್ತೀನಿ ಬಾ ಎಂದು ಕರೆಯಿಸಿ ಬರ್ಬರವಾಗಿ ಕೊಲೆಗೈದಿದ್ದಾನೆ.

Advertisment

ಮೊದಲು ಸುತ್ತಿಗೆಯಿಂದ ತಲೆಗೆ ಹೊಡೆದು ನಂತರ ಕುತ್ತಿಗೆ ಕೊಯ್ದಿದ್ದಾನೆ ಎನ್ನಲಾಗಿದೆ. ಬೀದರ್ ಜಿಲ್ಲೆಯ ಮನ್ನಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಭೇಟಿ, ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ರಕ್ತ ಚರಿತ್ರೆಯ ಪಟ್ಟಣಗೆರೆ ಶೆಡ್​​​​​​​​​ನಲ್ಲಿ ಮತ್ತೊಂದು ಅನುಮಾನ.. RTO ಅಸ್ತ್ರ ಪ್ರಯೋಗಿಸಿದ ಪೊಲೀಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment