Advertisment

ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ

author-image
Ganesh
Updated On
ಪಾಪಿ ಗಂಡ.. ಹೆಂಡತಿಯ ತಲೆಗೆ ಸ್ಕ್ರೂಡ್ರೈವರ್​ನಿಂದ 20 ಬಾರಿ ಚುಚ್ಚಿಚುಚ್ಚಿ ಸಾಯಿಸಿದ
Advertisment
  • ಫೇಸ್​ಬುಕ್ ಪೋಸ್ಟ್ ವಿಚಾರಕ್ಕೆ ಗಲಾಟೆ, ಆಮೇಲೆ ಆಗಿದ್ದೇ ಬೇರೆ
  • 10 ವರ್ಷದ ಹಿಂದೆ ಮದುವೆ.. ಇಬ್ಬರು ಮುದ್ದಾದ ಮಕ್ಕಳು
  • ತಲೆಯಿಂದ ರಕ್ತ ಸೋರುತ್ತಿದ್ದರೂ ಬಿಡದ ಪತಿ, ಸಾಯಿಸಿಯೇ ಬಿಟ್ಟ

ಉತ್ತರ ಪ್ರದೇಶದ ಮೀರತ್​​ನ ಜೈಭೀಮ್‌ಗರ್​ನಲ್ಲಿ ಬೆಚ್ಚಿ ಬೀಳಿಸುವ ಅಪರಾಧವೊಂದು ನಡೆದಿದೆ. ಪಾಪಿ ಪತಿಯೊಬ್ಬ ಸ್ಕ್ರೂಡ್ರೈವರ್​ನಿಂದ ಪತ್ನಿಯ ತಲೆಗೆ ಚುಚ್ಚಿ ಸಾಯಿಸಿದ ಘಟನೆ ನಡೆದಿದೆ.

Advertisment

ನಡೆದಿದ್ದು ಏನು..?
ದೀಪಾ ಪತಿಯಿಂದಲೇ ಕೊಲೆಯಾದವಳು. ಲಲಿತ್ ಕೊಲೆ ಮಾಡಿದ ಆರೋಪಿತ ಪತಿ. ಪತ್ನಿ ದೀಪಾಳ ಮೇಲೆ ಲಲಿತ್ ಅನುಮಾನ ಪಡುತ್ತಿದ್ದ. ಇದೇ ಅನುಮಾನ ಫೇಸ್​ಬುಕ್​ನಲ್ಲಿ ಫೋಟೋ ಶೇರ್ ಮಾಡುವ ವಿಚಾರಕ್ಕೆ ಗಲಾಟೆ ಆಗಲು ಕಾರಣವಾಗಿದೆ. ಆಗ ಇಬ್ಬರ ಮಧ್ಯೆ ಜೋರಾಗಿ ವಾಗ್ಯುದ್ಧ ನಡೆದಿದೆ. ಆಗ ಸಿಟ್ಟಿಗೆದ್ದ ಲಲಿತ್ ಮನೆಯಲ್ಲಿದ್ದ ಸ್ಕ್ರೂಡ್ರೈವರ್​ ತಂದು ಆಕೆಯ ತಲೆಗೆ ಚುಚ್ಚಿದ್ದಾನೆ. ಅದು ಒಂದಲ್ಲ, ಎರಡಲ್ಲ ಬರೋಬ್ಬರಿ 20ಕ್ಕೂ ಹೆಚ್ಚು ಬಾರಿ ಚುಚ್ಚಿದ್ದಾನೆ.

ಇದನ್ನೂ ಓದಿ:ಕೊಹ್ಲಿ ಟೀಕೆ ಮಾಡೋರಿಗೆ ಏನು ಗೊತ್ತು.. ಈ ಸಾಧನೆಯ ಹತ್ತಿರಕ್ಕೂ ಯಾರು ಸುಳಿದಿಲ್ಲ..!

ಈ ವೇಳೆ ದೀಪಾ ರಕ್ಷಣೆಗಾಗಿ ಜೋರಾಗಿ ಕಿರುಚಿಕೊಂಡಿದ್ದಾಳೆ. ಯಾರೊಬ್ಬರೂ ಆಕೆಯ ಸಹಾಯಕ್ಕೆ ಬಂದಿಲ್ಲ. ತಲೆಯಿಂದ ರಕ್ತ ಒಂದೇ ಸಮನೆ ಸೋರುತ್ತಿದ್ದರೂ ಆರೋಪಿ ಚುಚ್ಚುತ್ತಲೇ ಇದ್ದ ಎನ್ನಲಾಗಿದೆ. ಅಂದ್ಹಾಗೆ ಇವರಿಬ್ಬರು 10 ವರ್ಷಗಳ ಹಿಂದೆ ಮದುವೆ ಆಗಿದ್ದರು. ಇಬ್ಬರಿಗೂ ಮುದ್ದಾದ ಇಬ್ಬರು ಮಕ್ಕಳಿದ್ದರು.

Advertisment

ಆಗಾಗ ಜಗಳ ನಡೆಯುತ್ತಿತ್ತು..!
10 ವರ್ಷಗಳ ಹಿಂದೆ ಮದುವೆ ಆಗಿದ್ದ ಈ ಜೋಡಿ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಜಮೀನು ವಿಚಾರದಲ್ಲಿ ಗಂಡ ಹೆಂಡತಿ ಮಧ್ಯೆ ಗಲಾಟೆ ಆಗುತ್ತಿತ್ತು. ನಂತರದ ದಿನಗಳಲ್ಲಿ ಈತ ಹೆಂಡತಿ ಮೇಲೆಯೇ ಅನುಮಾನ ಪಟ್ಟಿದ್ದ, ಇದು ವಿಕೋಪಕ್ಕೆ ತಿರುಗೆ ಕೊಲೆಯಲ್ಲಿ ಅಂತ್ಯವಾಗಿದೆ.

ಇದನ್ನೂ ಓದಿ:IPL ತಂಡ ಪ್ರಕಟಿಸಿದ ರಾಯಡು.. ಆರ್​ಸಿಬಿಯ ಒಬ್ಬನೇ ಒಬ್ಬ ಆಟಗಾರನಿಗೆ ಸ್ಥಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment