/newsfirstlive-kannada/media/post_attachments/wp-content/uploads/2024/02/NF_CYBER_CRIME_2.jpg)
ತಂತ್ರಜ್ಞಾನ ಹೆಚ್ಚಿದಂತೆ ವಂಚನೆಯ ಪ್ರಕರಣಗಳು ಕೂಡ ಹೊಸಹೊಸ ರೂಪದಲ್ಲಿ ವರದಿಯಾಗುತ್ತಿವೆ. ತಂತ್ರಜ್ಞಾನಕ್ಕೆ ತಕ್ಕಂತೆ ವಂಚಕರು ಅಪ್​​ಗ್ರೇಡ್ ಆಗುತ್ತಿದ್ದಾರೆ.
ನ.25ರ ಸೋಮವಾರದಂದು ದೆಹಲಿಯಿಂದ ಹೊಸ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಕಸ್ಟಮರ್ ಕೇರ್​ಗೆ ಕರೆ ಮಾಡಿದ್ದಾರೆ. ಇದಾದ ಬಳಿಕ ವ್ಯಕ್ತಿಯೊಬ್ಬರ ಅಕೌಂಟ್​ನಿಂದ 3 ಲಕ್ಷ ರೂ. ಕಡಿತವಾಗಿದೆ.
ದೆಹಲಿಯ ಭಗವಾನ್​ಸಿಂಗ್​ ಏರ್​ಟೆಲ್​ನ ಎಕ್ಸ್​ಟ್ರೀಮ್ ಫೈಬರ್ ಇಂಟರ್​ನೆಂಟ್ ಬಳಕೆ ಮಾಡುತ್ತಿದ್ದಾಗ ಕಸ್ಟಮರ್ ಕೇರ್​ಗೆ ಕರೆ ಮಾಡಬೇಕು ಅನಿಸಿದೆ. ಇಂಟರ್​ನೆಟ್​ನಲ್ಲಿ ಏರ್​ಟೆಲ್ ಎಕ್ಸ್​ಸ್ಟ್ರೀಮ್ ಫೈಬರ್ ಕಸ್ಟಮರ್ ಕೇರ್ ನಂಬರ್ ಹುಡುಕಿದ್ದಾರೆ. ಗೂಗಲ್​ನಲ್ಲಿ ಸಿಕ್ಕ ನಂಬರ್ ಟ್ರೂ ಕಾಲರ್ ಆ್ಯಪ್​ನಲ್ಲೂ ಸರ್ಚ್ ಮಾಡಿದ್ದಾರೆ. ಅಲ್ಲಿ ’ಕಸ್ಟಮರ್ ಕೇರ್ ನಂಬರ್’ ಅಂತ ತೋರಿಸಿದೆ.
/newsfirstlive-kannada/media/post_attachments/wp-content/uploads/2024/11/Frauad.jpg)
ಇದಾದ ಬಳಿಕ ಕಸ್ಟಮರ್ ಕೇರ್​ ಗೆ ಕಾಲ್ ಮಾಡಿದ್ದಾರೆ. ಅಲ್ಲಿ ತನ್ನ ಸಮಸ್ಯೆ ಹೇಳಿಕೊಂಡಿದ್ದಾರೆ. ಆಗ ಕಸ್ಟಮರ್ ಕೇರ್ ಎಕ್ಸಿಕ್ಯೂಟಿವ್ ಸಂಪೂರ್ಣ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಗ್ರಾಹಕ ಸೇವಾ ಪ್ರತಿನಿಧಿ ಜೊತೆ ಮಾತಾಡುವಾಗ ಅಗತ್ಯ ವಿವರಗಳನ್ನು ನೀಡಿದ್ದಾರೆ. ಬಳಿಕ ಅವರು OTP ಕೇಳಿದ್ದಾರೆ. ಆಗ ಭಗವಾನ್ ಸಿಂಗ್ ಓಟಿಪಿ ನೀಡಿದ್ಧಾರೆ. ಎಕ್ಸಿಕ್ಯೂಟಿವ್ ಜೊತೆ ಮಾತನಾಡಿದ ಕೆಲ ಹೊತ್ತಿನ ಬಳಿಕ ಬ್ಯಾಂಕ್​ನಿಂದ ಭಗವಾನ್ ಸಿಂಗ್ ಮೊಬೈಲ್​ಗೆ 3 ಸಂದೇಶ ಬಂದಿವೆ. ಆ ಮೆಸೇಜ್ ಓದಿದ ನಂತರ ಭಗವಾನ್ ಸಿಂಗ್​ಗೆ ತಾನು ಮೋಸ ಹೋಗಿದ್ದು ಗೊತ್ತಾಗಿದೆ.
ಭಗವಾನ್ ಸಿಂಗ್ ಮೊಬೈಲ್​ಗೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕಡಿತಗೊಳಿಸಲಾಗಿದೆ ಅಂತ ಮೆಸೇಜ್ ಬಂದಿದೆ. ಭವಾನ್ ಸಿಂಗ್ ಖಾತೆಯಿಂದ ಮೂರು ಬಾರಿ 98,710 ರೂ. ಕಡಿತಗೊಳಿಸಲಾಗಿದೆ. ಎರಡು ವರ್ಗಾವಣೆ ಐಎಂಪಿಎಸ್​ ಮೂಲಕ ಮತ್ತು ಒಂದು ಬಾರಿ ಹಣ ವರ್ಗಾವಣೆ ಯುಪಿಐ ಮೂಲಕ ವರ್ಗಾವಣೆಯಾದ ಬಗ್ಗೆ ಸಂದೇಶ ಬಂದಿದೆ.
/newsfirstlive-kannada/media/post_attachments/wp-content/uploads/2023/11/cyber.jpg)
ಭಗವಾನ್ ಸಿಂಗ್ ಖಾತೆಯಿಂದ ಒಟ್ಟು 2.96 ಲಕ್ಷ ರೂ. ವರ್ಗಾವಣೆಯಾಗಿದೆ. ಈ ಬಗ್ಗೆ ಐಸಿಐಸಿಐ ಬ್ಯಾಂಕ್​ಗೂ ಮಾಹಿತಿ ನೀಡಿರುವ ಭಗವಾನ್ ಸಿಂಗ್ ರಾಷ್ಟ್ರೀಯ ಸೈಬರ್ ಕ್ರೈಂ ರಿಪೋರ್ಟಿಂಗ್ ಪೋರ್ಟಲ್​ನಲ್ಲೂ ದೂರು ದಾಖಲಿಸಿದ್ದಾರೆ.
ಸಾಮಾನ್ಯವಾಗಿ ಕಂಪನಿಗಳು ಗ್ರಾಹಕನ ಅನುಕೂಲಕ್ಕೆ ಅಪ್ಲಿಕೇಷನ್​ಗಳಲ್ಲಿ ಕಸ್ಟಮರ್ ಕೇರ್ ನಂಬರ್ ಒದಗಿಸುತ್ತವೆ. ಆದರೆ ಭಗವಾನ್ ಸಿಂಗ್ ಗೂಗಲ್​ನಲ್ಲಿ ಕಸ್ಟಮರ್ ಕೇರ್ ನಂಬರ್ ಹುಡುಕಿ ಮೋಸ ಹೋಗಿದ್ದಾರೆ. ಅಚ್ಚರಿಯ ವಿಷಯವೆಂದರೆ ಟ್ರೂ ಕಾಲರ್​ನಲ್ಲಿಯೂ ಈ ನಕಲಿ ಸಂಖ್ಯೆಯನ್ನು ಏರ್​​ಟೆಕ್ ಎಕ್ಸ್​ಸ್ಟ್ರೀಮ್ ಫೈಬರ್ ಗ್ರಾಹಕ ಸೇವೆಯ ಹೆಸರಲ್ಲಿ ಪತ್ತೆಯಾಗಿದೆ.
ಸೈಬರ್ ಫ್ರಾಡ್​ನಿಂದ ರಕ್ಷಿಸಿಕೊಳ್ಳಿ
ಇದನ್ನೂ ಓದಿ:ತಾಯಿಯನ್ನು ಖುಷಿ ಪಡಿಸಲು ಹೋಗಿ ಪೊಲೀಸರ ಅತಿಥಿಯಾದ ನಿರುದ್ಯೋಗ ಯುವತಿ? ಅಸಲಿಗೆ ಆಗಿದ್ದೇನು?
ಅಂತರ್ಜಾಲದಲ್ಲಿ ಕಂಡು ಬರುವ ಯಾವುದೇ ಸಂಖ್ಯೆ ಅಥವಾ ಮಾಹಿತಿಯನನು ಕುರುಡಾಗಿ ನಂಬಬೇಡಿ. ಇದು ಸೈಬರ್ ವಂಚಕರ ಸಂಖ್ಯೆಗಳಾಗಿರಬಹುದು. ಇದರ ಮೂಲಕ ನಿಮ್ಮಿಂದ ಓಟಿಪಿ ಪಡೆದು ನಿಮ್ಮ ಕಣ್ಣಿಗೆ ಮಣ್ಣೆರಚಬಹುದು. ಸೈಬರ್ ವಂಚಕರು ಇಂತಹ ಲಿಂಕ್​ಗಳ ಮೂಲಕವೂ ಫೋನ್ ಅಥವಾ ನಿಮ್ಮ ಬ್ಯಾಂಕ್​ ಖಾತೆ ಹ್ಯಾಕ್ ಮಾಡಿರುವ ಹಲವು ಉದಾಹರಣೆ ನಮ್ಮ ಮುಂದಿವೆ
ಹಾಗಾಗಿ ಹಲವು ಬಾರಿ ಬ್ಯಾಂಕ್​ಗಳು, ಟ್ರಾಯ್​ನಿಂದಲೂ ಎಚ್ಚರಿಕೆ ಸಂದೇಶಗಳು ಬರುತ್ತಿರುತ್ತವೆ. ಬ್ಯಾಂಕ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅದರಲ್ಲೂ ತಪ್ಪಾಗಿಯೂ ಓಟಿಪಿ ಹಂಚಿಕೊಳ್ಳಬೇಡಿ. ಅಥವಾ ನಿಮ್ಮ ಮೊಬೈಲ್​ಗೆ ಬಂದ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡಲು ಹೋಗಬೇಡಿ ಎಂಬ ಎಚ್ಚರಿಕೆ ಸಂದೇಶ ಕಳಿಸುತ್ತಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us