ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ

author-image
Bheemappa
Updated On
ಜಸ್ಟ್​ ಗುರಾಯಿಸಿದ್ಕೆ.. ಬಿಯರ್ ಬಾಟಲ್​ಗಳಿಂದ ತಲೆಗೆ ಹೊಡೆದು ವ್ಯಕ್ತಿಯ ಭೀಕರ ಕೊಲೆ
Advertisment
  • ಬಾರ್​ನಲ್ಲಿ ಗುರಾಯಿಸಿದ್ದಕ್ಕೆ ಬಿಯರ್ ಬಾಟಲ್ಸ್​​ನಿಂದ ಹೊಡೆದ್ರು
  • ಕೆಲಸ ಮಾಡಿ ಸಂಜೆ ವೇಳೆ ಕುಡಿಯಲು ಬಂದ ವ್ಯಕ್ತಿ ಮೇಲೆ ಹಲ್ಲೆ
  • ಮದ್ಯದ ಬಾಟಲಿಗಳಿಂದ ಹೊಡೆದು ವ್ಯಕ್ತಿಯ ಬರ್ಬರ ಕೊಲೆ

ಬೆಂಗಳೂರು: ಬಾರ್​​ನಲ್ಲಿ​ ಕುಳಿತು ಮದ್ಯಪಾನ ಮಾಡುವಾಗ ಗುರಾಯಿಸುತ್ತಿದ್ದಾನೆಂದು ವ್ಯಕ್ತಿಯೊಬ್ಬನ ತಲೆಗೆ ಬಿಯರ್ ಬಾಟಲ್​ಗಳಿಂದ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ. ನಗರದ ಹೊರವಲಯದ ಬನ್ನೇರುಘಟ್ಟ ಸಮೀಪದ ಕಲ್ಕೆರೆ ನೈಟ್ ಸಫಾರಿ ಬಾರ್​ನಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:LK Advani : ಬಿಜೆಪಿ ಹಿರಿಯ ನಾಯಕ, ಭಾರತ ರತ್ನ ಪುರಸ್ಕೃತ ಅಡ್ವಾಣಿ ತಡರಾತ್ರಿ ಆಸ್ಪತ್ರೆಗೆ ದಾಖಲು

publive-image

ಹರ್ಷವರ್ಧನ್ (35) ಕೊಲೆಯಾದ ವ್ಯಕ್ತಿ. ಸಂಜೆ ಸಮಯದಲ್ಲಿ ಮದ್ಯಪಾನ ಮಾಡಲೆಂದು ಬಾರ್​ಗೆ ಹೋಗಿದ್ದಾನೆ. ಇದೇ ವೇಳೆ ಪಕ್ಕದ ಟೇಬಲ್​ನಲ್ಲಿ ಕುಳಿತು ಮತ್ತಿಬ್ಬರು ಮದ್ಯಪಾನ ಮಾಡುತ್ತಿದ್ದರು. ಆಗ ಒಬ್ಬರನ್ನ ಒಬ್ಬರು ನೋಡಿದ್ದಾರೆ. ಇಷ್ಟಕ್ಕೆ ಯಾಕೋ ಗುರಾಯಿಸುತ್ತಿದ್ದೀಯಾ ಎಂದು ಗಲಾಟೆ ಮಾಡಿದ್ದಾರೆ.

ಬಳಿಕ ಮದ್ಯದ ಬಾಟಲ್ಸ್ ಹಾಗೂ ಬಿಯರ್​ ಬಾಟಲ್​ಗಳಿಂದ ವ್ಯಕ್ತಿ ತಲೆಗೆ ಹೊಡೆದಿದ್ದಾರೆ. ಇದರಿಂದ ಗಂಭೀರವಾಗಿ ಗಾಯಗೊಂಡ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಓರ್ವ ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment