ಆನ್​​ಲೈನ್​ನಲ್ಲಿ ಪರಿಚಯ; ಮದುವೆ ಮಾಡಿಕೊಳ್ಳೋದಾಗಿ ಯುವತಿಯನ್ನ ದೈಹಿಕವಾಗಿ ಬಳಸಿಕೊಂಡ ಆರೋಪ

author-image
Ganesh Nachikethu
Updated On
ಆನ್​​ಲೈನ್​ನಲ್ಲಿ ಪರಿಚಯ; ಮದುವೆ ಮಾಡಿಕೊಳ್ಳೋದಾಗಿ ಯುವತಿಯನ್ನ ದೈಹಿಕವಾಗಿ ಬಳಸಿಕೊಂಡ ಆರೋಪ
Advertisment
  • ಆನ್​ಲೈನ್​ ಡೇಟಿಂಗ್​ನಲ್ಲಿ ಮೋಸ ಹೋಗೋದು ಸಾಮಾನ್ಯ!
  • ಮದುವೆ ಆಗೋದಾಗಿ ನಂಬಿಸಿ ಮೋಸ ಮಾಡಿದ ಕೇಸ್​ ದಾಖಲು
  • ಸೋಷಿಯಲ್​ ಮೀಡಿಯಾ ಬಳಸೋ ಹೆಣ್ಣುಮಕ್ಕಳೇ ಎಚ್ಚರ! ಎಚ್ಚರ!

ಬೆಂಗಳೂರು: ಆನ್​ಲೈನ್​ ಡೇಟಿಂಗ್​​, ರಿಲೇಷನ್​ಶೀಪ್​​ ಎಲ್ಲಾವೂ ಈಗ ಸರ್ವೇಸಾಮಾನ್ಯ. ಸೋಷಿಯಲ್​​ ಮೀಡಿಯಾ ಜಮಾನದಲ್ಲಂತೂ ಬರೀ ಫೇಕ್​​. ಯಾರದ್ದೋ ಫೋಟೋ ಹಾಕಿ ಯಾರದ್ದೋ ಹೆಸರಲ್ಲಿ ಫೇಕ್​ ಅಕೌಂಟ್​ ಕ್ರಿಯೇಟ್​ ಮಾಡ್ತಾರೆ. ಈ ಫೇಕ್​ ಅಕೌಂಟ್​​ ನೋಡಿದ ಜನ ಹುಡುಗಿ ಚೆನ್ನಾಗಿದ್ದಾಳೆ ಎಂದು ಕನೆಕ್ಟ್​ ಆಗಿ ಬಿಡುತ್ತಾರೆ. ಆಮೇಲೆ ಗೊತ್ತಾಗೋದು ಅವರ ಫೇಕ್​ ಅನ್ನೋ ಬಲೆಗೆ ಬಿದ್ದಿದ್ದಾರೆ ಎಂದು.

ಈಗ ಇಂಥದ್ದೇ ಒಂದು ಕೇಸ್​ ಬೆಂಗಳೂರಲ್ಲಿ ನಡೆದಿದೆ. ಮಡಿವಾಳ ಪೊಲೀಸ್​ ಠಾಣೆ ಮೆಟ್ಟಿಲೇರಿದ ಯುವತಿ ಒಬ್ಬಳು ಆನ್​ಲೈನ್​ ಲವ್​ ಸೆಕ್ಸ್​ ದೋಖಾ ಕೇಸ್​ ದಾಖಲು ಮಾಡಿದ್ದಾರೆ. ಮದುವೆ ಆಗೋದಾಗಿ ಹೇಳಿ ತನ್ನನ್ನು ಬಳಸಿಕೊಂಡಿದ್ದಾಗಿ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.

ಏನಿದು ಕೇಸ್​​?

ಮದುವೆಯಾಗುವುದಾಗಿ ನಂಬಿಸಿ ಅತ್ಯಚಾರ ಎಸಗಿದ ಆರೋಪ
ಡೇಟಿಂಗ್ ಆ್ಯಪ್​​​ನಲ್ಲಿ‌ ನಿಹಾಲ್ ಹುಸೇನ್ ಮತ್ತು ಯುವತಿ ಪರಿಚಯ
ಮಾರ್ಚ್​​​​ನಲ್ಲಿ ಯುವತಿಗೆ ಪರಿಚಯವಾಗಿದ್ದ ಯುವಕ ನಿಹಾಲ್ ಹುಸೇನ್
ಅದೇ ತಿಂಗಳು ಪಾರ್ಟಿಗೆಂದು ಹೋಟೆಲ್​​ಗೆ ಕರೆಸಿ ಅತ್ಯಾಚಾರ ಆರೋಪ
ಜ್ಯೂಸ್​ನಲ್ಲಿ ಮದ್ಯ ಬೆರೆಸಿ ಅತ್ಯಾಚಾರ ಎಸಗಿದ ಆರೋಪ ಕೇಳಿ ಬಂದಿದೆ
ಗರ್ಭಿಣಿ ಮಾಡಿ ಅಬಾರ್ಷನ್ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖ
ಮೇ ತಿಂಗಳಲ್ಲಿ ಅಬಾರ್ಷನ್ ಮಾಡಿಸಿರೋದಾಗಿ ಹೇಳಿರುವ ಯುವತಿ
ಮದುವೆ ಆಗುವಂತೆ ಕೇಳಿದ್ರೆ ಯುವತಿಗೆ ಹಲ್ಲೆ ಮಾಡಿರೋದಾಗಿ ಆರೋಪ
ಪೊಲೀಸ್ ತನಿಖೆಯಲ್ಲಿ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ
2023ರಲ್ಲಿ ಇದೇ ರೀತಿ ಬೇರೆ ಯುವಕನ ವಿರುದ್ಧ ದೂರು ನೀಡಿದ್ದ ಯುವತಿ
ಯಾಕೆ ಎರಡೆರಡು ಬಾರಿ ಕಂಪ್ಲೇಂಟ್ ಕೊಟ್ಟಿದ್ದಾಳೆ ಎಂದು ಪರಿಶೀಲನೆ
ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿರುವ ಮಡಿವಾಳ ಪೊಲೀಸರು

ಇದನ್ನೂ ಓದಿ:ನನ್ನ ಕತ್ತು ಏಕೆ ಕಪ್ಪು? ಪ್ರಶ್ನೆ ಕೇಳಿ, ಕೇಳಿ ಸಾಕಾಯ್ತಾ? ಕುತ್ತಿಗೆಯ ಬ್ಲ್ಯಾಕ್​ಹೆಡ್ಸ್​ಗೆ ಮನೆಮದ್ದು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment