newsfirstkannada.com

ಎಣ್ಣೆ ನೀಡದಿದ್ದಕ್ಕೆ ಬಾರ್​​ನಲ್ಲೇ ಗುಂಡಿಟ್ಟು ಬರ್ಬರವಾಗಿ ಕೊಂದ ಹಂತಕ.. ಅಸಲಿಗೆ ಆಗಿದ್ದೇನು?

Share :

Published May 27, 2024 at 4:36pm

  ಮದ್ಯ ನೀಡದ ಕಾರಣಕ್ಕೆ ಕೋಪಗೊಂಡ ಕಿಡಿಗೇಡಿಗಳ ಗುಂಪು

  ಬಾರ್​ನಲ್ಲೇ ಸಿಬ್ಬಂದಿಗೆ ಗುಂಡಿಟ್ಟು ಕೊಂದು ಹಾಕಿದ ಹಂತಕರು!

  ಶಾರ್ಟ್ಸ್ ಧರಿಸಿ ಬಾರ್‌ಗೆ ನುಗ್ಗಿದ ಶೂಟರ್​​​ ಗುಂಡು ಹಾರಿಸಿ ಹತ್ಯೆ

ರಾಂಚಿ: ಮದ್ಯ ನೀಡದ ಕಾರಣಕ್ಕೆ ಕೋಪಗೊಂಡ ಹಂತಕನೋರ್ವ ಡಿಜೆಗೆ ಗುಂಡಿಟ್ಟು ಕೊಂದಿರೋ ಘಟನೆ ಜಾರ್ಖಾಂಡ್​ ರಾಜಧಾನಿ ರಾಂಚಿಯಲ್ಲಿ ನಡೆದಿದೆ. ಶಾರ್ಟ್ಸ್ ಧರಿಸಿ ಬಾರ್‌ಗೆ ನುಗ್ಗಿದ ಶೂಟರ್​​​ ಮದ್ಯ ನೀಡದಿದ್ದಕ್ಕೆ ಡಿಜೆ ಮೇಲೆ ಗುಂಡು ಹಾರಿಸಿ ಹತ್ಯೆಗೈದಿರೋ ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಸಲಿಗೆ ಆಗಿದ್ದೇನು..?

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬಾರ್​​ ಮುಚ್ಚುವ ಸಮಯ. ಈ ಸಂದರ್ಭದಲ್ಲಿ ಬಾರ್​​ಗೆ ಬಂದ ನಾಲ್ವರು ಮದ್ಯ ನೀಡುವಂತೆ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಬಾರ್​ ಅವಧಿ ಮುಗಿದ ಕಾರಣ ಸಿಬ್ಬಂದಿ ಮದ್ಯ ನೀಡಲು ನಿರಾಕರಿಸಿದ್ರು. ಆಗ ಸಿಬ್ಬಂದಿ, ಹಂತಕರ ಮಧ್ಯೆ ವಾಗ್ವಾದ ನಡೆದು ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ. ಒಬ್ಬ ಕಿಡಿಗೇಡಿ ರೈಫಲ್ ತಂದು ಡಿಜೆ ಎದೆಗೆ ಗುಂಡು ಹಾರಿಸಿ ಕೊಂದು ಹಾಕಿದ್ದಾನೆ.

ಸದ್ಯ ಶೂಟ್​ ಮಾಡಿದ ಆರೋಪಿ ಎಸ್ಕೇಪ್​ ಆಗಿದ್ದು, ಈತನಿಗಾಗಿ ಪೊಲೀಸ್ರು ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದಾರೆ. ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಇನ್ನೂ ಯಾರ ಬಂಧನವಾಗಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: BREAKING: ಕೊನೆಗೂ ಪ್ರತ್ಯಕ್ಷವಾದ ಪ್ರಜ್ವಲ್ ರೇವಣ್ಣ; ವಾಪಸ್ ಬರೋದು ಯಾವಾಗ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಣ್ಣೆ ನೀಡದಿದ್ದಕ್ಕೆ ಬಾರ್​​ನಲ್ಲೇ ಗುಂಡಿಟ್ಟು ಬರ್ಬರವಾಗಿ ಕೊಂದ ಹಂತಕ.. ಅಸಲಿಗೆ ಆಗಿದ್ದೇನು?

https://newsfirstlive.com/wp-content/uploads/2024/05/crime-news_123.jpg

Load More