/newsfirstlive-kannada/media/post_attachments/wp-content/uploads/2025/03/OMAN-Ambassador.jpg)
ತನ್ನನ್ನು ತಾನು ಒಮನ್ನ ರಾಯಭಾರಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಉತ್ತರಪ್ರದೇಶದ ಘಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಅವನ ಐಷಾರಾಮಿ ಮರ್ಸಿಡಿಜ್ ಬೆಂಜ್ನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.
ವ್ಯಕ್ತಿಯ ಮರ್ಸಿಡಿಸ್ ಬೆಂಜ್ ಕಾರಿನ ಜೊತೆಗೆ ಸುಮಾರು 46 ವಿಸಿಟಿಂಗ್ ಕಾರ್ಡ್ಗಳನ್ನು ಕೂಡ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 66 ವರ್ಷದ ಶೇಖರ್ ರಾಣಾ ಎಂಬ ದೆಹಲಿಯ ಅಮರ ಕಾಲೋನಿ ವ್ಯಕ್ತಿಯು ತನ್ನನ್ನು ತಾನು ಒಮನ್ ದೇಶದ ರಾಯಭಾರಿ ಎಂದು ಹೇಳಿಕೊಂಡು ತಿರುಗುತ್ತಿದ್ದ. ಸದ್ಯ ಈತ ಘಾಜಿಯಾಬಾದ್ ಪೊಲೀಸರ ಅತಿಥಿಯಾಗಿದ್ದಾನೆ.
ಇದನ್ನೂ ಓದಿ:ಹಿಂದಿ ಹೇರಿಕೆ ಸಮರ್ಥಿಸಿದ ಪವನ್ ಕಲ್ಯಾಣ್.. ತಮಿಳು ಸಿನಿಮಾ ತಾರೆಯರ ವಿರುದ್ಧ ಬೊಟ್ಟು ತೋರಿದ DCM
ಸದ್ಯ ಶೇಖರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಟ್ರಾನ್ಸ್ ಹಿಂಡೋನ್ನ ಡಿಸಿಪಿ ನಿಮಿಷ್ ಪಟೇಲ್ ಹೇಳಿದ್ದಾರೆ. ಡಿಸಿಪಿ ಪಾಟೀಲ್ ಅವರು ಹೇಳುವ ಪ್ರಕಾರ ಶೇಖರ್ ರಾಣಾ ಆಗ್ರಾದ ಕಾಲೇಜ್ವೊಂದರಲ್ಲಿ ಪ್ರಾಣಿಶಾಸ್ತ್ರ ಪಾಠ ಮಾಡುತ್ತಿದ್ದ ಪ್ರೊಫೇಸರ್. ಅದು ಅಲ್ಲದೇ ಈತ ತನ್ನದೇ ಆದ ಕೃಷ್ಣ ಕಾಲೇಜ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಎಂಬ ಕಾಲೇಜನ್ನು ಆಗ್ರಾದಲ್ಲಿ ಹೊಂದಿದ್ದಾನೆ. ಅಲ್ಲದೇ ರಾಜಸ್ಥಾನದಲ್ಲಿ ಇವನ ಹೆಸರಲ್ಲಿ ಒಂದು ರೆಸಾರ್ಟ್ ಕೂಡ ಇದೆಯಂತೆ.
ಇದನ್ನೂ ಓದಿ:UKG, 1ನೇ ತರಗತಿ ಓದುತ್ತಿದ್ದ ಇಬ್ಬರು ಮಕ್ಕಳನ್ನು ಬಕೆಟ್ ನೀರಲ್ಲಿ ಮುಳುಗಿಸಿ ಕೊಂದ ಅಪ್ಪ!
ಕೆಲಸದಿಂದ ನಿವೃತ್ತಿಯಾದ ಬಳಿಕ ಆರೋಪಿಯು 2015 ರಿಂದ 2018ರವರೆಗೂ ಕೇಂದ್ರ ಪರಿಸರ ಸಚಿವಾಲಯದಲ್ಲಿಯೂ ಕಾರ್ಯ ನಿರ್ವಹಿಸಿದ್ದೆ ಎಂದು ಹೇಳಿದ್ದಾನೆ. ಆದ್ರೆ ಪೊಲೀಸರಿಗೆ ಈ ಬಗ್ಗೆ ಇನ್ನೂ ಯಾವುದೇ ಸ್ಪಷ್ಟವಾದ ಉತ್ತರ ಸಚಿವಾಲಯದಿಂದ ಬಂದಿಲ್ಲ.ಇನ್ನು ಪೊಲೀಸರ ವಿಚಾರಣೆಯ ವೇಳೆ ತಿಳಿದು ಬಂದ ಮತ್ತೊಂದು ವಿಷಯವೆನೇಂದರೆ ಈತ ಒಟ್ಟು ನಾಲ್ಕು ವಿಶ್ವವಿದ್ಯಾಲಯಗಳಲ್ಲಿ ಉಪ ಕುಲಪತಿಯಾಗಿದ್ದಾನೆ ಎಂದು ಕೂಡ ತಿಳಿದು ಬಂದಿದೆ.
ಕೆಸ್ ರಾಣಾ ತನ್ನನ್ನು ತಾನು ಒಮನ್ನ ಹೈ ಕಮೀಷನರ್ ಎಂದು ಹೇಳಿಕೊಂಡು ತಿರುಗಾಡುತ್ತಿದ್ದನಂತೆ. ಭಾರತದಲ್ಲಿರುವ ಜಿಸಿಸಿ ಎನ್ಜಿಒ ಒಂದರಲ್ಲಿ ಟ್ರೇಡ್ ಕೌನ್ಸಿಲ್ ಆಗಿ ಕಾರ್ಯ ನಿರ್ವಹಿಸಲು ತನ್ನನ್ನು ತಾನು ಒಮನ್ ದೇಶದ ಭಾರತೀಯ ರಾಯಭಾರಿ ಎಂದು ಸುಳ್ಳು ಹೇಳಿದ್ದಾನೆ ಹಾಗೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾನೆ.
ಈತ ಪ್ರೊಟೊಕಾಲ್ಗೋಸ್ಕರ ಘಾಜಿಯಾಬಾದ್ ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದ. ಅವನಿಗೆ ಪ್ರೊಟೊಕಾಲ್ ನೀಡಲಾಗಿತ್ತು. ಆದ್ರೆಆ ವೇಳೆ ಆತ ಸಲ್ಲಿಸಿದ ದಾಖಲೆಗಳ ಮೇಲೆ ಪೊಲೀಸರಿಗೆ ಸಂಶಯ ಬಂದಿದೆ. ಇದೇ ಆಧಾರದ ಮೇಲೆ ಇವನ ಜಾಲವನ್ನು ಬೆನ್ನಟ್ಟಿ ಹೋದಾಗ ಅಸಲಿ ಸತ್ಯ ಹೊರಬಂದಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ