newsfirstkannada.com

Watch: ಶಾಪಿಂಗ್ ಮಾಲ್​ನಲ್ಲಿ ‘ಕ್ಯೂಟ್ LOVE’ ಪ್ರಪೋಸಲ್; ‘ಹಳೇ ಉಂಗುರ’ ತೆಗೆದು ಚರ್ಚೆ ಹುಟ್ಟುಹಾಕಿದ ಸುಂದರಿ..!

Share :

28-08-2023

    ಶಾಪಿಂಗ್ ಮಾಲ್​ನಲ್ಲಿದ್ದ ಜನ ಒಂದು ಕ್ಷಣಕ್ಕೆ ಅಚ್ಚರಿ

    ತುಂಬಾ ಮುದ್ದಾಗಿದೆ ಪ್ರೇಮಿಗಳ ಪ್ರೇಮ ನಿವೇದನೆ

    ಪ್ರಪೋಸ್ ಮಾಡಿದ ಕ್ಯೂಟ್ ವಿಡಿಯೋ ಇಲ್ಲಿದೆ

ಕೆಲವರ ಮನಸ್ಸನ್ನು ಗೆಲ್ಲೋಕೆ ಜನ ನೂರೆಂಟು ಸರ್ಕಸ್ ಮಾಡ್ತಾರೆ. ಅದರಲ್ಲೂ ಪ್ರೀತಿ ವಿಚಾರಕ್ಕೆ ಬಂದರೆ ತುಂಬಾನೇ ಭಿನ್ನವಾಗಿರುತ್ತದೆ. ಹೆಂಗಾದರೂ ಮಾಡಿ ಪಟಾಯಿಸಬೇಕು ಅನ್ನೊದು ಪ್ರಿಯತಮೆ ಅಥವಾ ಪ್ರಿಯಕರನ ಮನದಾಸೆ. ಕೆಲವೊಮ್ಮೆ ಎಲ್ಲವೂ ನಾವು ಅಂದುಕೊಂಡಂತೆ ಆಗಲ್ಲ.

ಆದರೆ ಇಲ್ಲೊಬ್ಬ ಪ್ರಿಯಕರ ತಮ್ಮ ಪ್ರಿಯತಮೆಗೆ ಮಾಲ್​​ನಲ್ಲಿ ಲವ್ ಪ್ರಪೋಸ್ ಮಾಡಿ ಗೆದ್ದಿದ್ದಾನೆ. ವಿಶೇಷ ಅಂದರೆ ತನ್ನ ಮನದ ಇಂಗಿತವನ್ನು ಹೇಳಿಕೊಳ್ಳಲು ಆಯ್ಕೆ ಮಾಡಿಕೊಂಡಿದ್ದು ಶಾಪಿಂಗ್ ಮಾಲ್. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ, ಮಾಲ್​​ಗೆ ಎಂಟ್ರಿ ಆಗುತ್ತಾನೆ. ತನ್ನ ಮುಂದೆ ಹೋಗುತ್ತಿದ್ದ ಪ್ರಿಯತಮೆಯನ್ನು ಕರೆದು ಮಂಡಿಬಗ್ಗಿ ಪ್ರಪೋಸ್ ಮಾಡಿದ್ದಾನೆ.

ಇದರಿಂದ ಆಚ್ಚರಿಗೆ ಒಳಗಾದ ಪ್ರಿಯತಮೆ, ನಾಚಿಕೊಂಡು ಮೆಲ್ಲನೆ ನಗುತ್ತ ಬರುತ್ತಾಳೆ. ಕೊನೆಗೆ ರಿಂಗ್ ತೊಡಿಸಲು ಬೆರಳನ್ನು ನೀಡುತ್ತಾಳೆ. ಖುಷಿಯಾದ ಪ್ರಿಯಕರೆ ಆಕೆಯ ಬೆರಳಿಗೆ ರಿಂಗ್ ಹಾಕುತ್ತಾನೆ. ಅಲ್ಲಿದ್ದವರೆಲ್ಲ ಅಚ್ಚರಿಗೆ ಒಳಗಾಗಿ ಅವರಿಬ್ಬರನ್ನೇ ನೋಡುತ್ತ ನಿಂತಿದ್ದರು. ಈ ವಿಡಿಯೋವನ್ನು ಪ್ರಿಯಾಂಶಿ ಅನ್ನೋರು ಇನ್​ಸ್ಟಾಗ್ರಾಮ್​​​ನಲ್ಲಿ ಹಾಕಿಕೊಂಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಇಂಪ್ರೆಸ್​ ಮಾಡಿದೆ. ಕೆಲವೊಬ್ಬರು ಇದೊಂದು ಮುದ್ದಾದ ಜೋಡಿ ಎಂದು ಕರೆದಿದ್ದಾರೆ. ಇನ್ನು ಕೆಲವರು, ಆತನ ಪ್ರಿಯತಮೆ ತುಂಬಾ ಕ್ಯೂಟ್ ಆಗಿದ್ದಾಳೆ. ಯಾವುದೇ ಓವರ್​ ಆ್ಯಕ್ಟ್ ಮಾಡಲಿಲ್ಲ. ನ್ಯಾಚುರಲ್ ಆಗಿದ್ದಾಳೆ. ಇಷ್ಟ ಆಯಿತು ಎಂದಿದ್ದಾರೆ. ಇನ್ನೊಂದು ವಿಚಾರ ಏನಂದರೆ ಆತ, ರಿಂಗ್ ತೊಡಿಸುವ ವೇಳೆ ಆಕೆ ಹಳೆಯ ರಿಂಗ್ ತೆಗೆದು ಕೈಯಲ್ಲಿ ಹಿಡಿದುಕೊಂಡಿರುತ್ತಾಳೆ. ಹಳೇ ರಿಂಗ್ ತೆಗೆದು ಹೊಸ ರಿಂಗ್ ಹಾಕಿಸಿಕೊಂಡ ಹಿನ್ನೆಲೆಯಲ್ಲಿ ಕೆಲವರು ತಮ್ಮದೇ ಶೈಲಿಯಲ್ಲಿ ಅರ್ಥೈಸಿಕೊಂಡು ಕಮೆಂಟ್ ಮಾಡಿದ್ದಾರೆ.

View this post on Instagram

A post shared by 💕 Priyanshi💕 (@pari_sachdeva_)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Watch: ಶಾಪಿಂಗ್ ಮಾಲ್​ನಲ್ಲಿ ‘ಕ್ಯೂಟ್ LOVE’ ಪ್ರಪೋಸಲ್; ‘ಹಳೇ ಉಂಗುರ’ ತೆಗೆದು ಚರ್ಚೆ ಹುಟ್ಟುಹಾಕಿದ ಸುಂದರಿ..!

https://newsfirstlive.com/wp-content/uploads/2023/08/LOVE-2.jpg

Load More