ಕೋಟಿ ಕೊಟ್ಟರು ಮನೆ ಬಿಟ್ಟಿರಲಾರೆ ಎಂದ ವ್ಯಕ್ತಿ; ಹೆದ್ದಾರಿಯ ಮಧ್ಯದಲ್ಲಿಯೇ ವಾಸ, ನಿವಾಸ

author-image
Gopal Kulkarni
Updated On
ಕೋಟಿ ಕೊಟ್ಟರು ಮನೆ ಬಿಟ್ಟಿರಲಾರೆ ಎಂದ ವ್ಯಕ್ತಿ; ಹೆದ್ದಾರಿಯ ಮಧ್ಯದಲ್ಲಿಯೇ ವಾಸ, ನಿವಾಸ
Advertisment
  • 3 ಕೋಟಿ ರೂಪಾಯಿ ಕೊಡುವುದಾಗಿ ಹೇಳಿದರು ಮನೆ ಬಿಡದ ವೃದ್ಧ
  • ಸುತ್ತಲೂ ಹಬ್ಬಿದ ಹೆದ್ದಾರಿಯ ಕಾಮಗಾರಿಯ ಮಧ್ಯೆಯೇ ನಿಂತ ಮನೆ
  • ಧೂಳಿನಿಂದ ತಪ್ಪಿಸಿಕೊಳ್ಳಲು ಸಂಜೆಯವರೆಗೆ ನಗರಕ್ಕೆ ವಲಸೆ, ಸಂಜೆ ಮನೆಗೆ

ಹಿರಿಯರಿಗ ಮನೆ, ಜಮೀನು, ಸ್ವಂತ ಊರು ಎಂದರೆ ಒಂದು ಭಾವನಾತ್ಮಕ ಸಂಬಂಧವಿರುತ್ತದೆ. ಅದನ್ನು ಬಿಟ್ಟುಕೊಡಲು ಅವರು ಎಂದಿಗೂ ಕೂಡ ಸಿದ್ಧರಿರುವುದಿಲ್ಲ. ಅವರು ಹುಟ್ಟಿ ಬೆಳೆದ, ಆಡಿ ಬೆಳೆದ ಅಂಗಳವೆಂಬ ಭಾವುಕ ಬೆಸುಗೆ ಅದರೊಂದಿಗೆ ಬೆಸೆದಿರುತ್ತದೆ. ಅದನ್ನು ಯಾವ ಕಾರಣಕ್ಕೂ ಯಾವ ಬೆಲೆಗೂ ಅವರು ಬಿಟ್ಟು ಕೊಡುವುದಿಲ್ಲ. ಅದಕ್ಕೆ ತಾಜಾ ನಿದರ್ಶನ ಅಂದ್ರೆ ಚೀನಾದ ಈ ಹೌಂಗ್ ಪಿಂಗ್ ಎಂಬ ಹಿರಿಯ ನಾಗರಿಕ.

ಸದ್ಯ ಈತನ ಮನೆಯ ಸುತ್ತಲೂ ಹೆದ್ದಾರಿ ಬಿಟ್ಟು ಬೇರೇನೂ ಇಲ್ಲ. ಹೆದ್ದಾರಿ ಸುತ್ತುವರೆದ ನಡುವೆ ಈತನ ಮನೆಯಿದೆ. ಶಾಂಘೈನ ನೈರುತ್ಯ ಭಾಗದಲ್ಲಿರುವ ಜಿನ್​ಕ್ಸಿ ಎಂಬಲ್ಲಿ ಈಗ ಹೆದ್ದಾರಿ ಕಾಮಗಾರಿ ನಡೆಯುತ್ತಿದೆ. ಆ ಕಾಮಗಾರಿಯ ಮಧ್ಯೆಯೇ ಈ ಹೌಂಗ್ ಪಿಂಗ್ ಎಂಬ ವ್ಯಕ್ತಿಯ ಏಕೈಕ ಮನೆಯಿದೆ.


">January 25, 2025

ಪಿಂಗ್​ಗೆ ಸರ್ಕಾರ ಸಾಕಷ್ಟು ಮನವಿ ಮಾಡಿತ್ತು. ಮನೆಯನ್ನು ಬಿಟ್ಟುಕೊಡು ಅದಕ್ಕೆ ಬೇಕಾದ ಪರಿಹಾರ ನೀಡುತ್ತೇವೆ ಎಂದು ಕೂಡ ಹೇಳಿತ್ತು. ಇದಕ್ಕೆ ಸುತಾರಾಂ ಒಪ್ಪದ ಪಿಂಗ್ ಎರಡು ಅಂತಸ್ತಿನ ಆ ಮನೆಯಲ್ಲಿಯೇ ಉಳಿದುಕೊಳ್ಳಲು ನಿರ್ಧರಿಸಿದ. ಈಗ ಸರ್ಕಾರ ಅವನ ಮನೆಯ ಸುತ್ತಲೂ ಹೆದ್ದಾರಿಯನ್ನು ನಿರ್ಮಿಸುತ್ತಿದೆ.

ಇದನ್ನೂ ಓದಿ:ಉಪಯೋಗಕ್ಕೆ ಬಾರದ 200 ಮನೆಗಳಿಂದಲೇ ಗಳಿಕೆ ಆರಂಭ; ವರ್ಷಕ್ಕೆ ಎಣಿಸಿದ್ದು ಎಷ್ಟು ಕೋಟಿ ಹಣ?

ಹೆದ್ದಾರಿ ಕಾಮಗಾರಿ ಧೂಳಿನಿಂದ ರಕ್ಷಿಸಿಕೊಳ್ಳಲು ಪಿಂಗ್ ಹಾಗೂ ಆತನ 11 ವರ್ಷದ ಮೊಮ್ಮಗ ಇಡೀ ದಿನ ಮನೆಯಿಂದ ಆಚೆ ಹೋಗಿ ನಗರದೊಳಗೆ ಕೆಲಸ ಮಾಡುತ್ತಾರೆ. ಕಾಮಗಾರಿ ಮುಗಿಯುವ ಹೊತ್ತಿಗೆ ಮನೆಗೆ ಬಂದು ಸೇರುತ್ತಾರೆ. ಆದರೆ ಒಂದು ಬಾರಿ ಹೆದ್ದಾರಿ ಸಂಪೂರ್ಣವಾಗಿ ಸಿದ್ಧಗೊಂಡಿದ್ದೇ ಆದಲ್ಲಿ ಅಲ್ಲಿಂದ ಹೊರಡುವ ಶಬ್ದ ಮಾಲಿನ್ಯದ ಬಗ್ಗೆ ಪಿಂಗ್​​ಗೆ ಆತಂಕವಿದೆ ಅದು ಬಿಟ್ಟರೆ ಬೇರೆ ಯಾವ ಸಮಸ್ಯೆಯೂ ನನಗಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವದ ಅತಿ ದೊಡ್ಡ ರೈಲ್ವೆ ಸ್ಟೇಷನ್, ಒಂದೇ ಬಾರಿ 44 ರೈಲುಗಳು ನಿಲ್ಲುತ್ತವೆ! ಎಲ್ಲಿದೆ ?

ಪಿಂಗ್​ಗೆ ಮನೆಯ ಜಾಗವನ್ನು ಬಿಟ್ಟುಕೊಡಲು ಸರ್ಕಾರ 2 ಕೋಟಿ ರೂಪಾಯಿ ಕೊಡುವುದಾಗಿ ಆಫರ್ ಇಟ್ಟಿತ್ತು. ಅದ್ಯಾವುದಕ್ಕೂ ಒಪ್ಪದ ಪಿಂಗ್ ನಾನು ಮನೆಯನ್ನು ಬಿಟ್ಟುಕೊಡುವುದಿಲ್ಲ ಎಂದು ಹಠ ಹಿಡಿದರು. ಕೊನೆಗೆ ಜಿನ್​ಕ್ಸಿ ನಗರದ ಸೆಕ್ರಟರಿ ಮೂರು ಕೋಟಿ ರೂಪಾಯಿ ಕೊಡುವುದಾಗಿಯೂ ಕೂಡ ಹೇಳಿದರು ಅದಕ್ಕೂ ಕೂಡ ಪಿಂಗ್ ಬಗ್ಗಲಿಲ್ಲ. ಕೊನೆಗೆ ಸ್ಥಳೀಯ ಆಡಳಿತ ಆತನ ಮನೆಯೊಂದನ್ನು ಬಿಟ್ಟು ಅದಕ್ಕೆ ಸುತ್ತುವರಿಯವಂತೆ ಹೆದ್ದಾರಿ ನಿರ್ಮಾಣ ಮಾಡಿದೆ. ಇಡೀ ಹೆದ್ದಾರಿಯನ್ನ ತನ್ನ ಸುತ್ತ ಸುತ್ತಿಕೊಂಡ ಪಿಂಗ್​ ಮನೆ ಏಕಾಂಗಿಯಾಗಿ ನಿಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment