/newsfirstlive-kannada/media/post_attachments/wp-content/uploads/2025/07/RCR-GADDAMMA.jpg)
ರಾಯಚೂರಿನ ಗುರ್ಜಾಪುರ ಬ್ರಿಡ್ಜ್ ಕಂ ಬ್ಯಾರೇಜ್ ಬಳಿ ಹೆಂಡತಿಯೇ ಗಂಡನ ನದಿಗೆ ತಳ್ಳಿದ ಆರೋಪ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಪತ್ನಿ ಗದ್ದೆಮ್ಮನ ಮೇಲೆ ಆರೋಪ ಮಾಡುತ್ತಿರುವ ಪತಿ ತಾತಪ್ಪ ಡಿವೋರ್ಸ್ಗೆ ಮುಂದಾಗಿದ್ದಾರೆ. ಪ್ರಕರಣ ಬಳಿಕ ಕುಟುಂಬಸ್ಥರು ರಾಜಿ ಪಂಚಾಯತಿ ನಡೆಸಿದ್ದರು. ಆದ್ರೆ ರಾಜಿಗೆ ಒಪ್ಪದೆ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಗಂಡನನ್ನು ನದಿಗೆ ತಳ್ಳಿದ ಆರೋಪ ಕೇಸ್ಗೆ ಟ್ವಿಸ್ಟ್.. ಸತ್ಯ ಬಿಚ್ಚಿಟ್ಟ ಪತ್ನಿ-VIDEO
ಈ ಬಗ್ಗೆ ಮಾತನಾಡಿರುವ ತಾತಪ್ಪನ ಸಹೋದರ ಅಶೋಕ.. ನದಿಗಿ ತಳ್ಳಿದ ಬಳಿಕ ಆಕೆಯ ಕೈಯಲ್ಲಿ ಚಪ್ಪಲಿ ಹಿಡಿದಿದ್ದಳು. ಘಟನೆ ಬಳಿಕ ತಾತಪ್ಪ ಸಾಕಷ್ಟು ನೊಂದಿದ್ದು, ಮನೆಯಿಂದ ಆಚೆ ಬರುತ್ತಿಲ್ಲ. ಹಾಗಾಗಿ ನಾವು ಮಾಧ್ಯಮಕ್ಕೆ ಹೇಳಿಕೆ ನೀಡುತ್ತಿದ್ದೇವೆ. ಗದ್ದೆಮ್ಮ ಕಡು ಬಡವರಾಗಿದ್ರೂ ನಾವು ನಮ್ಮ ಹುಡುಗನಿಗೆ ಮದುವೆ ಮಾಡಿದೆವು. ನಮ್ಮ ಬಂಗಾರದ ಸೂಜಿ ನಮ್ಮ ಕಣ್ಣಿಗೆ ಚುಚ್ಚಿದೆ.
ಇದನ್ನೂ ಓದಿ: ದೇವನಹಳ್ಳಿ ಕೃಷಿ ಭೂಮಿ ಸ್ವಾಧೀನ ಕೈಬಿಟ್ಟ ಸರ್ಕಾರ; ಅನ್ನದಾತರ ಹೋರಾಟಕ್ಕೆ ದೊಡ್ಡ ಗೆಲುವು..!
ಗಂಡ ನದಿಗೆ ಬಿದ್ದ ತಕ್ಷಣ ಪತ್ನಿ ಅವನಿಗೆ ಚಪ್ಪಲಿ ತೋರಿಸಿದ್ದಾಳೆ. ಅವಳಿಗೆ ಅವನು ಇಷ್ಟವಿಲ್ಲದ ಕಾರಣ ಚಪ್ಪಲಿ ತೋರಿಸಿದ್ದಾಳೆ. ನದಿಗೆ ಬಿದ್ದ ತಕ್ಷಣ ಅವಳ ಚಿಕ್ಕಮ್ಮಳಿಗೆ ಕರೆ ಮಾಡಿದ್ದಾಳೆ. ಗಂಡ ನದಿಗೆ ಬಿದ್ದಾಗ ಸಹಾಯ ಮಾಡಿ ಎಂದು ಜನರ ಕರೆಯಬೇಕು. ಆದ್ರೆ ಆಕೆ ಕೈಯಲ್ಲಿ ಚಪ್ಪಲಿ ಹಿಡಿದಿದ್ರಿಂದ ತಾತಪ್ಪಗೆ ಸಿಟ್ಟು ಬಂದಿದೆ. ಹಾಗಾಗಿ ಅವಳಿಗೆ ವಿಚ್ಛೇದನ ನೀಡಲು ಎರಡು ಕುಟುಂಬದವರಿಂದ ಒಪ್ಪಿಗೆ ಪಡೆಯಲಾಗಿದೆ ಎಂದು ಅಶೋಕ್ ಹೇಳಿದ್ದಾನೆ.
ಇದನ್ನೂ ಓದಿ: ಈ ಗ್ರಾಮದಲ್ಲಿ ಮಹಿಳೆಯರದ್ದೇ ಕಾರುಭಾರು.. ಪುರುಷರಿಗೆ ‘ನೋ ಎಂಟ್ರಿ’ ಹಿಂದೆ ಒಂದು ಕ್ರೂರ ಕತೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ