Advertisment

ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ

author-image
Ganesh
Updated On
ಪತ್ನಿಯ ಆಸ್ಪತ್ರೆ ಬಿಲ್ ಕಟ್ಟಲು 3 ವರ್ಷದ ಮಗುವನ್ನೇ ಮಾರಿದ ಪತಿ; ಕರುಳು ಹಿಂಡುವ ಕೆಲಸ
Advertisment
  • ಮೂರು ವರ್ಷದ ಮಗನ ಮಾರಾಟ ಮಾಡಿದ್ದ ದಂಪತಿ
  • ಮಗು ರಕ್ಷಣೆ, ಐವರು ಆರೋಪಿಗಳ ಬಂಧಿಸಿದ ಪೊಲೀಸರು
  • ಆಸ್ಪತ್ರೆ ಸಿಬ್ಬಂದಿಯೇ ಕೊಟ್ಟಿದ್ರಂತೆ ಇಂತಹ ಐಡಿಯಾ..!

ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಓರ್ವ ವ್ಯಕ್ತಿ ಆಸ್ಪತ್ರೆಯಿಂದ ತನ್ನ ಪತ್ನಿ ಹಾಗೂ ನವಜಾತ ಶಿಶುವನ್ನು ಬಿಡುಗಡೆ ಮಾಡಲು ಎರಡು ವರ್ಷದ ಮಗನನ್ನು ಮಾರಿದ ಪ್ರಸಂಗ ನಡೆದಿದೆ.

Advertisment

ಆಸ್ಪತ್ರೆಯ ಬಿಲ್ ಕಟ್ಟಲು ಆತನ ಬಳಿ ಹಣ ಇರಲಿಲ್ಲ. ಇದೇ ಕಾರಣಕ್ಕೆ ಆಸ್ಪತ್ರೆಯಲ್ಲಿದ್ದ ಕೆಲವರ ಸಲಹೆ ಮೇರೆಗೆ ಮಗುವನ್ನು ದಂಪತಿಗೆ ಮಾರಾಟ ಮಾಡಿದ್ದಾರೆ. ವಿಷಯ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆಯೇ ರಕ್ಷಣೆ ಮಾಡಲಾಗಿದೆ.

publive-image

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪೊಲೀಸರು ಕ್ಷಿಪ್ರಗತಿಯಲ್ಲಿ ಎಚ್ಚೆತ್ತುಕೊಂಡಿದ್ದಾರೆ. ಜೊತೆಗೆ ಮಗು ಪಡೆದ ದಂಪತಿ ಸೇರಿ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ. ಬರ್ವಾದ ನಿವಾಸಿ ಹರೀಶ್ ಪಟೇಲ್ ಎಂಬಾತ ತನ್ನ ಪತ್ನಿಯನ್ನು ಹೆರಿಗೆಗೆ ಎಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಇದು ಅವರಿಗೆ ಆರನೇ ಮಗುವಾಗಿತ್ತು. ಮಗು ಜನಿಸಿದ ನಂತರ ಆಸ್ಪತ್ರೆಯ ಶುಲ್ಕ ಕಟ್ಟಲು ಸಾಧ್ಯವಾಗದೇ ಇದ್ದಾಗ ಆಸ್ಪತ್ರೆ ಸಿಬ್ಬಂದಿ ತಾಯಿ, ನವಜಾತ ಶಿಶುವಿನ ಡಿಸ್ಚಾರ್ಜ್​ಗೆ ಒಪ್ಪಿರಲಿಲ್ಲ. ಇದರಿಂದ ಹತಾಶೆಗೊಂಡ ಈತ, ತನ್ನ ಮೂರು ವರ್ಷದ ಮಗನನ್ನು ನಕಲಿ ದತ್ತು ದಾಖಲೆಯಡಿ ಕೆಲವು ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಲು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ದ್ರಾವಿಡ್ ಎಂಟ್ರಿ ಬೆನ್ನಲ್ಲೇ ಸಂಗಕ್ಕಾರ್​ಗೆ ಕೋಪ; ಈ ಅವಕಾಶ ಬಳಸಿಕೊಳ್ಳಲು KKR ಕಿಲಾಡಿ ಐಡಿಯಾ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment