newsfirstkannada.com

ಆನ್​​ಲೈನ್​ ಗೇಮ್​ ‘Free Fire’ನಿಂದಾಗಿ ಗಲಾಟೆ.. ಯೋಧನ ಕಾರಿಗೆ ಬೆಂಕಿ

Share :

Published April 18, 2024 at 8:35am

Update April 18, 2024 at 8:37am

    ಆನ್​ಲೈನ್​ ಗೇಮ್​ ’ಫ್ರೀ ಫೈರ್​’ನಿಂದ ಕಾರಿಗೆ ಫೈರ್​

    ‘ಫ್ರೀ ಫೈರ್​’ಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದ ಯುವಕ

    ಕಾರಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

​ಆನ್​ಲೈನ್​ ಗೇಮ್​ನಿಂದ ಗಲಾಟೆ ಶುರುವಾಗಿ ಕೊನೆಗೆ ಯೋಧನ ಕಾರಿಗೆ ಬೆಂಕಿ ಹಚ್ಚಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​ನಲ್ಲಿ ನಡೆದಿದೆ. ಈ ದುಶ್ಕೃತ್ಯವೆಸಗಿದ ವ್ಯಕ್ತಿಯನ್ನು ಬಬ್ಲು ಖೇಮ್ರಿಯಾ ಎಂದು ಗುರುತಿಸಲಾಗಿದೆ.

ಬಬ್ಲು ಖೇಮ್ರಿಯಾ ಆನ್​ಲೈನ್​ ಗೇಮ್​ ‘ಫ್ರೀ ಫೈರ್​​’ ಆಡುತ್ತಿದ್ದನು. ಇದಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಕೂಡ ಮಾಡಿದ್ದನು. ಸೈನಿಕನ ಮಗಳು ಬಬ್ಲು ಖೇಮ್ರಿಯಾನಿಂದ ಫ್ರೀ ಫೈರ್​ ಗೇಮ್​ನ ಐಡಿಯನ್ನು ತೆಗೆದುಕೊಂಡು ಬಳಿಕ ಪಾಸ್​ವರ್ಡ್​ ಬದಲಿಸಿದ್ದಾಳೆ. ಕೊನೆಗೆ ಬಬ್ಲು ಖೇಮ್ರಿಯಾ ಕೇಳಿದಾಗ ಕೊಡಲು ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಯುವತಿ ತಂದೆಯ ಕಾರಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ.

ಬಬ್ಲು ಖೇಮ್ರಿಯಾ ಕಾರಿಗೆ ಬೆಂಕಿ ಹಚ್ಚುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಆಧರಿಸಿ ಯೋಧನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ಸದ್ಯ ಆರೋಪಿಯ ಮೇಲೆ ಪೊಲೀಸರು ಏಫ್ಐಆರ್​ ದಾಖಲಿಸಿದ್ದಾರೆ. ಆದರೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಇದನ್ನೂ ಓದಿ: ರಾಮ ನವಮಿ ಮೆರವಣಿಗೆ ವೇಳೆ ಸ್ಫೋಟ, ಕಲ್ಲು ತೂರಾಟ.. ಓರ್ವ ಮಹಿಳೆ ಗಂಭೀರ

ಬಬ್ಲು ಖೇಮ್ರಿಯಾ ಯೋಧನ ಮನೆಯ ಮುಂದೆ ನಿಲ್ಲಿಸಿದ್ದ ಸ್ವಿಫ್ಟ್​ ಕಾರಿಗೆ ಬೆಂಕಿ ಹಚ್ಚಿದ್ದಾನೆ. ಪೆಟ್ರೋಲ್​ ಸುರಿದು ಬೆಂಕಿ ಕೊಟ್ಟಿದ್ದಾನೆ. ಸದ್ಯ ಪೊಲೀಸರು ಆರೋಪಿಗಾಗಿ ಹುಡುಕಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆನ್​​ಲೈನ್​ ಗೇಮ್​ ‘Free Fire’ನಿಂದಾಗಿ ಗಲಾಟೆ.. ಯೋಧನ ಕಾರಿಗೆ ಬೆಂಕಿ

https://newsfirstlive.com/wp-content/uploads/2024/04/Swift-Car.jpg

Load More