ವಂದೇ ಭಾರತ್​ ರೈಲಿನಲ್ಲಿ ಸರ್ವಿಸ್ ಸ್ಟಾಫ್​ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

author-image
Gopal Kulkarni
Updated On
ವಂದೇ ಭಾರತ್​ ರೈಲಿನಲ್ಲಿ ಸರ್ವಿಸ್ ಸ್ಟಾಫ್​ಗೆ ಬಿತ್ತು ಗೂಸಾ: ಪ್ರಯಾಣಿಕನ ಸಿಟ್ಟಿಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ವಂದೇ ಭಾರತ್‌ನಲ್ಲಿ ವೆಜ್ ಊಟ ಆರ್ಡರ್‌ ಮಾಡಿದ್ದ ಪ್ರಯಾಣಿಕ
  • ರೈಲಿನಲ್ಲಿಯೇ ನಡೀತು ವೇಟರ್- ಪ್ರಯಾಣಿಕರ ಮಾರಾಮಾರಿ
  • ಹಿರಿಯ ನಾಗರಿಕನ ನಡೆಗೆ ಸಹ ಪ್ರಯಾಣಿಕರಿಂದ ತೀವ್ರ ಆಕ್ರೋಶ

ರಾಂಚಿ: ವಂದೇ ಭಾರತ್ ರೈಲು ಸದ್ಯ ಭಾರತದ ರೈಲ್ವೆ ವಲಯದಲ್ಲಿ ಹೊಸದೊಂದು ಮಾದರಿಯ ಸೇವೆಯನ್ನು ನೀಡುತ್ತಿದೆ. ಅತ್ಯಂತ ವೇಗದ ರೈಲು ಎಂದು ಹೆಸರು ಗಳಿಸಿರುವ ಈ ವಂದೇ ಭಾರತ್ ರೈಲು ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಆದ್ರೆ ಈಗ ಬೇರೆಯದ್ದೇ ಕಾರಣಕ್ಕೆ ಸುದ್ದಿಯಾಗಿದೆ. ವಂದೇ ಭಾರತ್ ರೈಲಿನ ಸೇವೆಗಳ ಬಗ್ಗೆ, ಗುಣಮಟ್ಟದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನರು ವಿಡಿಯೋ ಮಾಡಿ ಹಾಡಿ ಹೊಗಳಿದ್ದನ್ನು ನಾವು ನೋಡಿದ್ದೇವೆ. ಆದ್ರೆ ಈಗ ಇದೇ ಸೇವೆಯ ವಿಚಾರದಲ್ಲಿ ದೊಡ್ಡದೊಂದು ಕಿರಿಕ್ ಆಗಿ, ರೈಲಿನ ಸರ್ವಿಸ್​ ಸ್ಟಾಪ್​ನ್ನು ಥಳಿಸಿದ ಘಟನೆ ನಡೆದಿದೆ.

ಇದನ್ನೂ ಓದಿ:Train Accident: ಹಳಿ ತಪ್ಪಿದ ಸಂಪರ್ಕ ಕ್ರಾಂತಿ ಎಕ್ಸ್​ಪ್ರೆಸ್ ರೈಲು.. ಆಮೇಲೇನಾಯ್ತು? ಶಾಕಿಂಗ್ ವಿಡಿಯೋ!

ಓಲ್ಡ್ ಮ್ಯಾನ್ ನಡೆಗೆ ಸಹ ಪ್ರಯಾಣಿಕರ ಆಕ್ರೋಶ

ಜುಲೈ 26 ರಂದು ಹೌರಾದಿಂದ ರಾಂಚಿಗೆ ಹೊರಟಿದ್ದ ವಂದೇ ಭಾರತ್ ರೈಲಿನಲ್ಲಿ ವೃದ್ಧ ಪ್ರಯಾಣಿಕರೊಬ್ಬರು, ಊಟದ ಆಯ್ಕೆಯಲ್ಲಿ ವೆಜ್​ನ್ನು ಆಯ್ಕೆ ಮಾಡಿದ್ದರು. ಆದ್ರೆ ವೇಟರ್ ನಾನ್‌ ವೆಜ್ ಊಟ ಕೊಟ್ಟಿದ್ದಾರೆ. ನಾನ್ ವೆಜ್ ಅನ್ನೋದು ಗೊತ್ತಿಲ್ಲದೇ ವೃದ್ಧ ತಿನ್ನಲು ಆರಂಭಿಸಿದ್ದಾರೆ. ಆಗ ವೇಟರ್ ಕೊಟ್ಟಿರೋದು ನಾನ್-ವೆಜ್ ಅಂತ ಗೊತ್ತಾಗುತ್ತೆ. ಇದಕ್ಕೆ ಕೆರಳಿ ಕೆಂಡವಾದ ಪ್ರಯಾಣಿಕ ಆತನಿಗೆ ಎರಡು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ವೃದ್ಧ ವ್ಯಕ್ತಿಯ ಈ ನಡವಳಿಕೆಯನ್ನು ಸಹ ಪ್ರಯಾಣಿಕರು ಖಂಡಿಸಿದ್ದಾರೆ. ಅವರೊಟ್ಟಿಗೆ ವಾಕ್ಸಮರನ್ನು ನಡೆಸಿದ್ದಾರೆ. ಏನೋ ತಪ್ಪಾಗಿದೆ ಹಾಗಂತ ಅವನನ್ನು ಹೊಡೆಯೋದಾ. ನಿಮ್ಮ ವಯಸ್ಸಿನಂತಾದ್ರೂ ನೀವು ನಡೆದುಕೊಳ್ಳಬಾರದಾ. ನಿಮ್ಮ ವಯಸ್ಸನ್ನೊಮ್ಮೆ ನೋಡಿಕೊಳ್ಳಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟು ಮಾತ್ರವಲ್ಲ ವೇಟರ್​ನನ್ನು ಕ್ಷಮಾಪಣೆ ಕೇಳುವಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಮಹಾರಾಷ್ಟ್ರದ ಕಾಡಿನಲ್ಲಿ ಅಮೆರಿಕ ಮಹಿಳೆಯ ಚೀರಾಟ.. ಆರ್ತನಾದ ಕೇಳಿ ಬೆಚ್ಚಿ ಬಿದ್ದ ಜನ; ಆಗಿದ್ದೇನು?


">July 29, 2024

ಸದ್ಯ ವಂದೇ ಭಾರತ್ ರೈಲಿನಲ್ಲಿ ನಡೆದ ಈ ರಂಪಾಟ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಹಿರಿಯ ನಾಗರಿಕರ ಈ ನಡುವಳಿಕೆಗೆ ನೆಟ್ಟಿಗರು ಆಕ್ರೋಶವನ್ನು ವ್ಯಕ್ತಪಡಿಸಿದ್ರೆ ಇನ್ನೂ ಕೆಲವರು ವೇಟರ್ ತಪ್ಪುಗಳನ್ನು ಎತ್ತಿಹಿಡಿದು ಮಾತನಾಡುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment