newsfirstkannada.com

×

ಚೂರಿ ಚುಚ್ಚಿ, ಕಾಲನ್ನು ಹಗ್ಗದಿಂದ ಬೈಕ್​ಗೆ ಕಟ್ಟಿ ಬೀದಿಯಲ್ಲಿ ಎಳೆದು ವಿಕೃತಿ; ಚಿತ್ರಹಿಂಸೆಗೆ ವ್ಯಕ್ತಿ ಸಾವು

Share :

Published January 22, 2024 at 8:22am

    ಇಬ್ಬರು ಆರೋಪಿಗಳು ಕೊಡಬಾರದ ಶಿಕ್ಷೆ ಕೊಟ್ಟರು

    ಆಸ್ಪತ್ರೆಗೆ ದಾಖಲಿಸಿದ್ದರೂ ಬದುಕಿ ಬರಲಿಲ್ಲ ವ್ಯಕ್ತಿ

    ಆರೋಪಿಗಳ ಬಂಧಿಸುವ ವೇಳೆ ಹೈಡ್ರಾಮಾ, ಗುಂಡೇಟು

ವ್ಯಕ್ತಿಯೋರ್ವನಿಗೆ ಚೂರಿ ಚುಚ್ಚಿ ಬೈಕ್​​ನಲ್ಲಿ ಕಟ್ಟಿಕೊಂಡು ಎಳೆದು ಹಿಂಸೆ ನೀಡಿದ ಪರಿಣಾಮ ಸಾವನ್ನಪ್ಪಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ಇಬ್ಬರು ಆರೋಪಿಗಳು ಚಾಕು ಚುಚ್ಚಿದ ಬಳಿಕ ಆತನ ಕಾಲನ್ನು ಹಗ್ಗದಿಂದ ಬೈಕ್​ಗೆ ಕಟ್ಟಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿದ್ದಾರೆ ಎಂದು ಪೊಲಿಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ತಪ್ಪಿಸಿಕೊಳ್ಳಲು ಹೈಡ್ರಾಮಾ ನಡೆಸಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಗುಂಡೇಟು ಕೊಟ್ಟು ಬಂಧಿಸಿದ್ದಾರೆ. ಸದ್ಯ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸೆಕ್ಟರ್​ 49 ಪೊಲೀಸ್​ ಠಾಣೆ ವ್ಯಾಪ್ತಿಯ ಬರೋಲಾ ಗ್ರಾಮದಲ್ಲಿ ಘಟನೆ ನಡೆದಿದೆ. ಮೆಹಂದಿ ಹಸನ್ ಮೃತ ವ್ಯಕ್ತಿ. ಮಧ್ಯರಾತ್ರಿ ಇಬ್ಬರು ಯುವಕರು ಮೆಹಂದಿ ಮೇಲೆ ಅಟ್ಯಾಕ್ ಮಾಡಿದ್ದಾರೆ. ಬಳಿಕ ಬೈಕ್​ ಕಟ್ಟಿಕೊಂಡು ಎಳೆದು ಬೀಸಾಡಿ ಹೋಗಿದ್ದರು. ವಿಷಯ ಗೊತ್ತಾಗುತ್ತಿದ್ದಂತೆಯೇ ಆತನನ್ನು ರಕ್ಷಿಸುವ ಪ್ರಯತ್ನ ಮಾಡಿದ್ದೇವೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾಗ ಸಾವನ್ನಪ್ಪಿದ್ದಾನೆ ಎಂದು ನೋಯ್ಡಾ ಹೆಚ್ಚುವರಿ ಡಿಸಿಪಿ ಮನಿಷ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

ಅನುಜ್ ಮತ್ತು ನಿತಿನ್ ಬಂಧಿತ ಆರೋಪಿಗಳು. ಪೊಲೀಸ್ ವಿಚಾರಣೆ ವೇಳೆ ಸತ್ಯ ಬಾಯಿಬಿಟ್ಟಿದ್ದು, 2018ರಲ್ಲಿ ಮೃತ ವ್ಯಕ್ತಿ, ಅನುಜ್ ತಂದೆಯನ್ನು ಕೊಲ್ಲಲು ಚಾಕು ಇರಿದಿದ್ದನಂತೆ. ಆ ಸೇಡಿಗೆ ಇಂದು ಅಟ್ಯಾಕ್ ಮಾಡಿದ್ದೇವೆ ಎಂದಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚೂರಿ ಚುಚ್ಚಿ, ಕಾಲನ್ನು ಹಗ್ಗದಿಂದ ಬೈಕ್​ಗೆ ಕಟ್ಟಿ ಬೀದಿಯಲ್ಲಿ ಎಳೆದು ವಿಕೃತಿ; ಚಿತ್ರಹಿಂಸೆಗೆ ವ್ಯಕ್ತಿ ಸಾವು

https://newsfirstlive.com/wp-content/uploads/2023/10/Police-Vehicle.jpg

Load More