ಮಗ ಓದುತ್ತಿಲ್ಲ ಎಂದು ಮೂಟೆಯಲ್ಲಿ ಕಟ್ಟಿ ಕೆರೆಗೆ ಬಿಸಾಡಿದ ತಂದೆ; ಆಮೇಲೇನಾಯ್ತು?

author-image
Gopal Kulkarni
Updated On
ಮಗ ಓದುತ್ತಿಲ್ಲ ಎಂದು ಮೂಟೆಯಲ್ಲಿ ಕಟ್ಟಿ ಕೆರೆಗೆ ಬಿಸಾಡಿದ ತಂದೆ; ಆಮೇಲೇನಾಯ್ತು?
Advertisment
  • ಮಗ ಸರಿಯಾಗಿ ಓದ್ತಿಲ್ಲ ಅಂತ ರೋಸಿ ಹೋದ ಅಪ್ಪ ಮಾಡಿದ ರಾಕ್ಷಸ ಕೆಲಸ
  • ಕೊಲ್ಲಾಪುರದ ಕೆರೆಯ ದಂಡೆಯ ಮೇಲೆ ಗೋಣಿಚೀಲದಲ್ಲಿ ಕಂಡಿದ್ದೇನು?
  • ಸೊಶಿಯಲ್ ಮಿಡಿಯಾದಲ್ಲಿ ವೈರಲ್ ಆಗ್ತಿದೆ ಕ್ರೂರ ತಂದೆಯ ಕೆಲಸ

ಹೈದ್ರಾಬಾದ್: ಮಕ್ಕಳು ಮಾತು ಕೇಳಲ್ಲ, ಓದು ಅಂದ್ರೆ ರಚ್ಚೆ ಹಿಡಿತಾವೆ, ಹೋಮ್​ವರ್ಕ್ ಮಾಡು ಅಂದ್ರೆ ನೆಪ ತಗಿತಾವೆ. ಅದಕ್ಕೆ ಅವರನ್ನು ರಮಿಸಿ, ಮುದ್ದು ಮಾಡಿ, ಕೊನೆಗೆ ಗದರಿಸಿಯಾದ್ರೂ ಓದಲು ಕೂರಿಸುವ ತಂದೆ ತಾಯಿ ನಮಗೆ ಕಾಣ ಸಿಗ್ತಾರೆ, ಆದ್ರೆ ತೆಲಂಗಾಣದ ಮೆಹಬೂಬ್​ನಗರದಲ್ಲಿರುವ ಕೊಲ್ಲಾಪುರದಲ್ಲಿ ಒಬ್ಬ ತಂದೆ ತನ್ನ ಮಗ ಸರಿಯಾಗಿ ಓದುತ್ತಿಲ್ಲ, ಹೇಳಿದ ಮಾತು ಕೇಳುತ್ತಿಲ್ಲ ಎಂದು ಗೋಣಿ ಚಿಲದಲ್ಲಿ ಕಟ್ಟಿ ಕೆರೆಗೆ ಎಸೆದಿದ್ದಾನೆ.

ಇದನ್ನೂ ಓದಿ:ದೇವಸ್ಥಾನದ ಗೋಡೆ ಕುಸಿದು ದುರಂತ; 9 ಮಕ್ಕಳು ಸ್ಥಳದಲ್ಲೇ ಸಾವು

ಮೂಲಗಳು ಹೇಳುವ ಪ್ರಕಾರ, ಮೆಹಬೂಬ ನಗರದ ವಾಸಿಯೊಬ್ಬ ತನ್ನ ಮಗನ ನಡುವಳಿಕೆಯಿಂದ, ಓದಲು ಹಠ ಮಾಡುವುದನ್ನು ನೋಡಿ ಕೇಳಿ ರೋಸಿ ಹೋಗಿದ್ದನಂತೆ, ಹೀಗಾಗಿ ಅವನನ್ನು ಚೆನ್ನಾಗಿ ಥಳಿಸಿ ಕೈಕಾಲು ಕಟ್ಟಿ ಒಂದು ಗೋಣಿಚೀಲದಲ್ಲಿ ಇಳಿಸಿ, ಅದನ್ನು ಆಟೋರಿಕ್ಷಾದಲ್ಲಿ ತೆಗೆದುಕೊಂಡು ಹೋಗಿ ಹತ್ತಿರದ ಕೆರೆಯೊಂದರಲ್ಲಿ ಎಸೆದು ಹೋಗಿದ್ದಾನೆ. ಈ ಘಟನೆ ನಡೆಯುವ ವೇಳೆ ಅಲ್ಲಿಯೇ ಇದ್ದ ಕುರಿಗಾಹಿಯೊಬ್ಬ ಇದನ್ನು ಗಮನಿಸಿದ್ದಾನೆ. ಏನಿದೆ ಚೀಲದಲ್ಲಿ ಎಂದು ಕೂಡ ಕೇಳಿದ್ದಾನೆ. ಅದಕ್ಕೆ ಬಾಲಕನ ತಂದೆ, ಚೀಲದಲ್ಲಿರೊದು ನಾಯಿ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ.


">August 1, 2024

ಆದರೂ ಕುರಿಗಾಹಿಗೆ ಅನುಮಾನ ಬಂದು, ಗೋಣಿಚೀಲವಿದ್ದ ಕಡೆಗೆ ಓಡಿ ಬಂದು ಬಿಚ್ಚಿ ನೋಡಿದ್ದಾನೆ. ಆವಾಗ ಚೀಲದಲ್ಲಿ ಬಾಲಕ ಅಳುತ್ತಿರೋದನ್ನ ಕಂಡು ಅವಕ್ಕಾಗಿ ಹೋಗಿದ್ದಾನೆ. ಸದ್ಯ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಸುದ್ದಿಯಾಗುತ್ತಿದೆ. ಬಾಲಕನ ತಂದೆಯ ವಿರುದ್ಧ ಆಕ್ರೋಶದ ಮಾತುಗಳನ್ನು ಆಡುತ್ತಿದ್ದಾರೆ ನೆಟ್ಟಿಗರು. ಇನ್ನು ಬಾಲಕನ ತಂದೆಯನ್ನು ಸಾಗರ್ ಕರ್ನೂಲ್ ಎಂದು ಗುರುತಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment