Advertisment

VIDEO: ಅಕಾಲಿದಳದ ನಾಯಕ ಸುಖಬೀರ್ ಬಾದಲ್​ ಮೇಲೆ ಗುಂಡಿನ ದಾಳಿ; ಗುಂಡಿಟ್ಟವನಿಗೆ ಪಾಕ್​ನ ನಂಟು!

author-image
Gopal Kulkarni
Updated On
VIDEO: ಅಕಾಲಿದಳದ ನಾಯಕ ಸುಖಬೀರ್ ಬಾದಲ್​ ಮೇಲೆ ಗುಂಡಿನ ದಾಳಿ; ಗುಂಡಿಟ್ಟವನಿಗೆ ಪಾಕ್​ನ ನಂಟು!
Advertisment
  • ಪಂಜಾಬ್​ನ ಮಾಜಿ ಡಿಸಿಎಂ ಸುಖಬೀರ್ ಮೇಲೆ ಗುಂಡಿನ ದಾಳಿ
  • ಗೋಲ್ಡನ್​ ಟೆಂಪಲ್​ನಲ್ಲಿ ಕಸಗೂಡಿಸುತ್ತಿದ್ದ ಸಮಯ ಹಾರಿದ ಗುಂಡು
  • ಪೊಲೀಸರ ವಶದಲ್ಲಿ ಶೂಟೌಟ್​ ನಡೆಸಿದ ನಾರಾಯಣ ಸಿಂಗ್ ಚೌರಾ

ಪಂಜಾಬ್​ನ ಮಾಜಿ ಡಿಸಿಎಂ ಹಾಗೂ ಅಕಾಲಿದಳದ ನಾಯಕ ಸುಖಬೀರ್ ಬಾದಲ್ ಮೇಲೆ ಗುಂಡಿನದ ದಾಳಿ ನಡೆದಿದೆ. ಇಂದು ಸುಖಬೀರ್ ಬಾದಲ್ ಅಮೃತಸರ್​ನಲ್ಲಿರುವ ಗೋಲ್ಡನ್ ಟೆಂಪಲ್​ ಶುಚಿಗೊಳಿಸಲು ಹೋಗಿದ್ದರು. ಸುಖಬೀರ್​ಗೆ ಶೌಚಾಲಯ ಸ್ವಚ್ಛಗೊಳಿಸುವ ಹಾಗೂ ಕಸಗೂಡಿಸುವ ಶಿಕ್ಷೆಯನ್ನು ಸಿಖರ್​ ಸರ್ವೋಚ್ಛ ಧಾರ್ಮಿಕ ಸಂಸ್ಥೆ ಅಕಾಲ್ ತಕ್ತ್​ ವಿಧಿಸಿತ್ತು. ಅದರನ್ವಯ ಇಂದು ಗೋಲ್ಡನ್ ಟೆಂಪಲ್​ನಲ್ಲಿ ಕಸ ಗೂಡಿಸುತ್ತಿದ್ದ ಸಮಯದಲ್ಲಿ ಬಾದಲ್ ಮೇಲೆ ಗುಂಡಿನ ದಾಳಿ ನಡೆದಿದೆ.

Advertisment

ಗುರುದ್ವಾರದ ಪ್ರಮುಖ ದ್ವಾರದ ಮುಂದೆಯೇ ಈ ಒಂದು ದಾಳಿ ನಡೆದಿದ್ದು. ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಖಬೀರ್ ಬಾದಲ್​ಗೆ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಹೇಳಲಾಗಿದೆ.


">December 4, 2024


ಇದನ್ನೂ ಓದಿ:ಪಾತ್ರೆ ತೊಳೆದು, ಶೌಚಾಲಯ ಸ್ವಚ್ಛಗೊಳಿಸಬೇಕು.. ಪಂಜಾಬ್ ಮಾಜಿ DCM ಸುಖಬೀರ್ ಸಿಂಗ್‌ಗೆ ಕಠಿಣ ಶಿಕ್ಷೆ!

Advertisment

ಇನ್ನೂ ಗುಂಡಿನ ದಾಳಿಯನ್ನು ನಡೆಸಿದವನನ್ನು ನಾರಾಯಣ ಚೌರಾ ಎಂದು ಗುರುತಿಸಲಾಗಿದೆ. ಈ ಹಿಂದೆ ಈತ ಭಯೋತ್ಪಾದಕ ಘಟನೆಯಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಬಂದಿದೆ. ನಾರಾಯಣ್​ ಸಿಂಗ್ ಚೌರಾ 1984ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದ. ಅಲ್ಲಿಂದ ಪಂಜಾಬ್​ಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ಕಳ್ಳ ಸಾಗಣೆ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಈತನ ಹೆಸರು ಖಲೀಸ್ತಾನಿ ಪ್ರತ್ಯೇಕತಾವಾದಿಗಳ ಲಿಸ್ಟ್​ನಲ್ಲಿಯೂ ಇತ್ತು. ಅಮೃತಸರದ ಕೇಂದ್ರ ಕಾರಾಗೃಹದಲ್ಲಿ ಹಲವು ವರ್ಷಗಳ ಕಾಲ ಈತ ಕಳೆದಿದ್ದ ಎಂದು ತಿಳಿದು ಬಂದಿದೆ. 2018ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿ ಮತ್ತೆ ಜೈಲು ಪಾಲಾಗಿದ್ದ. ಈತನ ಮೇಲೆ ಒಟ್ಟು 12 ಕಾನೂನು ಬಾಹಿರ ಪ್ರಕರಣ ಇವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment