/newsfirstlive-kannada/media/post_attachments/wp-content/uploads/2025/06/boy-crying.jpg)
ಗುಜರಾತ್ನ ಅಹಮದಾಬಾದ್ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ. ಲಂಡನ್ಗೆ ಹೊರಟಿದ್ದ ಬೋಯಿಂಗ್ ಡ್ರೀಮ್ಲೈನರ್ ವಿಮಾನದಲ್ಲಿ 242 ಪ್ರಯಾಣಿಸುತ್ತಿದ್ದರು. ಅದರಲ್ಲಿ ಅಚ್ಚರಿ ಎಂಬಂತೆ ಓರ್ವ ಪ್ರಯಾಣಿಕ ಮಾತ್ರ ಬದುಕುಳಿದಿದ್ದಾನೆ.
ಇದನ್ನೂ ಓದಿ:ವಿಮಾನ ದುರಂತದ ದಿನ ಈ ನ್ಯೂಸ್ ಪೇಪರ್ನಲ್ಲಿ ಸೇಮ್ ಟು ಸೇಮ್ ಜಾಹೀರಾತು!
ಇನ್ನೂ, ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಹಿಂದಿನ ಕಣ್ಣೀರು ತರಿಸೋ ಕಥೆಗಳು, ದೃಶ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಅದರಲ್ಲಿ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಯುವಕನೊಬ್ಬ ತನ್ನ ಗೆಳತಿಯ ಮೃತದೇಹಕ್ಕಾಗಿ ಕಾಯುತ್ತಾ ಆಸ್ಪತ್ರೆ ಒಂದು ಮೂಲೆಯಲ್ಲಿ ಕಣ್ಣೀರು ಇಡುತ್ತಾ ಕುಳಿತುಕೊಂಡಿರೋ ದೃಶ್ಯವೊಂದು ಸೆರೆಯಾಗಿದೆ.
View this post on Instagram
ಹೌದು, ಆದರೆ ಆ ಯುವಕ ಯಾರು, ಏನು ಎಂಬುವುದರ ಮಾಹಿತಿ ಲಭ್ಯವಿಲ್ಲ. ಆದ್ರೆ, ವಿಡಿಯೋ ಮಾಡಿದವರು ಹಂಚಿಕೊಂಡ ಮಾಹಿತಿ ಪ್ರಕಾರ, ಯಾರಿಗಾಗಿ ಕಾಯುತ್ತಿದ್ದೀರಿ ಎಂದು ಕೇಳಿದಾಗ ಆ ವ್ಯಕ್ತಿ ಎರಡು ಪದಗಳಲ್ಲಿ ‘ನನ್ನ ಪ್ರೀತಿಗಾಗಿ ಅಂತ ಉತ್ತರಿಸಿದ್ದಾನಂತೆ. ಇಷ್ಟಾಗಿ ಅವನೂ ಬೇರೆ ಏನನ್ನೂ ಹೇಳದೇ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದ ಎಂದು ವಿವರಿಸಿದ್ದಾರೆ. ಇದೇ ವಿಡಿಯೋ ನೋಡಿದ ಅದೆಷ್ಟೋ ನೆಟ್ಟಿಗರು ಕಾಮೆಂಟ್ಸ್ ಮೂಲಕವೇ ಕಂಬನಿ ಮಿಡಿದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ