/newsfirstlive-kannada/media/post_attachments/wp-content/uploads/2025/06/Kerala-1.jpg)
ಕೇರಳದಲ್ಲಿ ಯುವಕನೊಬ್ಬ ಮಧ್ಯರಾತ್ರಿ ಇಬ್ಬರು ಮಕ್ಕಳ ಮೂಳೆಗಳೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದಾನೆ. ಇದನ್ನು ಕಂಡ ಕ್ಷಣಕಾಲ ಪೊಲೀಸರು ಗಾಬರಿಗೊಳಗಾಗಿದ್ದಾರೆ. ಬಳಿಕ ವಿಚಾರಿಸಿದಾಗ ತನ್ನ ಹಾಗೂ ಯುವತಿಯ ಪ್ರೇಮ ಸಂಬಂಧ, ಲೈಂಗಿಕ ಸಂಬಂಧದಿಂದ ಎರಡು ಮಕ್ಕಳು ಹುಟ್ಟಿದ್ದವು. ಎರಡನ್ನೂ ಸಾರ್ವಜನಿಕ ಸ್ಮಶಾನ, ಖಾಸಗಿ ಭೂಮಿಯಲ್ಲಿ ಹೂತು ಹಾಕಿದ್ದೆ ಎಂದು 24 ವರ್ಷದ ಯುವಕ ಭವಿನ್ ಹೇಳಿದ್ದಾನೆ. ಕೇರಳದ ತ್ರಿಶೂರ್ ಜಿಲ್ಲೆಯ ಪುದುಕಾಡ್ ಪೊಲೀಸ್ ಠಾಣೆಗೆ ಬಂದ ಯುವಕ ಭವಿನ್ ನನ್ನು ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಆಗ ವಿವಾಹ ಪೂರ್ವ ಲೈಂಗಿಕತೆ, ವಿವಾಹಪೂರ್ವ ಮಕ್ಕಳ ಜನನದ ಸ್ಟೋರಿ ಬಿಚ್ಚಿಕೊಂಡಿದೆ. ವಿವಾಹ ಪೂರ್ವ ಹುಟ್ಟಿದ ಮಕ್ಕಳನ್ನು ಕೊಂದು ಸ್ಮಶಾನ ಹಾಗೂ ಖಾಸಗಿ ಭೂಮಿಯಲ್ಲಿ ಹೂತಿಟ್ಟಿದ್ದು ಗೊತ್ತಾಗಿದೆ. ಇಲ್ಲೊಂದು ಟ್ವಿಸ್ಟ್ ಅಂಡ್ ಟರ್ನ್ ಕೂಡ ಇದೆ. ನವಜಾತ ಶಿಶುವಿನ ಶವ ಹೂತಿಟ್ಟ ಬಳಿಕ ಅದರ ಮೂಳೆಗಳನ್ನು ಯುವಕ ಭವಿನ್, ಮಕ್ಕಳಿಗೆ ಜನ್ಮ ಕೊಟ್ಟ ತನ್ನ ಗರ್ಲ್ ಫ್ರೆಂಡ್ ಅನಿಶಾಗೆ ನೀಡಿದ್ದಾನೆ. ಹೀಗಾಗಿ ಮಾಟಮಂತ್ರದ ಪೂಜೆಯನ್ನು ನಡೆಸಲು ಹೀಗೆ ವಿವಾಹಪೂರ್ವ ಮಕ್ಕಳಿಗೆ ಜನ್ಮ ಕೊಟ್ಟು, ನವಜಾತ ಶಿಶುಗಳ ಮೂಳೆಗಳನ್ನು ಪೂಜೆೆಗೆ ಬಳಕೆ ಮಾಡಿದ್ದಾರಾ ಎಂಬ ಅನುಮಾನ ಪೊಲೀಸರಿಗೆ ಬಂದಿದೆ. ಈ ಬಗ್ಗೆ ಮಕ್ಕಳಿಗೆ ಜನ್ಮ ಕೊಟ್ಟಿದ್ದ 23 ವರ್ಷದ ಅನಿಶಾಳನ್ನು ಈಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಅಭಿಮಾನಿಗಳಿಗೆ ಭರ್ಜರಿ ಗುಡ್ನ್ಯೂಸ್.. ಕಿಚ್ಚ ಸುದೀಪ್ ಅವರಿಂದಲೇ ಬಿಗ್ಬಾಸ್ ಸೀಸನ್ 12 ಹೋಸ್ಟ್..!
2020 ರಲ್ಲಿ ಫೇಸ್ಬುಕ್ನಲ್ಲಿ ಭವಿನ್ಗೆ ಅನಿಶಾ ಪರಿಚಯವಾಗಿದೆ. ಅನಂತರ ಪ್ರೀತಿ, ಪ್ರೇಮದಲ್ಲಿ ಮುಳುಗಿ, ವಿವಾಹಪೂರ್ವ ಲೈಂಗಿಕತೆ ನಡೆಸಿದ್ದಾರೆ. ಇದರ ಪರಿಣಾಮ 2021 ರಲ್ಲಿ ತನ್ನ ಮನೆಯ ಬಾತ್ ರೂಮುನಲ್ಲಿ ಮೊದಲ ಮಗುವಿಗೆ ಅನಿಶಾ ಜನ್ಮ ನೀಡಿದ್ದಾರೆ. ತಾನು ಜನ್ಮ ಕೊಟ್ಟ ಗಂಡು ಮಗು ಸಾವನ್ನಪ್ಪಿದೆ ಎಂದು ಅನಿಶಾ, ಭವಿನ್ಗೆ ಹೇಳಿದ್ದಾಳೆ. ಬಳಿಕ ಭವಿನ್ ಆ ನವಜಾತ ಶಿಶುವನ್ನು ಅನಿಶಾ ಮನೆಯ ಬಳಿ ಖಾಲಿ ಜಾಗದಲ್ಲಿ ಹೂತು ಹಾಕಿದ್ದಾನೆ. ನವಜಾತ ಶಿಶುವಿನ ಸಾವಿನ ಬಳಿಕ ಅನಿಶಾ , ಶಿಶುವಿನ ಮೂಳೆಗಳನ್ನು ಪಡೆದಿದ್ದಾಳೆ. ಅದೇ ರೀತಿ ಭವಿನ್ ಕೂಡ ಶಿಶುವಿನ ಮೂಳೆ ತಗೊಂಡಿದ್ದ.
2024 ರಲ್ಲಿ ಅನಿಶಾ- ಭವಿನ್ ವಿವಾಹಪೂರ್ವ ಸಂಬಂಧದಿಂದ ಮತ್ತೊಂದು ಮಗು ಹುಟ್ಟಿದೆ. ಈ ಬಾರಿ ಅನಿಶಾ, ಭವಿನ್ ಪತ್ನಿಯ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಈ ಬಾರಿಯ ಹುಟ್ಟಿದ ಗಂಡು ಮಗು ಸಾವನ್ನಪ್ಪಿದೆ ಎಂದು ಅನಿಶಾ, ಭವಿನ್ ಗೆ ಹೇಳಿದ್ದಾಳೆ. ಬಳಿಕ ಮಗುವಿನ ಶವದೊಂದಿಗೆ ಭವಿನ್ ಮನೆಗೆ ಬಂದಿದ್ದಾಳೆ. ಬಳಿಕ ಇಬ್ಬರು ಸೇರಿ ಮಗುವಿನ ಅಂತ್ಯಸಂಸ್ಕಾರ ಮಾಡಿದ್ದಾರೆ.
ಇದನ್ನೂ ಓದಿ: ಬರ್ತ್ ಡೇ ಸಂಭ್ರಮದಲ್ಲಿ ಅಂತರಪಟ ಖ್ಯಾತಿಯ ತನ್ವಿಯಾ ಬಾಲರಾಜ್; ಗ್ರ್ಯಾಂಡ್ ಫೋಟೋಸ್ ಇಲ್ಲಿವೆ!
ಈಗ ಭವಿನ್ ತಾನಾಗಿಯೇ ಪೊಲೀಸ್ ಠಾಣೆಗೆ ಬಂದು ಎರಡು ನವಜಾತ ಶಿಶುಗಳ ಹತ್ಯೆ, ಮಣ್ಣಿನಲ್ಲಿ ಹೂತು ಹಾಕಿದ್ದನ್ನು ಪೊಲೀಸರ ಬಳಿ ಹೇಳಲು ಕಾರಣವೇನು ಎಂಬ ಪ್ರಶ್ನೆಯೂ ಉದ್ಭವವಾಗಿದೆ. ಇದಕ್ಕೆ ಉತ್ತರವೂ ಇದೆ. ಅನಿಶಾ, ಭವಿನ್ ನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾಗಲು ಮುಂದಾಗಿದ್ದಳು. ಇದರಿಂದ ಕೋಪಗೊಂಡ ಭವಿನ್, ನವಜಾತ ಶಿಶುಗಳ ಅಸ್ಥಿಪಂಜರವನ್ನು ತಗೊಂಡು ಭಾನುವಾರ ಮಧ್ಯರಾತ್ರಿ ಪುದುಕಾಡ್ ಪೊಲೀಸ್ ಠಾಣೆಗೆ ಬಂದಿದ್ದಾನೆ.
ಮಧ್ಯರಾತ್ರಿ ಚೀಲದಲ್ಲಿ ನವಜಾತ ಶಿಶುಗಳ ಅಸ್ಥಿಪಂಜರ ತಗೊಂಡು ಭವಿನ್ ಪೊಲೀಸ್ ಠಾಣೆಗೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ಹಂತದಲ್ಲಿ ಇದನ್ನು ನರಹತ್ಯೆ ಎಂದು ಪರಿಗಣಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅನಿಶಾಳನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನೂ ನವಜಾತ ಶಿಶುಗಳನ್ನು ಹೂತು ಹಾಕಿದ್ದ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಈ ಕೇಸ್ ಎಲ್ಲ ಆ್ಯಂಗಲ್ ನಲ್ಲೂ ತನಿಖೆ ನಡೆಸುವುದಾಗಿ ಪೊಲೀಸರು ಹೇಳಿದ್ದಾರೆ. ಮನೆಯವರಿಗೆ ಹೆದರಿ ಅನಿಶಾ, ನವಜಾತ ಶಿಶುಗಳನ್ನು ಹತ್ಯೆ ಮಾಡಿರಬಹುದೇ ಎಂಬ ಅನುಮಾನವೂ ಇದೆ. ಮಾಟಮಂತ್ರ ನಡೆಸಲು ನವಜಾತ ಶಿಶುಗಳ ಅಸ್ಥಿಪಂಜರ, ಮೂಳೆಯನ್ನು ಬಳಕೆ ಮಾಡಿರಬಹುದೆ ಎಂಬ ಅನುಮಾನವೂ ಇದೆ. ಈ ಎಲ್ಲ ಆ್ಯಂಗಲ್ ಗಳಲ್ಲೂ ತ್ರಿಶೂರ್ ಜಿಲ್ಲೆಯ ಪೊಲೀಸರು ಈಗ ತನಿಖೆ ನಡೆಸ್ತಿದ್ದಾರೆ.
ಇದನ್ನೂ ಓದಿ: ಆಂಗ್ಲರಿಗೆ ನಡುಕ ಹುಟ್ಟಿಸಿದ ರಿಷಭ್ ಪಂತ್.. ವಿಕೆಟ್ ಕೀಪರ್ ಕೌಂಟರ್ ಅಟ್ಯಾಕ್ ಹೇಗಿರುತ್ತೆ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ