/newsfirstlive-kannada/media/post_attachments/wp-content/uploads/2024/10/COURT-CONDITION-BAIL.jpg)
ಪಾಕಿಸ್ತಾನ ಜಿಂದಾಬಾದ್ ಮತ್ತು ಭಾರತಕ್ಕೆ ಧಿಕ್ಕಾರ ಎಂದು ಹೇಳಿದ್ದ ವ್ಯಕ್ತಿಯೊಬ್ಬನಿಗೆ ಮಧ್ಯಪ್ರದೇಶ ಕೋರ್ಟ್ ಜಾಮೀನು ನೀಡಿದೆ. ಆದರೆ, ಜಾಮೀನು ನೀಡಲು ಅತ್ಯಂತ ವಿಶಿಷ್ಠವಾದ ಷರತ್ತು ವಿಧಿಸಿ ಗಮನ ಸೆಳೆದಿದೆ. ಈ ಪ್ರಕರಣ ಇತ್ಯರ್ಥವಾಗುವವರೆಗೂ ಜಾಮೀನು ಪಡೆದ ವ್ಯಕ್ತಿ ತಿಂಗಳಿಗೆ ಎರೆಡು ಬಾರಿ ಪೊಲೀಸ್ ಸ್ಟೇಷನ್ಗೆ ಹೋಗಬೇಕು. ಪ್ರತಿಭಾರಿ ಹೋದಾಗಲೂ ಸ್ಟೇಷನ್ನಲ್ಲಿರುವ ಭಾರತದ ಧ್ವಜಕ್ಕೆ 21 ಬಾರಿ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಬೇಕು. ಈ ರೀತಿಯ ವಿನೂತನ ಷರತ್ತು ವಿಧಿಸಿ ಕೋರ್ಟ್ ಜಾಮೀನು ನೀಡಿದೆ.
ಆರೋಪಿ ಫೈಜಲ್ಗೆ, ನ್ಯಾಯಮೂರ್ತಿ ದಿನೇಶ್ ಕುಮಾರ್ ಪಾಲಿವಾಲ ಅವರು ಜಾಮೀನು ಮಂಜೂರು ಮಾಡಿದ್ದಾರೆ. ಆದ್ರೆ ಪ್ರತಿ ತಿಂಗಳು ಮೊದಲ ಮಂಗಳವಾರ ಹಾಗೂ ನಾಲ್ಕನೇ ಮಂಗಳವಾರ ಭೋಪಾಲ್ನ ಮಿಸ್ರೋದ್ ಪೊಲೀಸ್ ಠಾಣೆಗೆ ಹೋಗಿ ಹಾಜರಾಗಬೇಕು. ಅಲ್ಲಿರುವ ತ್ರಿವರ್ಣ ಧ್ವಜಕ್ಕೆ 21 ಬಾರಿ ಸೆಲ್ಯೂಟ್ ಹೊಡೆಯುತ್ತಾ ಭಾರತ್ ಮಾತಾಕೀ ಜೈ ಎಂದು ಘೋಷಣೆ ಕೂಗಬೆಕು ಎಂದು ಷರುತ್ತು ವಿಧಿಸಿದ್ದಾರೆ.
ಇದನ್ನೂ ಓದಿ:ಕಾನೂನು ಕುರುಡಲ್ಲ; ನ್ಯಾಯದೇವತೆಯ ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!
ಇದು ಬೇಲ್ ಷರತ್ತಿನ ಒಂದು ಭಾಗ. ಮಧ್ಯಪ್ರದೇಶದ ಸರ್ಕಾರದ ಪರ ವಕೀಲರು ಆರೋಪಿಗೆ ಜಾಮೀನು ನೀಡಬಾರದು ಅವನ ಮೇಲೆ 14ಕ್ಕೂ ಹೆಚ್ಚು ಕ್ರಿಮಿನಲ್ ಕೇಸ್ಗಳಿವೆ ಎಂದು ವಾದಿಸಿದ್ದರು. ಪಾಕಿಸ್ತಾನ್ ಜಿಂದಾಬಾದ್ ಹಾಗೂ ಹಿಂದೂಸ್ತಾನ್ ಮುರ್ದಾಬಾದ್ ಎಂಬ ಘೋಷಣೆ ಕೂಗುವ ಮೂಲಕ ಆತ ಎರಡು ಸಮುದಾಯಗಳ ನಡುವೆ ಶತ್ರುತ್ವ ಬೆಳೆಸಿದ್ದಾನೆ. ಇದು ದೇಶದ ಸಾರ್ವಭೌಮತೆಗೆ ದೊಡ್ಡ ಧಕ್ಕೆ ತಂದಂತಾಗುತ್ತದೆ. ಆರೋಪಿ ತಾನು ಹುಟ್ಟಿ ಬೆಳೆದ ದೇಶದ ವಿರುದ್ಧವೇ ಘೋಷಣೆ ಕೂಗಿದ್ದಾನೆ ಹೀಗಾಗಿ ಆತನಿಗೆ ಬೇಲ್ ನೀಡಬಾರದು ಎಂದು ವಾದಿಸಿದ್ದರು.
ಇದನ್ನೂ ಓದಿ: ಭಾರತದ ನೂತನ ಚೀಫ್ ಜಸ್ಟೀಸ್ ಸ್ಥಾನಕ್ಕೆ ಹೆಸರು ಶಿಫಾರಸು; ಅವರು ಯಾರು? ಹಿನ್ನೆಲೆ ಏನು?
ಈ ಬಗ್ಗೆ ಮಾತನಾಡಿದ ಜಸ್ಟಿಸ್ ದಿನೇಶ್ ಕುಮಾರ್ ಫೈಜಲ್ ಆರೋಪಿಗೆ ಕೆಲವು ಷರತ್ತುಗಳನ್ನು ವಿಧಿಸಿ ಬಿಡುಗಡೆ ಮಾಡುವುದು ಒಳ್ಳೆದಯ ಅಂತ ನನಗೆ ಅನಿಸುತ್ತಿದೆ. ಇದರಿಂದಾಗಿ ಆರೋಪಿಗೆ ಜವಾಬ್ದಾರಿಯ ಪ್ರಜ್ಞೆ ಹಾಗೂ ತಾನು ನೆಲೆಸುತ್ತಿರುವ ದೇಶದ ಬಗ್ಗೆ ಗೌರವ ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿ ಆರೋಪಿಗೆ ಜಾಮೀನನ್ನು ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ