ಶ್ವಾನದ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಕೊಟ್ಟ ದುಷ್ಟರು! ಇಬ್ಬರು ಕೈಗೆ ಸಿಗುವರೆಗೂ ವಿಡಿಯೋ ಹಂಚಿ ಎಂದ ನೆಟ್ಟಿಗರು

author-image
AS Harshith
Updated On
ಶ್ವಾನದ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಕೊಟ್ಟ ದುಷ್ಟರು! ಇಬ್ಬರು ಕೈಗೆ ಸಿಗುವರೆಗೂ ವಿಡಿಯೋ ಹಂಚಿ ಎಂದ ನೆಟ್ಟಿಗರು
Advertisment
  • ದೇಶದಾದ್ಯಂತ ದೀಪಾವಳಿ ಸಂಭ್ರಮ ಭಾರೀ ಜೋರು
  • ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಹುಚ್ಚಾಟ ಮೆರೆದ ಯುವಕರು
  • ಶ್ವಾನದ ಜೊತೆ ಹುಚ್ಚಾಟ ಮೆರೆದವರನ್ನು ಹುಡುಕುತ್ತಿರುವ ನೆಟ್ಟಿಗರು

ದೇಶದಾದ್ಯಂತ ದೀಪಾವಳಿ ಹಬ್ಬದ ಸಡಗರ ಮನೆ ಮಾಡಿದೆ. ಈ ಸಮಯದಲ್ಲಿ ಪಟಾಕಿ ಹಚ್ಚಿ ಸಂಭ್ರಮ ಜೋರಾಗಿ ನಡೆಯುತ್ತದೆ. ಆದರೆ ಈ ಸಮಯದಲ್ಲಿ ದುಷ್ಟನೊಬ್ಬ ಪಟಾಕಿ ಹೊಡೆಯುವುದರ ಜೊತೆಗೆ ಮೂಕ ಪ್ರಾಣಿಗೆ ತೊಂದರೆ ನೀಡುವ ದೃಶ್ಯ ಸಮೇತ ಘಟನೆ ಬೆಳಕಿಗೆ ಬಂದಿದೆ.

ಶ್ವಾನವೊಂದರ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಕೊಡುವ ದೃಶ್ಯ ವೈರಲ್​ ಆಗಿದೆ. ಕಪ್ಪು ಬಣ್ಣದ ಮೂಕ ನಾಯಿಯ ಬಾಲಕ್ಕೆ ಪಟಾಕಿ ಹಚ್ಚಿದ್ದಾನೆ. ಮತ್ತೋರ್ವ ನಾಯಿಯನ್ನು ಹಿಡಿದುಕೊಂಡಿದ್ದಾನೆ. ಪಟಾಕಿಗೆ ಬೆಂಕಿ ಹಚ್ಚಿದೊಡನೆ ಶ್ವಾನ ಗಾಬರಿಯಿಂದ ಅಲ್ಲಿಂದ ಓಡುವ ದೃಶ್ಯ ಸ್ಮಾರ್ಟ್​ಫೋನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: VIDEO: ಚಹಾ ಮಾಡುತ್ತಿದ್ದ ಮಾವನಿಗೆ ದೈಹಿಕವಾಗಿ ಹಲ್ಲೆ ಮಾಡಿದ ಬಿಜೆಪಿ ಮಹಿಳಾ ನಾಯಕಿ

ದೀಪಾವಳಿ ಹಬ್ಬದ ಸಮಯದಲ್ಲಿ ಯುವಕರು ಇಂತಹ ಹುಚ್ಚಾಟಕ್ಕೆ ಮುಂದಾಗಿ ಮಾತು ಬಾರದ ಜೀವಕ್ಕೆ ಹಾನಿ ಮಾಡುತ್ತಿದ್ದಾರೆ. ಇಂತಹ ಘಟನೆಗೆ ಸಾಕ್ಷಿಯಾದವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗುವಂತೆ ನೆಟ್ಟಿಗರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ದರ್ಶನ್​ ರಿಲೀಸ್​​ಗೆ ಫುಲ್​ ಖುಷ್​! ಕಾರು ಫಾಲೋ ಮಾಡಿದ ​​ಫ್ಯಾನ್ಸ್​​.. ಲಾಠಿ ಬೀಸಿದ ಪೊಲೀಸರು

ಇನ್ನು ಶ್ವಾನದ ಬಾಲಕ್ಕೆ ಬೆಂಕಿ ಹಚ್ಚಿದ ದುಷ್ಟರು ಯಾರೆಂದು ತಿಳಿದುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಈ ವಿಡಿಯೋ ವ್ಯಾಪಕವಾಗಿ ಹರಿದಾಡುತ್ತಿದ್ದು, ವ್ಯಕ್ತಿಯ ಗುರುತು ಪತ್ತೆಯಾಗುವವರೆಗೆ ಶೇರ್​ ಮಾಡಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment