/newsfirstlive-kannada/media/post_attachments/wp-content/uploads/2025/01/27-YEARS-MISSING.jpg)
ಜಾರ್ಖಂಡ್​ನ ಕುಟುಂಬವೊಂದು 27 ವರ್ಷಗಳ ಹಿಂದೆ ತನ್ನ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡಿತ್ತು. ಈಗ ಆ ವ್ಯಕ್ತಿಯನ್ನು 27 ವರ್ಷದ ಬಳಿಕ ಕುಂಭಮೇಳದಲ್ಲಿ ಕಂಡು ಒಂದು ಕಡೆ ಖುಷಿಯಾಗಿದ್ದರೆ ಮತ್ತೊಂದು ಕಡೆ ದುಃಖಿತಗೊಂಡಿದೆ. ಪ್ರಯಾಗರಾಜ್​ನಲ್ಲಿ 27 ವರ್ಷದ ಬಳಿಕ ಕಂಡ ಗಂಗಾಸಾಗರ್ ಯಾದವ ಎಂಬವವರು 1998ರಲ್ಲಿ ಧನ್ಬಾದ್​​​ನಿಂದ ಕಾಣೆಯಾಗಿದ್ದರು. ಅವರು ಈಗ ಪ್ರಯಾಗರಾಜ್​ಗೆ ಬಂದ ತನ್ನ ಕುಟುಂಬದವರಿಗೆ ಮತ್ತೆ ದೊರಕಿದ್ದಾರೆ. ಆದ್ರೆ ಕುಟುಂಬ ಅವರನ್ನು ನೋಡಿದಾಗಿ ಅವರು ಅಘೋರಿ ಸಾಧುಗಳಾಗಿ ಬದಲಾಗಿದ್ದರು.
ತುಂಬಾ ವರ್ಷಗಳ ಬಳಿಕ ಗಂಗಾಸಾಗರ್ ಸಂಬಂಧಿಕರು ಪ್ರಯಾಗರಾಜ್​ನ ಕುಂಭಮೇಳಕ್ಕೆ ಬಂದಿತ್ತು. ಅಲ್ಲಿ ಒಬ್ಬ ಮನುಷ್ಯ ಈ ಹಿಂದೆ ಕಳೆದು ಹೋದ ಮನುಷ್ಯನನ್ನೇ ಹೋಲುತ್ತಿದ್ದ ಉದ್ದನೆಯ ಹಲ್ಲುಲಗಳು, ಹಣೆಯಲ್ಲಾದ ಗಾಯ ಮತ್ತು ಮೊಣಕಾಲಿನ ಮೇಲಾದ ಗಾಯಗಳೆಲ್ಲವೂ ಅವನನ್ನೇ ಗುರುತಿಸುತ್ತಿದ್ದವು ಕೂಡಲೇ ಸಂಬಂಧಿಕರು ಆತನ ಫೋಟೋವನ್ನು ತೆಗೆದು ಆತನ ಕುಟುಂಬಕ್ಕೆ ಕಳುಹಿಸಿದ್ದಾರೆ. ಅವನನ್ನು ಗುರುತು ಹಿಡಿದ ಗಂಗಾಸಾಗರ್​ ಧನ್ವಾ ದೇವಿ ಹಾಗೂ ಆಕೆಯ ಮಗ ಕಮಲೇಶ್ ಮತ್ತು ವಿಮಲೇಶ್​ ಮತ್ತು ಅವರ ಸಹೋದರ ಮುರಳಿ ಯಾದವ್​ ಕೂಡಲೇ ಕುಂಭಮೇಳಕ್ಕೆ ಓಡೋಡಿ ಬಂದಿದ್ದಾರೆ.
ಇದನ್ನೂ ಓದಿ:ಮಹಾಕುಂಭಮೇಳದಿಂದ ಮತ್ತೊಂದು ಶಾಕಿಂಗ್ ಸುದ್ದಿ: ಕರ್ನಾಟಕ ಮೂಲದ ನಾಗಾಸಾಧು ದುರಂತ ಅಂತ್ಯ
ಈಗಾಗಲೇ ಗಂಗಾಸಾಗರ್​ ಅವರಿಗೆ 65 ವರ್ಷಗಳಾಗಿವೆ. ಅಘೋರಿ ಬಾಬಾ ಆಗಿದ್ದಾರೆ. ಬಾಬಾ ರಾಜಕುಮಾರ್ ಎಂದು ಹೆಸರು ಇದೆ. ಅವರು ತಮ್ಮ ಹಳೆಯ ಜೀವನ ಈ ಕುಟುಂಬದೊಂದಿಗೆ ಇತ್ತು ಎಂಬುದನ್ನು ಒಪ್ಪಿಕೊಂಡಿಲ್ಲ. ತಾವು ವಾರಾಣಸಿಯವರು ಎಂದು ಹೇಳಿದ್ದಾರೆ. ನನಗೆ ಗಂಗಾಸಾಗರ್ ಎಂಬ ಹೆಸರಿನೊಂದಿಗೆ ಯಾವುದೇ ನಂಟಿಲ್ಲ ಎಂದಿದ್ದಾರೆ
/newsfirstlive-kannada/media/post_attachments/wp-content/uploads/2025/01/27-YEARS-MISSING-1.jpg)
ಕುಟುಂಬದವರು ಅವರನ್ನು ಗುರುತಿಸಿದ್ದು ಅವರ ದೇಹದ ಗುರುತುಗಳನ್ನು ಹೇಳಿ ಅವರನ್ನು ಒಪ್ಪಿಸಲು ಹರಸಾಹಸಪಟ್ಟಿದ್ದಾರೆ. ಪ್ರಯಾಗರಾಜ್​ನಲ್ಲಿರುವ ಪೊಲೀಸರಿಗೆ ಡಿಎನ್​ಎ ಟೆಸ್ಟ್ ಮಾಡಿಸಲು ಹೇಳಿದ್ದಾರೆ ಒಂದು ವೇಳೆ ಅದು ಆದರೆ ನಮ್ಮ ಸಂಬಂಧ ಸಾಬೀತಾಗುತ್ತದೆ. ನಾವು ಬೇಕಾದರೆ ಕುಂಭಮೇಳ ಮುಗಿಯುವವರೆಗೂ ಕಾಯುತ್ತೇವೆ ಎಂದು ಹೇಳಿದ್ದಾರೆ. ಒಂದು ವೇಳೆ ಡಿಎನ್​ಎ ಟೆಸ್ಟ್ ಮ್ಯಾಚ್ ಆಗದೇ ಇದ್ದ ಪಕ್ಷದಲ್ಲಿ ನಾವು ಬಾಬಾ ಅವರಿಗೆ ಕ್ಷಮೆ ಕೇಳಿ ವಾಪಸ್ ಹೋಗುತ್ತೇವೆ ಎಂದಿದ್ದಾರೆ.
ಇದನ್ನೂ ಓದಿ: ಪ್ರಯಾಗ್‌ರಾಜ್ ಮಹಾ ಕುಂಭಮೇಳದಲ್ಲಿ ಶಾಹಿ ಸ್ನಾನ ಮಾಡಿದ ಪವಿತ್ರಾ ಗೌಡ; ಫೋಟೋಗಳು ಇಲ್ಲಿವೆ!
27 ವರ್ಷಗಳ ಹಿಂದೆ ನಮ್ಮ ಊರಲ್ಲಿ ನಮ್ಮ ತಮ್ಮನ ಮದುವೆಯ ಸಂಭ್ರಮವಿತ್ತು. ಈ ಸಮಯದಲ್ಲಿ ಸೀರೆಯನ್ನು ತರುತ್ತೇನೆ ಎಂದು ಹೋದ ಇವರು ಎಂದಿಗೂ ವಾಪಸ್ ಬರಲಿಲ್ಲ. ಇತ್ತೀಚೆಗೆ ಕುಟುಂಬದವರು ಇವರ ವಿಡಿಯೋ ತೆಗೆದು ನಮಗೆ ಕಳುಹಿಸಿದರು. ನಾವು ಕೂಡಲೇ ಕುಂಭಮೇಳಕ್ಕೆ ಬಂದು ಅವರನ್ನು ಭೇಟಿಯಾದೆ. ಆದ್ರೆ ಅವರು ನಮ್ಮನ್ನು ಗುರುತು ಹಿಡಿಯಲು ನಿರಾಕರಿಸುತ್ತಿದ್ದಾರೆ. ಅವರ ಸ್ವಂತ ಹೆಂಡತಿಯನ್ನೇ ಗುರುತಿಸಲು ನಿರಾಕರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us