ಮೋಹನ್ ಬಾಬು ಮನೆ ರಾಮಾಯಣ.. ಚಂದ್ರಮುಖಿ ಬಂಗಲೆ ಮುಂದೆ ಮನೋಜ್ ಪ್ರತಿಭಟನೆ ಯಾಕೆ?

author-image
admin
Updated On
ಮೋಹನ್ ಬಾಬು ಮನೆ ರಾಮಾಯಣ.. ಚಂದ್ರಮುಖಿ ಬಂಗಲೆ ಮುಂದೆ ಮನೋಜ್ ಪ್ರತಿಭಟನೆ ಯಾಕೆ?
Advertisment
  • ಡೈಲಾಗ್ ಕಿಂಗ್ ಮಂಚು ಮೋಹನ್ ಬಾಬು ಮನೆ ರಾಮಾಯಣ
  • ಮೋಹನ್ ಬಾಬು ಫಾರ್ಮ್​​ ಹೌಸ್ ಮುಂದೆ ದೊಡ್ಡ ಹಂಗಾಮ
  • ಸೂಪರ್​ ಹಿಟ್​ ಸಿನಿಮಾ ಕಾಲದಲ್ಲೇ ಅಣ್ಣನಿಗಾಗಿ ಲೇಡಿ ಗೆಟಪ್​!

ಡೈಲಾಗ್ ಕಿಂಗ್ ಮಂಚು ಮೋಹನ್ ಬಾಬು ಮನೆ ರಾಮಾಯಣ ಮುಗಿಯಂಗಿಲ್ಲ. ಅತ್ತ ಮಂಚು ವಿಷ್ಣು ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಭೇಟಿ ಮಾಡಿ ತಮ್ಮ ಬಹುನಿರೀಕ್ಷೆಯ ಕಣ್ಣಪ್ಪ ಸಿನಿಮಾ ಪ್ರಮೋಷನ್ ಮಾಡುತ್ತಿದ್ದರೆ, ಇತ್ತ ಸೋದರ ಮಂಚು ಮನೋಜ್ ಪ್ರತಿಭಟನೆ ಮಾಡುತ್ತಿದ್ದಾರೆ. ಹೈದರಾಬಾದ್​​ನ ಜಲ್ಲಪಲ್ಲಿಯಲ್ಲಿರೋ ಮೋಹನ್ ಬಾಬು ಫಾರ್ಮ್​​ ಹೌಸ್ ಮುಂದೆ ಕುಳಿತು ದೊಡ್ಡ ಹಂಗಾಮ ಸೃಷ್ಟಿಸುತ್ತಿದ್ದಾರೆ.

ಮನೋಜ್ ಬರೋದಕ್ಕೆ ಮುಂಚೆಯೇ 100 ಪೊಲೀಸ್ರು ಬಂದಿದ್ರು
ಫಾರ್ಮ್​ ಹೌಸ್​​ ಒಳಕ್ಕೆ ಹೋಗೋದಕ್ಕೆ ಕೋರ್ಟ್​ ಅನುಮತಿ ನೀಡಿದೆ ಅಂತ ಒಳಗೆ ಹೋಗಲು ಪ್ರಯತ್ನಿಸಿದ್ರು ಮಂಚು ಮನೋಜ್. ಈ ಸಂದರ್ಭ ಪೊಲೀಸರು ಒಳ ಹೋಗಲು ಬಿಟ್ಟಿಲ್ಲ. ಇದೇ ಕಾರಣಕ್ಕೇ ಮಂಚು ಮನೋಜ್​ಗೂ ಪೊಲೀಸರಿಗೆ ವಾಗ್ಯುದ್ಧವೇ ನಡೆಯಿತು. ತನ್ನ ತಂದೆಯನ್ನು ಭೇಟಿ ಮಾಡಿ ಮಾತಾಡಬೇಕು ಅಂತ ಮನೋಜ್ ವಾದಿಸಿದ್ದಾರೆ. ಇದಕ್ಕೂ ಪೊಲೀಸರಿಂದ ವಿರೋಧ ವ್ಯಕ್ತವಾಗಿದ್ದಕ್ಕೆ ಮನೋಜ್ ಪ್ರತಿಭಟನೆ ನಡೆಸಿದ್ರು. ಮನೋಜ್ ಬರ್ತಿದ್ದಾರೆ ಅನ್ನೋ ಸುಳಿವು ಸಿಕ್ಕ ಕೂಡಲೇ 100ಕ್ಕೂ ಅಧಿಕ ಪೊಲೀಸ್ರು ಫಾರ್ಮ್​​ ಹೌಸ್​ ಮುಂದೆ ಜಮಾಯಿಸಿದ್ರು.

ಇದನ್ನೂ ಓದಿ: ನಿರೂಪಕಿ ಅನುಶ್ರೀಗೆ ಕೂಡಿ ಬಂತು ಕಂಕಣ ಭಾಗ್ಯ? ಕೊನೆಗೂ ಮದುವೆಗೆ ಡೇಟ್ ಕೊಟ್ರು! 

ಮನೋಜ್ ಕಾರ್ ಕಳ್ಳತನ ಮಾಡಿಸಿದನೇ ಅಣ್ಣ ಮಂಚು ವಿಷ್ಣು?
ತಮ್ಮ ಮನೆಯಲ್ಲಿನ ವಸ್ತುಗಳನ್ನು ಹಾಗೂ ಕಾರನ್ನ ಯಾರೋ ಕದ್ದಿದ್ದಾರೆ ಅಂತಲೂ ಮನೋಜ್ ನಾರ್ಸಿಂಗ್​ ಪೊಲೀಸರಿಗೆ ದೂರು ನೀಡಿದ್ರು. ಇಲ್ಲಿನ ಗಂಡಿಪೇಟ ತಾಲೂಕಿನ ನಾರ್ಸಿಂಗ್​ ಬಳಿಯ ಮುಪ್ಪಾ ವಿಲಾಸದ 13ನೇ ನಂಬರ್​​ನ ವಿಲ್ಲಾ ಮುಂದೆ ಏಪ್ರಿಲ್ 1ನೇ ತಾರೀಖು ಕಾರು ನಿಲ್ಲಿಸಿದ್ರಂತೆ.. ಇದು ಮನೋಜ್​ ಅವರಿಗೆ ಸೇರಿದ ಮನೆ ಆಗಿದೆ.. ರಾತ್ರಿ 11 ಗಂಟೆಗೆ ಮನೆಯಲ್ಲಿ ಮನೋಜ್ ಡ್ರೈವರ್​ ಊಟ ಮಾಡುತ್ತಿದ್ದಾಗ, ಕಾರ್ ಸ್ಟಾರ್ಟ್ ಆಗಿರೋ ಸುದ್ದು ಕೇಳಿಸಿದೆ, ಅನುಮಾನದಿಂದ ಹೊರಗೆ ಬಂದು ನೋಡಿದರೇ ಮನೋಜ್ ಡ್ರೈವರ್​ ಸಾಂಬಶಿವರಾವ್ ಬೊಬ್ಬೆ ಇಡುತ್ತಾ ಕಾರನ್ನು ತಡೆಯೋ ಪ್ರಯತ್ನ ಮಾಡಿದ್ದಂತೆ. ಯಾರೋ ಕಳ್ಳರು ಕಾರನ್ನು ಅತಿವೇಗದಲ್ಲಿ ಓಡಿಸಿಕೊಂಡು ಕದ್ದೊಯ್ದರು ಅಂತ ಪೊಲೀಸರಿಗೆ ಮನೋಜ್ ನೀಡಿರೋ ದೂರಿನಲ್ಲಿ ಉಲ್ಲೇಖಿಸಿದ್ದಾರೆ, ಇದನ್ನೂ ಕೂಡ ಕುಟುಂಬಸ್ಥರೇ ಮಾಡಿಸಿರಬಹುದು ಅಂತ ಅನುಮಾನದಿಂದ ನೋಡುತ್ತಿದ್ದಾರೆ ಮಂಚು ಮನೋಜ್.

publive-image

ಲೇಡಿ ಗಟಪ್ ಹಾಕಿ ಅವನ ಸಿನಿಮಾ ಗೆಲ್ಲಿಸಿದ್ದೆ.. ಆದರೇ ನನಗೆ?
ನನ್ನ ಕುಟುಂಬದಿಂದ ಇಲ್ಲಿಯ ತನಕ ಒಂದೇ ಒಂದು ರೂಪಾಯಿ ತೆಗೆದುಕೊಂಡಿಲ್ಲ. ಹೊರಗೆ ಸಿನಿಮಾ ಹಿಟ್​ ಆದರೇ, ಆ ಹಣವನ್ನು ತಂದು ನಿರ್ಮಾಣ ಸಂಸ್ಥೆ ಕಟ್ಟಿದ್ದೀನಿ ಅಂತಿದ್ದಾರೆ. ಮಂಚು ವಿಷ್ಣು ಸಿನಿ ಜೀವನಕ್ಕಾಗಿ ತಾನು ಸಾಕಷ್ಟು ತ್ಯಾಗಗಳನ್ನು ಮಾಡಿದ್ದೀನಿ. ಸೂಪರ್​ ಹಿಟ್​ ಸಿನಿಮಾ ನೀಡುತ್ತಿದ್ದ ಕಾಲದಲ್ಲೇ ಅಣ್ಣನಿಗಾಗಿ ಲೇಡಿ ಗೆಟಪ್​ ಹಾಕಿದ್ದೆ. ಅವರಿಗಾಗಿ ಎಷ್ಟೋ ಕೆಲಸಗಳನ್ನ ಮಾಡಿದ್ದೀನಿ. ಇದೀಗ ನನ್ನವರೇ ನನಗೆ ಮುಳ್ಳಾಗಿದ್ದಾರೆ. ಕಣ್ಣಪ್ಪ ಸಿನಿಮಾಗೆ ಎದುರಾಗಿ ಭೈರವಂ ಸಿನಿಮಾ ರಿಲೀಸ್​​ ಮಾಡೋಣ ಅಂದ್ಕೊಂಡಿದ್ವಿ. ಟೆನ್ಶನ್​ ಮಾಡಿಕೊಂಡ ವಿಷ್ಣು ರಿಲೀಸ್​​ ಡೇಟ್​ ಅನ್ನೇ ಮುಂದಕ್ಕೆ ಹಾಕಿಕೊಂಡಿದ್ದಾನೆ. ಆ ಕೋಪವನ್ನ ಹೇಗೆ ತೀರಿಸಿಕೊಳ್ಳಬೇಕು ಅಂತ ಗೊತ್ತಿಲ್ಲದೇ ಇದೆಲ್ಲಾ ಮಾಡಿಸುತ್ತಿದ್ದಾನೆ ಅಂತ ಆರೋಪಿಸುತ್ತಿದ್ದಾರೆ ಮಂಚು ಮನೋಜ್.

publive-image

ಚಂದ್ರಮುಖಿ ಸೌಂದರ್ಯಗೆ ವಂಚಿಸಿದ್ದಕ್ಕೆ ಇದೆಲ್ಲಾ ಆಗುತ್ತಿದೆಯೇ?
ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಪೆದ್ದರಾಯುಡು ಮೋಹನ್ ಬಾಬು ಮನೆ ಜಗಳವನ್ನ ಇದೀಗ ಜನ ಆಡಿಕೊಂಡು ನಗುವಂತಾಗಿದೆ. ಇರೋ ಮೂವರು ಮಕ್ಕಳಿಗೆ ಸಮವಾಗಿ ಆಸ್ತಿ ಹಂಚಿಬಿಟ್ಟರೇ ಇದ್ಯಾವುದೂ ತಲೆ ನೋವೇ ಇರೋದಿಲ್ಲ. ಆದರೇ, ಮೋಹನ್ ಬಾಬು ತಮ್ಮ ಎರಡನೇ ಹೆಂಡ್ತಿ ಮಗ ಮಂಚು ಮನೋಜ್ ವಿರುದ್ಧವೇ ಯಾಕೋ ಸಿಡಿಸಿಡಿ ಸಿಡಿಯೋ ಸಿಡಿತಲೆ ಆಗಿದ್ದಾರೆ. ಕಳೆದ ಒಂದೆರಡು ತಿಂಗಳಿನಿಂದಲೂ ಮಂಚು ಫ್ಯಾಮಿಲಿ ಪಂಚಾಯ್ತಿ ಪ್ರತೀ ದಿನ ಸುದ್ದಿ ಮನೆಯಲ್ಲಿ ಸಖತ್​ ಸದ್ದು ಮಾಡುತ್ತಿದೆ.. ಇದೆಲ್ಲಕ್ಕೂ ನಟಿ ಸೌಂದರ್ಯರ ಆಸ್ತಿಯನ್ನು ವಂಚಿಸಿ ಕಟ್ಟಿಕೊಂಡು ಫಾರ್ಮ್​ಹೌಸ್​ ಕಾರಣ ಅಂತ್ಲೂ ಜನ ಮಾತಾಡಿಕೊಳ್ಳುತ್ತಿದ್ದಾರೆ. ಅದು ಅವರವರ ನಂಬಿಕೆಗೆ ಬಿಟ್ಟ ವಿಚಾರ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment