newsfirstkannada.com

ಇನ್ಮುಂದೆ ಹೆಜ್ಜೆ ಹೆಜ್ಜೆಗೂ ಮೋದಿನಾ ಕಾಡುತ್ತಾ INDIA.. ಮಲ್ಲಿಕಾರ್ಜುನ ಖರ್ಗೆ ಹೇಳಿದರ ಹಿಂದಿನ ಗುಟ್ಟೇನು?

Share :

Published June 6, 2024 at 9:03am

  ದೆಹಲಿಯಲ್ಲಿ ಇಂಡಿಯಾ ನಾಯಕರ ಸಭೆ, ಕಾದು ನೋಡುವ ತಂತ್ರ

  ಏರ್​ಪೋರ್ಟ್​​ನಲ್ಲಿ ನಾಯ್ಡುರನ್ನ ಭೇಟಿ ಮಾಡಿದ ಸಿಎಂ ಸ್ಟಾಲಿನ್

  ಖರ್ಗೆಯವರು ಪರೋಕ್ಷವಾಗಿ ನಿತೀಶ್, ನಾಯ್ಡುಗೆ ಆಹ್ವಾನ ನೀಡಿದ್ರಾ?

ಲೋಕಸಮರದಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದಕ್ಕೆ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸದ್ದು-ಗದ್ದಲಗಳು ಏರ್ಪಟ್ಟಿವೆ. ಎನ್​ಡಿಎ ಮಿತ್ರಗಳನ್ನು ಸೆಳೆದು ಸರ್ಕಾರ ರಚನೆ ಮಾಡಲು ಇಂಡಿಯಾ ಕೂಟ ಕೂಡ ತೆರೆ ಮರೆಯಲ್ಲಿ ಕಸರತ್ತು ಮಾಡ್ತಿದೆ. ಇಂಡಿಯಾ ಕೂಡ ನಾಯಕರು ಸಭೆ ನಡೆಸಿದ್ದು, ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.

ಪರೋಕ್ಷವಾಗಿ ನಿತೀಶ್, ನಾಯ್ಡುಗೆ ಖರ್ಗೆ ಆಹ್ವಾನ

ಲೋಕಸಮರದಲ್ಲಿ ಬಿಜೆಪಿಗೆ ಬಹುಮತ ಸಿಗದಿದ್ದಕ್ಕೆ ರಾಷ್ಟ್ರ ರಾಜಕಾರಣದಲ್ಲಿ ರಾಜಕೀಯ ಸದ್ದು-ಗದ್ದಲಗಳು ಏರ್ಪಟ್ಟಿವೆ. ಪ್ರಧಾನಿ ಗದ್ದುಗೆ ಏರಲು ಎನ್​ಡಿಎ ಬಳಿ ಬೇಕಾದ ಬಲವಿದ್ರೂ ವಿರೋಧಿ ಬಣವು ಸರ್ಕಾರ ರಚಿಸಲು ಸರ್ಕಸ್ ಮಾಡ್ತಿದೆ. ಇದರ ನಡುವೆ ನಿತೀಶ್​ಕುಮಾರ್​ ಮತ್ತು ಚಂದ್ರಬಾಬು ನಾಯ್ಡುಗೆ ಮಲ್ಲಿಕಾರ್ಜುನ ಖರ್ಗೆ ಪರೋಕ್ಷ ಆಹ್ವಾನ ನೀಡಿದ್ದಾರೆ.

ಪ್ರಧಾನಿ ಮೋದಿ 3ನೇ ಬಾರಿಗೆ ಅಧಿಕಾರಕ್ಕೆ ಏರುವುದನ್ನು ತಪ್ಪಿಸಲು ಇಂಡಿಯಾ ಮೈತ್ರಿ ಕೂಟವೂ ತೆರೆ ಮರೆಯಲ್ಲೇ ಕಸರತ್ತು ಮಾಡ್ತಿದೆ. ನಂಬರ್​ ಗೇಮ್​ ಆಟದಲ್ಲಿ ಬಲವಿಲ್ಲದಿದ್ದರೂ ಕೂಡ ಬಿಜೆಪಿಯ ಮಿತ್ರ ಪಕ್ಷಗಳಿಗೆ ಗಾಳ ಹಾಕಿ ಸೆಳೆದು, ಇಂಡಿಯಾ ಮೈತ್ರಿ ಕೂಟದ ಸರ್ಕಾರ ರಚನೆ ಮಾಡಲು ಇನ್ನಿಲ್ಲದ ಕಸರತ್ತು ಮಾಡ್ತಿದೆ. ಕಳೆದ ರಾತ್ರಿ ದೆಹಲಿಯ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಇಂಡಿಯಾ ನಾಯಕರು ಒಂದೆಡೆ ಸೇರಿ ಸಭೆಯನ್ನು ನಡೆಸಿದ್ದಾರೆ. ಈ ವೇಳೆ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ, ಇಂಡಿಯಾ ಬ್ಲಾಕ್ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದ್ರು..

ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಎಂದ ಕೈ ಅಧ್ಯಕ್ಷ

ಐಎನ್​ಡಿಐಎ ಸಭೆ ಬಳಿಕ ಮಾತನಾಡಿದ ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇಂದ್ರದಲ್ಲಿ ಸರ್ಕಾರ ಆಡಳಿತ ನಡೆಸಬಾರದು ಎಂಬ ಜನಾದೇಶ ಬಂದಿದೆ. ಜನರ ಆಶಯವನ್ನು ಈಡೇರಿಸಲು ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದ್ರು. ಹಾಗೂ ಸಾಂವಿಧಾನಿಕ ಮೌಲ್ಯಗಳಿಗೆ ಬದ್ಧವಾಗಿರುವ ಎಲ್ಲಾ ಪಕ್ಷಗಳಿಗೆ ಸ್ವಾಗತ ಎಂದು ಪರೋಕ್ಷವಾಗಿ ನಿತೀಶ್​ ಮತ್ತು ನಾಯ್ಡುಗೆ ಪರೋಕ್ಷ ಆಹ್ವಾನ ನೀಡಿದ್ದು, ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ.

ಐಎನ್​ಡಿಐಎ ಬಣವು ಮೋದಿ ನೇತೃತ್ವದ ಬಿಜೆಪಿಯ ಫ್ಯಾಸಿಸ್ಟ್​ ಆಡಳಿತದ ವಿರುದ್ಧ ಹೋರಾಡುವುದನ್ನು ಮುಂದುವರೆಸುತ್ತದೆ. ಬಿಜೆಪಿ ಸರ್ಕಾರ ನಡೆಸಬಾರದು ಎನ್ನುವ ಜನರ ಆದೇಶವನ್ನು ಈಡೇರಿಸಲು ಸೂಕ್ತ ಸಮಯದಲ್ಲಿ ಸರಿಯಾದ ತೀರ್ಮಾನವನ್ನು ತೆಗೆದುಕೊಳ್ಳುತ್ತವೆ.

ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್​ ಅಧ್ಯಕ್ಷ

ಕುತೂಹಲ ಮೂಡಿಸಿದ ನಾಯ್ಡು, ಸ್ಟಾಲಿನ್​ ಭೇಟಿ

ಎನ್​ಡಿಎ ಮಿತ್ರಕೂಟದಲ್ಲಿರುವ ಟಿಡಿಪಿಯನ್ನು ಸೆಳೆಯಲು ಇಂಡಿಯಾ ಕೂಟ ಕಸರತ್ತು ಮಾಡ್ತಿದೆ. ಇದರ ಮಧ್ಯ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ತಮಿಳುನಾಡು ಸಿಎಂ ಸ್ಟಾಲಿನ್​ ಭೇಟಿ ಆಗಿರುವ ಫೋಟೋ ಸಂಚಲನವನ್ನು ಸೃಷ್ಟಿಸಿದೆ. ಎನ್​ಡಿಎ ಸಭೆಗೆ ದೆಹಲಿಗೆ ಬಂದಿದ್ದ ನಾಯ್ಡು ಮತ್ತು ಇಂಡಿಯಾ ಸಭೆಗೆ ಬಂದಿದ್ದ ಸ್ಟಾಲಿನ್​ ತಮ್ಮ ತಮ್ಮ ರಾಜ್ಯಗಳಿಗೆ ವಾಪಸ್​ ಆಗುವಾಗ, ದೆಹಲಿ ಏರ್​ಪೋರ್ಟ್​ನಲ್ಲಿ ನಾಯ್ಡು ಸ್ಟಾಲಿನ್​ ಭೇಟಿಯಾಗಿದ್ದಾರೆ. ಸಭೆ ಮುಗಿಸಿ ಆಂಧ್ರಕ್ಕೆ ವಾಪಸ್​ ಆಗಿರುವ ಚಂದ್ರಬಾಬು ನಾಯ್ಡು ಯಾವುದೇ ಮಾಹಿತಿ ನೀಡದೇ ಮೌನಕ್ಕೆ ಶರಣಾಗಿದ್ದಾರೆ.

ಎನ್​ಡಿಎ ಮೈತ್ರಿ ಕೂಟದ ನಾಯಕನಾಗಿ, 3ನೇ ಬಾರಿಗೆ ಪ್ರಧಾನಿ ಹುದ್ದೆಗೆ ಹೇರಲು ಸಿದ್ದವಾಗಿದ್ದಾರೆ. ಆದ್ರೆ ಮೋದಿಗೆ ಠಕ್ಕರ್​ ಕೊಡಲು ಇಂಡಿಯಾ ಕೂಡ ರಣತಂತ್ರಗಳನ್ನು ರೂಪಿಸುತ್ತಿದ್ದು, ಕಾದು ನೋಡುವ ತಂತ್ರದ ಮೊರೆ ಹೋಗಿದೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್ಮುಂದೆ ಹೆಜ್ಜೆ ಹೆಜ್ಜೆಗೂ ಮೋದಿನಾ ಕಾಡುತ್ತಾ INDIA.. ಮಲ್ಲಿಕಾರ್ಜುನ ಖರ್ಗೆ ಹೇಳಿದರ ಹಿಂದಿನ ಗುಟ್ಟೇನು?

https://newsfirstlive.com/wp-content/uploads/2023/12/KHARGE_MODI.jpg

Load More