newsfirstkannada.com

ಈ ದೇಶದಲ್ಲಿ ಜನ ದಿನಕ್ಕೊಮ್ಮೆ ಆದ್ರೂ ನಗಲೇಬೇಕು.. ಇಲ್ಲದೆ ಹೋದ್ರೆ ಏನಾಗುತ್ತೆ ಗೊತ್ತಾ?

Share :

Published July 12, 2024 at 6:10am

    ಮನುಷ್ಯ ದಿನಕ್ಕೊಮ್ಮೆ ನಗುವುದಿಲ್ಲ ಅಂದ್ರೆ ಏನೆಲ್ಲಾ ದುಷ್ಪರಿಣಾಮ ಗೊತ್ತಾ?

    ನಗುವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗುತ್ತೆ ಈ ದೇಶದಲ್ಲಿ

    ದಿನಕ್ಕೆ ಒಂದು ಬಾರಿಯೂ ನಗಲಿಲ್ಲ ಅಂದ್ರೆ ಕಠಿಣ ಶಿಕ್ಷೆ ನೀಡಲಾಗುತ್ತಂತೆ

ನಕ್ಕರೆ ಜೀವನವೇ ಸ್ವರ್ಗ ಎಂದು ಹೇಳುತ್ತಾರೆ. ಯಾವ ಮನುಷ್ಯ ಹೆಚ್ಚು ಖುಷಿಯಾಗಿರುತ್ತಾನೆ ಅವನಿಗೆ ಆಯಸ್ಸು ಹೆಚ್ಚು ಎಂಬ ಮಾತಿದೆ. ನಗುವಿನಿಂದ ಮನಸ್ಸಿನ ಬೇಸರ, ಮನಸ್ಸಿನ ಖಿನ್ನತೆ ಎಲ್ಲವೂ ದೂರವಾಗುತ್ತದೆ. ಹೀಗೆ ನಗುವಿನಿಂದ ಜೀವನ ಸುಖಮಯ ಆಗುತ್ತದೆ. ನಾವೆಲ್ಲರೂ ನಗುನಗುತ್ತಾ ಇದ್ದರೆ ಬರುವ ಕಷ್ಟಗಳನ್ನು ಸುಲಭವಾಗಿ ಎದುರಿಸಬಹುದು. ನಮಗೆ ಅನುಕೂಲಕರವಾದ ಸಂದರ್ಭವನ್ನು ನಾವೇ ಸ್ವತಹ ಸೃಷ್ಟಿ ಮಾಡಿಕೊಳ್ಳಬಹುದು. ಮನುಷ್ಯನಿಗೆ ಬರುವ ಹಲವಾರು ಕಾಯಿಲೆಗಳಿಗೆ ಇಂದಿಗೂ ಸಹ ನಗುವಿಗಿಂತ ಒಳ್ಳೆಯ ಔಷಧಿಯಾಗಿದೆ. ಹೀಗೆ ದಿನಕ್ಕೆ ಒಮ್ಮೆಯಾದ್ರೂ ನಗುವ ಕಾನೂನು ಬಂದರೆ ಹೇಗಿರುತ್ತೆ?

ಇದನ್ನೂ ಓದಿ: ಇಂದು ವಿಶ್ವ ಜನಸಂಖ್ಯಾ ದಿನಾಚರಣೆ.. 35ನೇ ವರ್ಷಕ್ಕೆ  10ನೇ ಮಗುವಿಗೆ ಜನ್ಮ ನೀಡಿದ ತಾಯಿ!

ಹೌದು, ಇದೇ ರೀತಿ ಜಪಾನ್​​ ದೇಶದಲ್ಲಿ ನಗುವನ್ನು ಬಹಳ ಗಂಭೀರವಾಗಿ ಪರಿಗಣಿಸಲಾಗಿದೆ. ಉತ್ತರ ಜಪಾನ್‌ನ ಯಮಗಾಟಾ ಪ್ರಾಂತ್ಯದಲ್ಲಿ ಸ್ಥಳೀಯ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನವನ್ನು ನಡೆಸಿದ ನಂತರ ಕಳೆದ ವಾರ ಸುಗ್ರೀವಾಜ್ಞೆಯನ್ನು ಅಂಗೀಕರಿಸಲಾಯಿತು. ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಸಾಕ್ಷ್ಯದ ಆಧಾರದ ಮೇಲೆ ನಾಗರಿಕರು ದಿನಕ್ಕೆ ಒಮ್ಮೆಯಾದರೂ ನಗಬೇಕಂತೆ.

ಈ ನಿಯಮವು ಐದು ವರ್ಷಗಳ ಹಿಂದೆ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ವೈಜ್ಞಾನಿಕ ಆಧಾರವನ್ನು ಒಳಗೊಂಡಿದೆ. ಈ ಸಂಬಂಧ ಯಮಗಟಾ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ತಂಡವು ಅಧ್ಯಯನವನ್ನು ನಡೆಸಿದ್ದು, ನಗುವು ಹಲವಾರು ಪ್ರಯೋಜನಗಳೊಂದಿಗೆ ಬರುತ್ತದೆ ಎಂಬುದಕ್ಕೆ ಬಲವಾದ ಪುರಾವೆಗಳಿವೆ ಎಂದು ಹೇಳುತ್ತದೆ. ಯಮಗತ ನಾಗರಿಕರು ನಗುವಿನ ಪ್ರಯೋಜನಕಾರಿ ಆರೋಗ್ಯದ ಪರಿಣಾಮಗಳ ಬಗ್ಗೆ ತಮ್ಮ ತಿಳುವಳಿಕೆಯನ್ನು ಗಾಢವಾಗಿಸುತ್ತಾರೆ. ದಿನಕ್ಕೆ ಒಮ್ಮೆ ನಗುವುದು ಮುಂತಾದ ವಿಧಾನಗಳ ಮೂಲಕ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ರೂಪಿಸಲು ಪ್ರಯತ್ನಿಸುತ್ತಾರೆ ಎಂದು ನಗೆ ನಿಯಮವು ಹೇಳುತ್ತದೆ. ಕೆಲಸದ ಸ್ಥಳಗಳಲ್ಲಿ ನಗು ತುಂಬಿದ ವಾತಾವರಣ ನಿರ್ಮಿಸಲು ನಿರ್ದೇಶಿಸಲಾಗಿದೆ. ಪ್ರತಿ ತಿಂಗಳ ಎಂಟನೇ ದಿನವನ್ನು ನಗುವಿನ ದಿನ ಎಂದು ನಿಗದಿಪಡಿಸಲಾಗಿದೆ. ನಮ್ಮಲ್ಲಿರುವ ನಗುವನ್ನು ಇನ್ನಷ್ಟು ಉತ್ತೇಜಿಸಬೇಕು.

ಈ ನಿಯಮವನ್ನು ಹಲವಾರು ರಾಜಕಾರಣಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ನಗುವುದು ಒಳ್ಳೆಯದೇ ಆಗಿದ್ದರೂ ಅದು ವೈಯಕ್ತಿಕ ಆಯ್ಕೆಯಾಗಿದೆ ಮತ್ತು ಕಾನೂನಿನ ಮೂಲಕ ಜನರನ್ನು ಬಲವಂತಪಡಿಸಬಾರದು ಎಂದು ಹೇಳಿದ್ದಾರೆ. ಆದರೆ ಈ ಕಾನೂನು ನಿಯಮವನ್ನು ಉಲ್ಲಂಘಿಸಿದವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸಲಾಗುತ್ತದೆಯಂತೆ. ಇನ್ನು, ನಗುವುದು ಅಥವಾ ನಗದಿರುವುದು ಸಂವಿಧಾನವು ಆಲೋಚನಾ ಸ್ವಾತಂತ್ರ್ಯ ಮತ್ತು ಆಂತರಿಕ ಸ್ವಾತಂತ್ರ್ಯದ ಬಗ್ಗೆ ಖಾತರಿಪಡಿಸುವ ಮೂಲಭೂತ ಮಾನವ ಹಕ್ಕುಗಳಲ್ಲಿ ಒಂದಾಗಿದೆ ಎಂದು ಜಪಾನ್ ಕಮ್ಯುನಿಸ್ಟ್ ಪಕ್ಷದ ಅಸೆಂಬ್ಲಿಮ್ಯಾನ್ ಟೋರು ಸೆಕಿ ಹೇಳಿದ್ದಾರೆ.

ನಗು ಅಧ್ಯಯನ ಹೇಳೋದೇನು?

40 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಸುಮಾರು 17,152 ಜನರು ಅಧ್ಯಯನದಲ್ಲಿ ಭಾಗವಹಿಸಿದ್ದಾರೆ. ಹೀಗಾಗಿ ಅವರ ಆರೋಗ್ಯವನ್ನು ಹಲವಾರು ವರ್ಷಗಳಿಂದ ಟ್ರ್ಯಾಕ್ ಮಾಡಲಾಯಿತು. ತಿಂಗಳಿಗೊಮ್ಮೆ ನಗುವವರಿಗೆ ಹೋಲಿಸಿದರೆ ವಾರಕ್ಕೊಮ್ಮೆಯಾದರೂ ನಗುವವರಿಗೆ ಹೃದಯ ಸಂಬಂಧಿ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಎಂದು ಫಲಿತಾಂಶಗಳು ತೋರಿಸಿವೆ. ಆದಾಗ್ಯೂ, ಜೋರಾಗಿ ನಗುವುದು ಮಾತ್ರ ನಗು ಎಂದು ಪರಿಗಣಿಸಲಾಗುತ್ತದೆ. ಆದರೆ ಮೂಕವಾಗಿ ನಗುವುದನ್ನು ಗಣನೆಗೆ ತೆಗೆದುಕೊಳ್ಳಲಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯಕಲ

ಈ ದೇಶದಲ್ಲಿ ಜನ ದಿನಕ್ಕೊಮ್ಮೆ ಆದ್ರೂ ನಗಲೇಬೇಕು.. ಇಲ್ಲದೆ ಹೋದ್ರೆ ಏನಾಗುತ್ತೆ ಗೊತ್ತಾ?

https://newsfirstlive.com/wp-content/uploads/2024/07/laugh.jpg

Load More