Advertisment

ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನು ಹುಡುಕುತ್ತಿದ್ದೀರಾ.. ಎಚ್ಚರ, ಇದು ನೀವು ಓದಲೇಬೇಕಾದ ಸ್ಟೋರಿ

author-image
Gopal Kulkarni
Updated On
ಮ್ಯಾಟ್ರಿಮೋನಿಯಲ್ಲಿ ಹುಡುಗನನ್ನು ಹುಡುಕುತ್ತಿದ್ದೀರಾ.. ಎಚ್ಚರ, ಇದು ನೀವು ಓದಲೇಬೇಕಾದ ಸ್ಟೋರಿ
Advertisment
  • ಕನ್ನಡ ಮ್ಯಾಟ್ರಿಮೋನಿಯಲ್ಲಿ 8 ಯುವತಿಯರಿಗೆ ವಂಚನೆ
  • ಲವ್ - ನೌಕರಿ & ದೋಖಾ ಮಾಡಿದ ಕಿರಾತಕ ಅರೆಸ್ಟ್​
  • ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಧು ಬಂಧನ

ಎರಡು ಜೋಡಿಗಳನ್ನು ಕೂಡಿಸುವ ಉದ್ದೇಶದಿಂದ, ತಮಗೂ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಅನೇಕ ಮ್ಯಾಟ್ರಿಮೋನಿಗಳು ಈಗ ತಲೆ ಎತ್ತಿವೆ. ಅದರಲ್ಲಿ ಜೋಡಿ ಅರಸಿಕೊಂಡು ಹುಡುಗ ಹುಡುಗಿಯರು ತಮ್ಮ ಪ್ರೊಫೈಲ್​ಗಳನ್ನು ಕ್ರಿಯೇಟ್ ಮಾಡುತ್ತಾರೆ. ಯಾವುದೇ ಒಂದು ಪ್ರೊಫೈಲ್ ಮ್ಯಾಚ್ ಆದ ತಕ್ಷಣ ಹುಡುಗನನ್ನು ಕಣ್ಮುಚ್ಚಿಕೊಂಡು ಒಪ್ಪಿಕೊಳ್ಳುವ ಮುನ್ನ ಕೊಂಚ ಯೋಚಿಸಿ. ಮದುವೆಯ ಹೆಸರಲ್ಲಿ ಲವ್ ಹೆಸರಲ್ಲಿ ನಿಮ್ಮನ್ನು ವಂಚಿಸುವ ಕಿರಾತಕರು ಇದ್ದಾರೆ. ದಾವಣಗೆರೆಯಲ್ಲಿ ಅಂತವನೇ ಒಬ್ಬನು ಸಿಕ್ಕಿಬಿದ್ದಿದ್ದಾನೆ.

Advertisment

ಮಂಡ್ಯ ತಾಲೂಕಿನ ಮಾಚಹಳ್ಳಿ ಗ್ರಾಮದ ಮಧು ಎಂಬುವವನನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ ಈತ 8 ಯುವತಿಯರಿಗೆ ವಂಚಿಸಿದ್ದಾನೆ ಎಂದು ತಿಳಿದು ಬಂದಿದೆ. ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಈತ ಮೋಸ ಮಾಡುತ್ತಿದ್ದ. ಬರೋಬ್ಬರಿ 8 ಯುವತಿಯರಿಗೆ ಇವನು ಇದೇ ರೀತಿ ದೋಖಾ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಅದು ಮಾತ್ರವಲ್ಲ, ಮದುವೆಯಾಗುವುದಾಗಿ ನಂಬಿಸಿ ಅವರಿಂದ ಹಣವನ್ನು ಕೂಡ ಪೀಕುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಸ್ನಾನ ಮಾಡಿಸಲು ಹೋಗಿ ಯುವಕ ನೀರು ಪಾಲು; ಪವಾಡ ರೀತಿಯಲ್ಲಿ ಮನೆ ಸೇರಿದ ಕುದುರೆ!

8 ವಿವಿಧ ಪ್ರಕರಣಗಳಲ್ಲಿ ಈತ 62 ಲಕ್ಷ ರೂಪಾಯಿಗೂ ಅಧಿಕ ಹಣ ಪೀಕಿದ್ದಾನೆ. ಇವನ ಆಟ ಇಷ್ಟಕ್ಕೆ ಮುಗಿಯುವುದಿಲ್ಲ. ನೌಕರಿ ಕೊಡಿಸುತ್ತೇನೆ ಎಂದು ಹೇಳಿಯೂ ಸಹ ಇವನು ಹಲವರಲ್ಲಿ ಹಣವನ್ನು ಪೀಕಿರುವ ಅರೋಪವು ಇದೆ. ಬೆಂಗಳೂರು ಸೇರಿ 8 ಕಡೆ ಆರೋಪಿ ಮಧು ಮೇಲೆ ಪ್ರಕರಣಗಳು ದಾಖಲಾಗಿವೆ. ದಾವಣಗೆರೆ-ಹರಿಹರ-ಮಂಡ್ಯ-ಚಿಕ್ಕಮಗಳೂರು, ಬೆಂಗಳೂರು ಸೇರಿ 8 ಕಡೆ ಮಧು ಮೇಲೆ ಪ್ರಕರಣ ದಾಖಲಾಗಿದ್ದವು. ಈತನನ್ನು ಬಂಧಿಸಿರುವ ದಾವಣಗೆರೆ ಕೋರ್ಟ್​​ಗೆ ಹಾಜರುಪಡಿಸಿ ನ್ಯಾಯಾಂಗ ವಶಕ್ಕೆ ಪಡೆದಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment