/newsfirstlive-kannada/media/post_attachments/wp-content/uploads/2025/03/Mandya-Student-Tragedy-1.jpg)
ಮಂಡ್ಯ ಜಿಲ್ಲೆಯ ಬಂದೀಗೌಡ ಬಡಾವಣೆ ಬಳಿ ಹೃದಯ ವಿದ್ರಾವಕ ಘಟನೆ ನಡೆದಿದೆ. 19 ವರ್ಷದ ವಿದ್ಯಾರ್ಥಿನಿ ಸುಹಾನಾ ರೈಲಿಗೆ ತಲೆಕೊಟ್ಟು ಪ್ರಾಣ ಕಳೆದುಕೊಂಡಿದ್ದಾರೆ.
ಸುಹಾನಾ ಮೈಸೂರಲ್ಲಿ ಪ್ರಥಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದರು. ನಿನ್ನೆ ಸುಹಾನಾ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದರು.
ಮಂಡ್ಯದ ಪೊಲೀಸ್ ಕ್ವಾಟ್ರಸ್ ಮನೆಯಿಂದ ಬೈಕ್ ತೆಗೆದುಕೊಂಡು ಹೋದ ಸುಹಾನಾ ಶವ ಬಂದೀಗೌಡ ಬಡಾವಣೆ ಬಳಿ ಪತ್ತೆಯಾಗಿದೆ.
ಇದನ್ನೂ ಓದಿ: ಮೊದಲ ಪಂದ್ಯಕ್ಕೂ ಮುನ್ನ ಅಣ್ಣಾವ್ರ ನೆನಪಿಸಿದ RCB; ಕ್ಯಾಪ್ಟನ್ ರಜತ್ ಅಭಿಮಾನಿಗಳಿಗೆ ಹೇಳಿದ್ದೇನು?
ಮೃತ ಸುಹಾನ ಎಂದಿನಂತೆ ಕಾಲೇಜು ಮುಗಿಸಿ ಮನೆಗೆ ಬಂದಿದ್ದರು. ಆದರೆ ಏನಾಯ್ತು ಅನ್ನೋದು ಗೊತ್ತಾಗಿಲ್ಲ. ನಿನ್ನೆ ಚಾಮುಂಡಿ ಎಕ್ಸ್ ಪ್ರೆಸ್ ರೈಲಿಗೆ ತಲೆ ಕೊಟ್ಟು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ದುರಂತದ ಈ ಘಟನೆಗೆ ಕಾರಣ ಏನು ಅನ್ನೋದು ತಿಳಿದು ಬಂದಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಂಡ್ಯ ರೈಲ್ವೇ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ