/newsfirstlive-kannada/media/post_attachments/wp-content/uploads/2025/03/NANDINI_IAS.jpg)
ಸೋಲು ಸಾವಲ್ಲ.. ಅದು ಗೆಲ್ಲೋಕಿರೋ ಮತ್ತೊಂದು ಅವಕಾಶ. ಎಷ್ಟೋ ಜನ ಒಂದು ಸೋಲಿಗೇ ಸುಸ್ತಾಗ್ತಾರೆ. ಎರಡ್ಮೂರು ಬಾರಿ ಅದೇ ಸೋಲು ಕಾಡಿದಾಗ ಕುಗ್ಗಿ ಹೋಗ್ತಾರೆ. ಹಾಗೆ ಕುಗ್ಗಿ ಹೋಗಿರೋರಿಗೆ ಸ್ಪೂರ್ತಿ, ಗೆಲುವಿನ ಶಕ್ತಿ ನಂದಿನಿ ಕೆ.ಆರ್. ಮಂಡ್ಯ ಜಿಲ್ಲಾ ಪಂಚಾಯತ್ ಸಿಇಓ. 2017ರ ಯುಪಿಎಸ್‌ಸಿ ಪರೀಕ್ಷೆಯ ಆಲ್ ಇಂಡಿಯಾ ಟಾಪರ್. ಕರ್ನಾಟಕದಿಂದ ಮೊದಲ ಮಹಿಳಾ ಟಾಪರ್ ಮಿಸ್.ನಂದಿನಿ ಕೆ.ಆರ್.
[caption id="attachment_114109" align="alignnone" width="800"] ರಾಜಮಾತೆ ಪ್ರಮೋದಾದೇವಿ ಹಾಗೂ ನಂದಿನಿ ಕೆ.ಆರ್[/caption]
ನಂದಿನಿಯವ್ರು ಅಪ್ಪಟ ಕನ್ನಡದ ಹುಡುಗಿ. ಹುಟ್ಟಿದ್ದು ಚಿನ್ನದ ನಾಡು ಕೋಲಾರದಲ್ಲಿ. ಸ್ಕೂಲ್ ಮೇಷ್ಟ್ರ ಮಗಳು. ಕೋಲಾರದಲ್ಲೇ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿ, ಮೂಡುಬಿದ್ರೆಯ ಆಳ್ವಾಸ್‌ನಲ್ಲಿ ಪಿಯು ಕಂಪ್ಲೀಟ್ ಮಾಡಿದ ನಂದಿನಿ ಅವರು ಎಂಎಸ್ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಗೋಲ್ಡ್ ಮೆಡಲ್‌ನಲ್ಲಿ ಪಾಸ್ ಆದವರು. ನಂತರ ಮೂರು ವರ್ಷ ಪಿಡಬ್ಲ್ಯುಡಿ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ಮಾಡಿದರು.
ನಂದಿನಿ ಅವರು ಮೊದಲು ಯುಪಿಎಸ್‌ಸಿ ಪರೀಕ್ಷೆ ಬರೆದಿದ್ದು 2013ರಲ್ಲಿ. ಆದ್ರೆ ಮಾರ್ಗದರ್ಶನದ ಕೊರತೆ ಫೇಲ್ ಆಗುವಂತೆ ಮಾಡಿತ್ತು. ತನ್ನ ಎರಡನೇ ಅಟೆಂಪ್ಟ್‌ನಲ್ಲಿ ಕನ್ನಡವನ್ನ ಆಪ್ಶನಲ್ ವಿಷಯವಾಗಿ ಆಯ್ಕೆ ಮಾಡಿದ ನಂದಿನಿಯವರು ಆಗ ಐಆರ್‌ಎಸ್‌ಗೆ ಆಯ್ಕೆಯಾದರೂ ಐಎಎಸ್ ಆಗೋಕೆ ಱಂಕ್ ಸಾಲಲಿಲ್ಲ.
[caption id="attachment_114103" align="alignnone" width="800"] ಕಲಾವಿದರ ಜೊತೆ ನಿಂತುಕೊಂಡಿರುವ ನ್ಯೂಸ್ಫಸ್ಟ್ ಸಿಇಓ ಎಸ್ ರವಿಕುಮಾರ್[/caption]
2015ರಲ್ಲಿ ಇನ್ನೇನು ಪರೀಕ್ಷೆ ಬರೀಬೇಕು ಅನ್ನೋವಾಗ ಡೆಂಘೀ ಕಾಡಿತ್ತು. ಆದ್ರೆ ನಾಲ್ಕನೇ ಅಟೆಂಪ್ಟ್‌ನಲ್ಲಿ ಇಡೀ ದೇಶ ಮೆಚ್ಚುವಂತೆ ಕನ್ನಡದ ಹುಡುಗಿ ನಂದಿನಿ ನಂಬರ್- 1 ಱಂಕ್‌ನಲ್ಲಿ ಯುಪಿಎಸ್‌ಸಿ ಪಾಸ್ ಮಾಡಿದ್ದರು.
ಮೊದಲಿಗೆ ದೆಹಲಿಯಲ್ಲಿ ಇಂಧನ ಇಲಾಖೆಯಲ್ಲಿ ಅಸಿಸ್ಟೆಂಟ್ ಸೆಕ್ರೆಟರಿ ಆಗಿದ್ದ ಇವರು ನಂತರ ತುಮಕೂರಿನ ತಿಪಟೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಮತ್ತು ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್, ನಂತರ ಬಳ್ಳಾರಿ ಜಿಲ್ಲಾ ಪಂಚಾಯತ್ ಸಿಇಓ ಆಗಿದ್ದರು. ಇವರ ಅವಧಿಯಲ್ಲೇ 2020-21ರಲ್ಲಿ ಬಳ್ಳಾರಿ ರಾಜ್ಯದಲ್ಲೇ ಅತ್ಯುತ್ತಮ ಜಿಲ್ಲಾ ಪಂಚಾಯತ್ ಪ್ರಶಸ್ತಿ ಪಡೆದಿತ್ತು.
ಇದನ್ನೂ ಓದಿ: ಇವರು ‘ಕರ್ನಾಟಕದ ಪ್ಯಾಡ್ ವುಮನ್’; ಭಾರತಿ ಗುಡ್ಲಾನೂರ್ಗೆ ನ್ಯೂಸ್‌ಫಸ್ಟ್‌ನ ‘ಮಹಿಳಾ ಮಾಣಿಕ್ಯ’ ಗೌರವ
[caption id="attachment_114104" align="alignnone" width="800"] ರಾಜಮಾತೆ ಪ್ರಮೋದಾದೇವಿ, ನಂದಿನಿ ಕೆ.ಆರ್ ಹಾಗೂ ವಚನಾನಂದ ಶ್ರೀ[/caption]
ಮರು ವರ್ಷದಲ್ಲಿ ಬೆಸ್ಟ್ ಸಿಇಓ ಪ್ರಶಸ್ತಿ ನಂದಿನಿ ಅವ್ರಿಗೆ ಸಿಕ್ಕಿತ್ತು. ನಂತ್ರ ಕಮರ್ಷಿಯಲ್ ಟ್ಯಾಕ್ಸಸ್‌ನ ಅಡಿಷನಲ್ ಕಮಿಷನರ್ ಆದ ನಂದಿನಿ ಅವ್ರು ಪ್ರಸ್ತುತ ಮಂಡ್ಯ ಸಿಇಓ ಆಗಿ ಕಾರ್ಯ ನಿರ್ವಹಿಸ್ತಿದ್ದಾರೆ. ತಮ್ಮ ಸಮಾಜ ಮುಖಿ ಕಲಸ, ನಿರ್ಧಾರಗಳಿಂದ ಹೆಸರಾಗಿರೋ ನಂದಿನಿ ಕೆ.ಆರ್ ಅವರು ನ್ಯೂಸ್‌ಫಸ್ಟ್‌ನ ಮಹಿಳಾ ಮಾಣಿಕ್ಯ ಪಡೆದಿರುವುದು ಹೆಮ್ಮೆ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ