/newsfirstlive-kannada/media/post_attachments/wp-content/uploads/2024/11/RCB_TEAM-1.jpg)
- ಆರ್‌ಸಿಬಿ ಟೀಮೂ ನಮ್ಮದೇ, ಕಪ್ಪೂ ನಮ್ಮದೇ ಎಂಬ ಧ್ಯೇಯವಾಕ್ಯ
- ಅಭಿಮಾನಿಗಳೇ ಬನ್ನಿ ಆರ್‌ಸಿಬಿ ಮಾಲೀಕರಾಗೋಣಾ ಎಂದು ಕರೆ
- ಆಕ್ಷನ್ನಲ್ಲಿ ಆಟಗಾರರನ್ನ ಖರೀದಿ ಮಾಡಲು ಆರ್‌ಸಿಬಿ ಎಡವಿತಾ.?
ಮಂಡ್ಯ: ಮೆಗಾ ಆಕ್ಷನ್​ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಫ್ರಾಂಚೈಸಿ ಆಟಗಾರರನ್ನ ಖರೀದಿಸಿತ್ತು. ಇದು ಕನ್ನಡಿಗರಿಗೆ ಅಷ್ಟೇನೂ ಖುಷಿ ತಂದಿರಲಿಲ್ಲ. ಹೀಗಾಗಿಯೇ ಆರ್​ಸಿಬಿ ಮ್ಯಾನೇಜ್ಮೆಂಟ್ ವಿರುದ್ಧ ಸಿಡಿದ ಅಭಿಮಾನಿಗಳು ಇಡೀ ತಂಡವನ್ನ ಖರೀದಿ ಮಾಡಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಖರೀದಿ ಮಾಡಲು ‘ಆಲ್ ಇಂಡಿಯಾ RCB ಟೀಮ್ ಫ್ಯಾನ್ಸ್​ ಅಸ್ಸೋಸಿಯೆಷನ್’ ಪ್ಲಾನ್ ಮಾಡಿದೆ. ಈ ಬಗ್ಗೆ ಈಗಾಗಲೇ ಯೋಜನೆ ರೂಪಿಸಿದೆ. ಸದ್ಯ ಮಂಡ್ಯದ ಮಳವಳ್ಳಿಯ ಆರ್‌ಸಿಬಿ ಫ್ಯಾನ್ಸ್ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೇ ಟೀಮೂ ನಮ್ಮದೇ, ಕಪ್ಪು ನಮ್ಮದೇ ಎಂಬ ಧ್ಯೇಯವಾಕ್ಯ ಇಟ್ಟುಕೊಂಡು ಇವರು ಆರ್‌ಸಿಬಿ ಮಾಲೀಕತ್ವ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬಾಲಿವುಡ್ ಬ್ಯೂಟಿಗೆ ಮನಸೋತ RCB ಮಾಜಿ ಬೌಲರ್.. ಪ್ರೀತಿ ಬಲೆಗೆ ಬಿದ್ರಾ ಸಿರಾಜ್?
ಈ ಪ್ಲಾನ್ ಅಸಾಧ್ಯವಾದರೂ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ಮೊನ್ನೆ ನಡೆದ ಆಕ್ಷನ್​ನಲ್ಲಿ ಉತ್ತಮ ಪ್ಲೇಯರ್ಸ್​ ಆಯ್ಕೆ ಮಾಡಿಕೊಳ್ಳುವಳ್ಳಿ ಆರ್‌ಸಿಬಿ ಮ್ಯಾನೇಜ್ಮೇಂಟ್ ಎಡವಿದೆ ಎಂದು ಹೇಳಲಾಗುತ್ತಿದೆ. ಕೆ.ಎಲ್ ರಾಹುಲ್​ ಸೇರಿದಂತೆ ಪ್ರಮುಖ ಆಟಗಾರರನ್ನ ಖರೀದಿ ಮಾಡದಿದ್ದಕ್ಕೆ ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
10 ಲಕ್ಷ ಆರ್‌ಸಿಬಿ ಅಭಿಮಾನಿಗಳಿಂದ ತಲಾ 10 ಸಾವಿರದಂತೆ ಷೇರು ಸಂಗ್ರಹ ಮಾಡಲಾಗುವುದು. ಸಂಗ್ರಹವಾಗುವ 1,000 ಕೋಟಿ ಹಣದಲ್ಲಿ ಇಡೀ ತಂಡವನ್ನ ಖರೀದಿ ಮಾಡುತ್ತಾರಂತೆ. ಅಭಿಮಾನಿಗಳ ವೋಟಿಂಗ್ ಮೂಲಕ ಆಟಗಾರರನ್ನ ಖರೀದಿ ಮಾಡಲಾಗುತ್ತದೆ. ಇದರಲ್ಲಿನ ಪ್ರತಿ ಸದಸ್ಯರಿಗೆ ಸೀಸನ್​ನಲ್ಲಿ ಆರ್‌ಸಿಬಿ ಆಡುವ 1 ಪಂದ್ಯ ನೋಡಲು ಉಚಿತ ಅವಕಾಶ ಮಾಡಿಕೊಡಲಾಗುತ್ತದೆ. ತಂಡವನ್ನ ಆಯ್ಕೆ ಮಾಡಲು ಕೈ ಜೋಡಿಸಿ ಎಂದು ಮನವಿ ಮಾಡಿರುವ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ