/newsfirstlive-kannada/media/post_attachments/wp-content/uploads/2025/05/MND-FATHER.jpg)
ಮಂಡ್ಯದ ಸ್ವರ್ಣಸಂದ್ರ ಬಳಿ ಹೃದಯ ವಿದ್ರಾವಕ ಘಟನೆ ನಡೆದು ಹೋಗಿದೆ. ಹೆಲ್ಮೆಟ್ ತಪಾಸಣೆಯಲ್ಲಿದ್ದ ಪೊಲೀಸರು ಅಡ್ಡಗಟ್ಟಿದಾಗ, ಬೈಕ್ ಸ್ಕಿಡ್ ಆಗಿ ಬಿದ್ದು ಮೂರೂವರೆ ವರ್ಷದ ಮಗುವಿನ ಜೀವ ಹೋಗಿದೆ. ಮುದ್ದಾದ ಮಗಳನ್ನು ಕಳೆದುಕೊಂಡ ಪೋಷಕರು ಮಡಿಲಲ್ಲಿ ಕಂದಮ್ಮನ ಇಟ್ಟುಕೊಂಡು ಕಣ್ಣೀರಿಟ್ಟ ದೃಶ್ಯ, ಎಲ್ಲರ ಕಣ್ಣಾಲೆಗಳನ್ನು ಒದ್ದೆ ಮಾಡಿದೆ.
ಹೃತೀಕ್ಷ ಮೃತ ಮಗು. ಹೃತಿಕ್ಷಗೆ ನಾಯಿ ಕಚ್ಚಿತ್ತು. ಹೀಗಾಗಿ ತರಾತುರಿಯಲ್ಲಿ ಅಪ್ಪ-ಅಮ್ಮ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಪೊಲೀಸರು ಬೈಕ್ಗೆ ಅಡ್ಡ ಮಾಡಿದಾಗ ದುರಂತ ಸಂಭವಿಸಿದೆ. ಮಗು ಕಳೆದುಕೊಂಡ ನೋವಿನಲ್ಲಿ ಮಾತನಾಡಿರುವ ತಂದೆ, ಪಾಪುಗೆ ನಾಯಿ ಕಚ್ಚಿತ್ತು. ಮದ್ದೂರಿನಿಂದ ಕರೆದುಕೊಂಡು ಬಂದ್ವಿ. ಇಲ್ಲಿನ ಸರ್ವೀಸ್ ರಸ್ತೆಯಲ್ಲಿ ಗಾಡಿಯನ್ನು ಅಡ್ಡ ಹಾಕಿದ್ದಾರೆ.
ಇದನ್ನೂ ಓದಿ: ಮಗುಗೆ ಕಚ್ಚಿದ್ದ ನಾಯಿ.. ಆಸ್ಪತ್ರೆಗೆ ಹೋಗುವಾಗ ಬೈಕ್ ಅಡ್ಡಗಟ್ಟಿದ್ದಕ್ಕೆ ದುರಂತ
ಗಾಡಿ ಅಡ್ಡ ಹಾಕಿದಾಗ ಇಲ್ಲ, ನಾವು ಅರ್ಜೆಂಟ್ ಅಲ್ಲಿ ಆಸ್ಪತ್ರೆಗೆ ಹೊರಟಿದ್ವಿ ಎಂದಿದ್ದಾರೆ. ಆಗ ಗಾಡಿ ಮೂವ್ ಮಾಡಲು ಕೊಟ್ಟಿಲ್ಲ. ಅವರ ಗಾಡಿ ಅಡ್ಡ ಹಾಕಿದ ಪರಿಣಾಮ ನಮ್ಮ ಬೈಕ್ ಸ್ಕಿಡ್ ಆಗಿದೆ. ಸ್ಕಿಡ್ ಆಗಿ ಮಗು ಬೀಳುತ್ತಿದ್ದಂತೆಯೇ ಬೇರೆ ವಾಹನ ಬಂದು ಪಾಪು ಮೇಲೆ ಹತ್ತಿದೆ. ನನ್ನ ಮಗಳ ಜೀವ ತಿನ್ನೋಕೆ ಇವರೇ ಕಾರಣ ಸ್ವಾಮಿ. ಅವರಿಗೆ ಬ್ಯಾಂಡೇಜ್ ಹಾಕಿದ್ದೂ ಕಾಣಿಸಿಲ್ವಾ? ಇವರ ದುಡ್ಡನ್ನು ತಿಂದು ಹೋಗ್ತೀವಾ? ನನ್ನ ಮಗಳಿಗೆ ಪರಿಹಾರ ಕೊಡ್ತಾರಂತೆ. ನಾನೇ ಹತ್ತು ಲಕ್ಷ ಕೊಡ್ತೀನಿ ಸ್ವಾಮಿ. ನೀವು ನನ್ನ ಮಗಳ ತಂದು ಕೊಡ್ತೀರಾ? ನೀವು ನನ್ನ ಮಗಳನ್ನು ತಂದು ಕೊಡ್ತೀರಾ ಎಂದು ಕಣ್ಣೀರು ಇಟ್ಟಿದ್ದಾರೆ.
ಇದನ್ನೂ ಓದಿ: ಅಲ್ಪನಿಗೆ ಐಶ್ವರ್ಯ ಬಂದ್ರೆ.. ಮಡೆನೂರು ಮನುಗೆ ಸಖತ್ ಟಾಂಗ್ ಕೊಟ್ಟ ನಟ ಜಗ್ಗೇಶ್; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ