/newsfirstlive-kannada/media/post_attachments/wp-content/uploads/2025/04/mandya3.jpg)
ಮಂಡ್ಯ: ಕಬ್ಬಡಿ ಪಂದ್ಯದ ವೇಳೆ ವೀಕ್ಷಕರ ಗ್ಯಾಲರಿ ಕುಸಿದು ಸ್ಥಳದಲ್ಲೇ ಓರ್ವ ಬಲಿಯಾಗಿದ್ದು, 13 ಜನರಿಗೆ ಗಾಯಗಳಾಗಿವೆ. ಗ್ಯಾಲರಿ ಕೆಳಗಡೆ ಸಿಲುಕಿ ಪಾಪಣ್ಣಚಾರಿ (50) ಮೃತ ದುರ್ದೈವಿ.
ಇದನ್ನೂ ಓದಿ: ಮಂಡ್ಯ ಕಬಡ್ಡಿ ಪಂದ್ಯದ ವೇಳೆ ಘೋರ ದುರಂತ.. ಓರ್ವ ಸಾವು, 13ಕ್ಕೂ ಹೆಚ್ಚು ಮಂದಿಗೆ ಗಾಯ
ಈ ಘಟನೆಗೆ ಮುಖ್ಯವಾಗಿ ಕಾರಣವಾಗಿದ್ದೆ ಕಡಿಮೆ ಸಾಮರ್ಥ್ಯದ ಕಬ್ಬಿಣ ಬಳಕೆ. ಸಾವಿರಾರು ಜನರು ಸೇರುವ ಜಾಗದಲ್ಲಿ ನೂರಾರು ಜನ ಕೂರುವ ಗ್ಯಾಲರಿ ಅಳವಡಿಕೆ ಮಾಡಲಾಗಿದೆ. ಒಂದು ಕಡಿಮೆ ಸಾಮರ್ಥ್ಯ ಕಬ್ಬಿಣ, ಇನ್ನೊಂದು ಸರಿಯಾದ ಇಂಟರ್ ಲಾಕ್ ಬಳಸದೆ ಇದದ್ದು. ಮತ್ತೊಂದು ಸಾಮರ್ಥ್ಯಕ್ಕಿಂತ ಹೆಚ್ಚು ವೀಕ್ಷಕರು ಕುಳಿತಿದ್ದರಿಂದ ಗ್ಯಾಲರಿ ಏಕಾಏಕಿ ಕುಸಿದು ಬಿದ್ದಿದೆ.
ಮಲ್ಲನಾಯಕನಕಟ್ಟೆ ಗ್ರಾಮದಲ್ಲಿ ಶ್ರೀ ಭೈರವ ಕಪ್ ಹೆಸರಿನಲ್ಲಿ ಮೈಸೂರು ವಿಭಾಗ ಮಟ್ಟದ ಟೂರ್ನಮೆಂಟ್ ಆಯೋಜನೆ ಮಾಡಲಾಗಿತ್ತು. ನಿನ್ನೆ ಮತ್ತು ಇಂದು ನಡೆಯಬೇಕಿದ್ದ ಪಂದ್ಯಾವಳಿಯಲ್ಲಿ ಈ ಘಟನೆ ಸಂಭವಿಸಿದೆ. ತಡರಾತ್ರಿ 9ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. ಈ ಘಟನೆಯಲ್ಲಿ ಗಾಯಗೊಂಡ ಗಾಯಾಳುಗಳಿಗೆ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೇ ಗ್ಯಾಲರಿ ಅಳವಡಿಕೆ ಮಾಡಿದವನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಅಂತ ಗ್ರಾಮಸ್ಥರ ಆಗ್ರಹಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ