/newsfirstlive-kannada/media/post_attachments/wp-content/uploads/2024/12/MND_KANNADA_HABBA.jpg)
ಮಂಡ್ಯ: ಇಡೀ ಜಿಲ್ಲೆಯಲ್ಲಿ ಹೊಸದೊಂದು ವಾತಾವರಣ ಏರ್ಪಟ್ಟಿದ್ದು ಕನ್ನಡದ ಕಂಪು ಹರಡಿದೆ. ಎಲ್ಲಿ ನೋಡಿದರೂ ನಾಡು-ನುಡಿಯ ಪ್ರತೀಕ ನಮ್ಮ ಅಕ್ಷರಜಾತ್ರೆ ಹೃದಯಗಳನ್ನು ಬಡಿದೆಬ್ಬಿಸುತ್ತಿದೆ. ಸಕ್ಕರೆನಾಡು ಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರಿಗೂ ಅಕ್ಕರೆಯ ಸ್ವಾಗತ ಕೋರಲಾಗುತ್ತಿದೆ. ಇದರ ಜೊತೆಗೆ ಕನ್ನಡ ಹಬ್ಬದೂಟವು ಸವಿ ಸವಿಯಾಗಿದ್ದು ಯಾವ್ಯಾವ ತಿನಿಸುಗಳು ಇವೆ ಎಂದರೆ..
ಮದುವೆ, ನಾಮಕರಣ ಸೇರಿ ಇತರೆ ಸಮಾರಂಭಗಳಲ್ಲಿ ಭೋಜನ ಸವಿಯೋದರಲ್ಲಿ ಒಂದು ರೀತಿ ಸ್ವಾದ ಇರುತ್ತೆ. ಆದರೆ, ಕನ್ನಡ ಹಬ್ಬದಲ್ಲಿ ಊಟ ತಿಂದರೆ ಅದರ ಸ್ವಾದವೇ ಬೇರೆ ಇರುತ್ತದೆ. ಏಕೆಂದರೆ ಬೇರೆ ಬೇರೆ ಕಡೆಯಿಂದ ಬಂದು ಬಾಣಸಿಗರು ಮಾಡುವ ಆ ಊಟದ ಗಮ್ಮತ್ತಿನ ರುಚಿಯೇ ಅಚ್ಚುಕಟ್ಟಾಗಿರುತ್ತೆ. 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ರೀತಿಯ ಖಾದ್ಯಗಳ ಘಮಘಮಿಸುತ್ತಿವೆ. ಕನ್ನಡಾಭಿಮಾನದ ಜೊತೆ ನಾಡು, ನುಡಿಯ ಹಿರಿಮೆ, ಸಾಹಿತ್ಯದ ಕುರಿತು ಅಭಿರುಚಿ ಇದ್ದರೇ ಈಗಲೇ ಸಕ್ಕರೆ ನಾಡು ಮಂಡ್ಯಕ್ಕೆ ಭೇಟಿ ನೀಡಿ.
ಮಂಡ್ಯದಲ್ಲಿ ಉತ್ತರ ಕರ್ನಾಟಕ ಶೈಲಿಯ ಊಟದ ಜೊತೆ ಸ್ಥಳೀಯ ಆಹಾರ ಕೂಡ ತಯಾರಿಸಲಾಗಿದೆ. ನೂರಾರು ಬಾಣಸಿಗರಿಂದ ವಿಧವಿಧವಾದ ರುಚಿ ರುಚಿಯಾದ ಖಾದ್ಯಗಳನ್ನು ತಯಾರು ಮಾಡಲಾಗಿದೆ. ಒಂದು ದಿನಕ್ಕೆ ಒಬ್ಬರ.. ಇಬ್ಬರ.. ಬರೋಬ್ಬರಿ 70 ಸಾವಿರ ಜನರಿಗೆ ಊಟವನ್ನು ಬಡಿಸಲಾಗುತ್ತದೆ. ಇಂತಹ ದೊಡ್ಡ ಕನ್ನಡದ ಹಬ್ಬದಲ್ಲಿ ರುಚಿಕರವಾದ ಊಟ ತಿಂದವರು ಅಬ್ಬಾಬ್ಬ.. ಎಂಥಹ ಊಟ ಎಂದು ಹೇಳದೆ ಇರಲಾರರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಒಟ್ಟು 140 ಕೌಂಟರ್ಗಳಲ್ಲಿ ತಿಂಡಿ, ಊಟ ವಿತರಣೆ ಮಾಡಲಾಗುತ್ತದೆ. ಇದರಲ್ಲಿ 40 ಕೌಂಟರ್ಗಳಲ್ಲಿ ನೊಂದಾಯಿತ ಪ್ರತಿನಿಧಿಗಳಿಗೆ ಮೀಸಲು ಇರುತ್ತದೆ. ಉಳಿದ 100 ಕೌಂಟರ್ಗಳಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಮಂಡ್ಯದ ಅಪೂರ್ವ ವೆಜ್ ಹೋಟೇಲ್ ಈ ಎಲ್ಲ ಭೋಜನದ ವ್ಯವಸ್ಥೆಯ ಜವಾಬ್ದಾರಿ ಹೊತ್ತುಕೊಂಡಿದೆ.
ಇದನ್ನೂ ಓದಿ:Pushpa2; 2ನೇ ವಾರದ ಕಲೆಕ್ಷನ್ ಎಷ್ಟು ಸಾವಿರ ಕೋಟಿ.. ಪ್ರಭಾಸ್ ರೆಕಾರ್ಡ್ ಬ್ರೇಕ್ ಮಾಡಿದ್ರಾ ಅಲ್ಲು ಅರ್ಜುನ್?
ಮೊದಲ ದಿನ ತಿಂಡಿ ಊಟದ ಮೆನು
ಬೆಳಗಿನ ಉಪಾಹಾರ- ಇಡ್ಲಿ, ತಟ್ಟೆ ಇಡ್ಲಿ, ವಡೆ, ಚಟ್ನಿ, ಖಾರ ಬಾತ್, ಸಾಂಬಾರ್, ಉಪ್ಮ, ಮೈಸೂರು ಪಾಕ್, ಕಾಫಿ, ಟೀ.
ಮಧ್ಯಾಹ್ನದ ಊಟ- ಕಾಯಿ ಹೋಳಿಗೆ, ಜೋಳದ ರೊಟ್ಟಿ, ಬದನೆಕಾಯಿ ಎಣ್ಣೆಗಾಯಿ, ಮೆಂತ್ಯ ಬಾತ್, ಚಟ್ನಿ ಪುಡಿ, ಅನ್ನ, ಮೊಳಕೆ ಸಾರು, ಸಾಂಬಾರ್, ಉಪ್ಪು, ಉಪ್ಪಿನಕಾಯಿ, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್
ರಾತ್ರಿ ಊಟ- ಪೂರಿ, ಸಾಗು, ಹಾರ್ಲಿಕ್ಸ್ ಬರ್ಫಿ, ಅವರೆಕಾಳು ಬಾತ್, ರಾಯಿತ, ಉಪ್ಪು, ಮೊಸರು, ಬಾಳೆಹಣ್ಣು, ಕೋಸಂಬರಿ, ಹಪ್ಪಳ, ಸಲಾಡ್, ಉಪ್ಪಿನಕಾಯಿ ಅಪ್ಪಳ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ