ಜೆಡಿಎಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸುವ ಕುಮಾರಸ್ವಾಮಿ
ಮತ್ತೆ ಭದ್ರಕೋಟೆ ವಶಕ್ಕೆ ಪಡೆಯಲು ಕುಮಾರಸ್ವಾಮಿ ನಾಮಿನೇಶನ್
ಚುನಾವಣೆಯಲ್ಲಿ ಕಾಂಗ್ರೆಸ್ ವಿರುದ್ಧ HDK ಸೇಡು ತೀರಿಸಿಕೊಳ್ತಾರಾ?
ರಾಜ್ಯದಲ್ಲಿ ಲೋಕಸಭಾ ಚುನಾವಣಾ ಕಣ ರಂಗೇರಿದೆ. ಮಂಡ್ಯ ರಣಕಣದಲ್ಲಿ ಸ್ವಾಭಿಮಾನಿ ಸಂಸದೆ ಹಿಂದೆ ಸರಿಯುತ್ತಿದ್ದಂತೆ ದಳಪತಿಯ ಎಲ್ಲ ಸಮಸ್ಯೆ ಬಗೆಹರಿದಂತಾಗಿದೆ. ಇದೀಗ ಸಕ್ಕರೆನಾಡಿನ ಲೋಕ ಅಭ್ಯರ್ಥಿಯಾಗಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಂಟ್ರಿ ಕೊಡಲಿದ್ದಾರೆ. ಇವತ್ತು ಲೋಕಸಭಾ ಕದನದ ಕಲಿಯಾಗಿ ತಮ್ಮ ಉಮೇದುವಾರಿಕೆಯನ್ನ ಸಲ್ಲಿಸಲಿದ್ದಾರೆ. ಕೈ ಅಭ್ಯರ್ಥಿ ಸ್ಟಾರ್ ಚಂದ್ರು ವಿರುದ್ಧ ಸೆಡ್ಡು ಹೊಡೆದು ಅಧಿಕೃತವಾಗಿ ಪ್ರಜಾಪ್ರಭುತ್ವ ಯುದ್ಧಕ್ಕೆ ಧುಮುಕಲಿದ್ದಾರೆ.
ಲೋಕಸಮರದ ಕಣದಲ್ಲಿ ದಳಪತಿಗೆ ಮೊದಲ ಜಯ ಸಿಕ್ಕಿದೆ. ಸಕ್ಕರೆ ನಾಡಿನ ಸಂಸದೆ ಹೆಚ್.ಡಿ. ಕುಮಾರಸ್ವಾಮಿಯ ಮನವೊಲಿಕೆಗೆ ಮಣಿದಿದ್ದಾರೆ. ಹೆಚ್‌ಡಿಕೆಗೆ ಮಂಡ್ಯ ಮಣ್ಣನ್ನ ಬಿಟ್ಟುಕೊಟ್ಟು ಚುನಾವಣೆಯಿಂದ ಹಿಂದೆ ಸರಿದಿದ್ದಾರೆ. ಇವತ್ತು ಅಧಿಕೃತವಾಗಿ ದಳಪತಿ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮುಕಲಿದ್ದಾರೆ.
ನೆಲದಲ್ಲಿ ದಳಪತಿ ಶಕ್ತಿಪ್ರದರ್ಶನಕ್ಕೆ ವೇದಿಕೆ ಸಜ್ಜು
ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇವತ್ತು ನಾಮಪತ್ರ ಸಲ್ಲಿಸಲು ಕೊನೆಯ ದಿನ. ಹೀಗಾಗಿ ಇವತ್ತು ಮಂಡ್ಯದಲ್ಲಿ ಜೆಡಿಎಸ್ ನಾಯಕರ ರಣಾರ್ಭಟ ಮೊಳಗಲಿದೆ.. ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ. ಕುಮಾರಸ್ವಾಮಿ ತಮ್ಮ ಭದ್ರಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಇಂದು ಬೆಳಗ್ಗೆ 11:05ಕ್ಕೆ ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ತಮ್ಮ ಉಮೇದುವಾರಿಕೆಯನ್ನ ಸಲ್ಲಿಕೆ ಮಾಡಲಿದ್ದಾರೆ. ಈ ಮೂಲಕ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಸ್ತಿತ್ವ ಕಳೆದುಕೊಂಡಿದ್ದ ಭದ್ರಕೋಟೆಯನ್ನ ಮತ್ತೆ ವಶಕ್ಕೆ ಪಡೆಯಲು ಹೆಚ್.ಡಿಕೆ. ನಾಮಿನೇಶನ್ ಫೈಲ್ ಮಾಡಲಿದ್ದಾರೆ.
ಬೆಳಗ್ಗೆ 11.5ಕ್ಕೆ ನಾಮಿನೇಶನ್
ಬೆಳಗ್ಗೆ 11 ಗಂಟೆ 5ನಿಮಿಷಕ್ಕೆ ಶಾರ್ಪ್ ಆಗಿ ನಾಮಿನೇಶನ್ ಮಾಡುತ್ತಿದ್ದೇನೆ. ನಮ್ಮ ಅಭಿಮಾನಿಗಳು, ಹಿತೈಷಿಗಳು ಹಾಗೂ ಎರಡು ಪಕ್ಷದ ಕಾರ್ಯಕರ್ತರಿಗೆ ಮೆರವಣಿಗೆ ಬೇಡ ಎಂದು ಹೇಳಿದ್ದೇನೆ. ಬಿಸಿಲು ಇರುವುದರಿಂದ ಜನರಿಗೆ ತೊಂದರೆ ಆಗುತ್ತದೆ. ಹೀಗಾಗಿ ಮೆರವಣಿಗೆ ಬೇಡ ಎಂದಿದ್ದೇನೆ. ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುತ್ತೇನೆ.
ನಾಮಪತ್ರ ಸಲ್ಲಿಕೆಗೆ ಮಾಜಿ ಸಿಎಂ ಬಿಎಸ್ವೈ ಅವರು ಆಗಮಿಸುತ್ತಿದ್ದಾರೆ. ಯದೂವೀರ್, ಗೋವಾದ ಸಿಎಂ ಕೂಡ ನಾಮಿನೇಷನ್ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಹೆಚ್.ಡಿ. ಕುಮಾರಸ್ವಾಮಿ, ಮಂಡ್ಯ ಮೈತ್ರಿ ಅಭ್ಯರ್ಥಿ
ಮಂಡ್ಯ ಗೆಲ್ಲುವ ರಣತಂತ್ರ ಎಣೆದಿರೋ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಗೆ ಹಾಲಿ ಸಂಸದೆ ಸುಮಲತಾ ಬೆಂಬಲ ಸಿಕ್ಕಿರುವುದು ಆನೆ ಬಲ ಬಂದಂತಾಗಿದೆ. ಸುಮಲತಾ ಬೆಂಬಲದ ಜೊತೆಗೆ ಕಾಂಗ್ರೆಸ್ ವಿರುದ್ಧ ಸೋಲಿನ ಸೇಡು ತೀರಿಸಿಕೊಳ್ಳಲು ಹೆಚ್‌ಡಿಕೆಗೆ ಬಿಜೆಪಿ ಮೋದಿ ಶಕ್ತಿ ಇದ್ದು, ಕೇಂದ್ರ ಬಿಜೆಪಿ ನಾಯರ ಪರವಾಗಿ ಗೋವಾ ಸಿಎಂ ಪ್ರಮೋದ್ ಸಾವಂತ್ ಕೂಡಾ ಸಾಥ್ ಕೊಡಲಿದ್ದು, ದಳಪತಿಗಳ ಉತ್ಸಾಹ ಮತ್ತಷ್ಟು ಹೆಚ್ಚಲಿದೆ.
ಇದನ್ನೂ ಓದಿ: ಬದುಕಿ ಬಾ ಕಂದ.. ಕಾಲು ಅಲ್ಲಾಡಿಸ್ತಿರುವ ಸಂಕಟ ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ: Video
ಮಂಡ್ಯದಲ್ಲಿ ಒಕ್ಕಲಿಗ ಮತ್ತು ಲಿಂಗಾಯತ ಸೂತ್ರದಡಿ ದಳಪತಿಗಳು ಗೆಲ್ಲುವ ಪ್ಲಾನ್ ಮಾಡಿದ್ದಾರೆ. ನಾಮ ಪತ್ರ ಸಲ್ಲಿಕೆ ಬಳಿಕ ಸಕ್ಕರೆ ನಾಡಿನಲ್ಲಿ ಹೆಚ್‌ಡಿಕೆ ಬೃಹತ್ ಶಕ್ತಿ ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ 5 ಬಾರಿ ಲೋಕ ಕದನಕ್ಕೆ ಎಂಟ್ರಿ ಕೊಟ್ಟಿದ್ದ ದಳಪತಿ 6ನೇ ಬಾರಿಗೆ ಲೋಕಸಭಾ ಅಗ್ನಿಪರೀಕ್ಷೆಗೆ ಇಳಿಯುತ್ತಿದ್ದಾರೆ. ಈ ಮೂಲಕ ಜೆಡಿಎಸ್ ಭದ್ರಕೋಟೆ ಮಂಡ್ಯವನ್ನ ಮತ್ತೆ ತಮ್ಮ ವಶಕ್ಕೆ ಪಡೆಯಲು ರಣತಂತ್ರ ಹೆಣೆದಿದ್ದಾರೆ.
ದಳಪತಿಗೆ ಬಿಜೆಪಿ ಬೆಂಬಲ. ಸಂಸದೆ ಸುಮಲತಾರ ಆನೆಬಲ ಸಿಕ್ಕಿದೆ. ಇದೀಗ ಕಾಂಗ್ರೆಸ್ ವಿರುದ್ಧ ಹೆಚ್‌ಡಿಕೆ ಸೇಡು ತೀರಿಸಿಕೊಳ್ತಾರಾ? ಮಂಡ್ಯ ಮಣ್ಣಿನಲ್ಲಿ ಮತ್ತೆ ಪುಟಿದೇಳ್ತಾರಾ? ಅನ್ನೋದು ಜೂನ್ 4ಕ್ಕೆ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ