Advertisment

ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಸ್ಟಾರ್​ ಚಂದ್ರು ಭರ್ಜರಿ ಸರ್ಕಸ್.. ಮಂಡ್ಯದಲ್ಲಿ ಚುನಾವಣಾ ರಣಕಹಳೆ..!

author-image
Bheemappa
Updated On
ಕುಮಾರಸ್ವಾಮಿಗೆ ಟಕ್ಕರ್ ಕೊಡಲು ಸ್ಟಾರ್​ ಚಂದ್ರು ಭರ್ಜರಿ ಸರ್ಕಸ್.. ಮಂಡ್ಯದಲ್ಲಿ ಚುನಾವಣಾ ರಣಕಹಳೆ..!
Advertisment
  • ರೈತರ ಕಲ್ಯಾಣಕ್ಕಾಗಿ ಕಂಕಣಬದ್ಧ- ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್ ಚಂದ್ರು
  • ಚಿದಂಬರಂ ಸೇರಿದಂತೆ ಹಲವು ಮುಖಂಡರು ಸ್ಟಾರ್​ ಚಂದ್ರುಗೆ ಸಾಥ್
  • ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿಕೊಡಬೇಕೆಂಬ ಕನಸು ಹೊಂದಿದ್ದೇನೆ

ಸಕ್ಕರೆ ನಾಡಿನಲ್ಲಿ ಸಂಚಲನ ಸೃಷ್ಟಿಸಿರೋ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಜನರ ಮನ ಗೆಲಲ್ಲು ಮುಂದಾಗಿದ್ದಾರೆ. ಜಿಲ್ಲೆಯಾದ್ಯಂತ ಭರ್ಜರಿ ಕ್ಯಾಂಪೆನ್ ಮಾಡ್ತಿರೋ ಸ್ಟಾರ್​ ಚಂದ್ರುಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ನಿನ್ನೆ ಮದ್ದೂರು ಕ್ಷೇತ್ರದಲ್ಲಿ ಪ್ರಚಾರದ ಕಹಳೆ ಮೊಳಗಿಸಿರುವ ಸ್ಟಾರ್​ ಚಂದ್ರುಗೆ ಅಭಿಮಾನಿಗಳು ಸಾಥ್ ನೀಡಿದ್ದಾರೆ.

Advertisment

ಸಕ್ಕರೆ ನಾಡು ಮಂಡ್ಯದಲ್ಲಿ ಮೈತ್ರಿ ಪಾಳಯದ ವಿರುದ್ಧ ಮೈ ಕೊಡವಿರೋ ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು ಕ್ಷೇತ್ರದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ಕ್ಷೇತ್ರ ಪರ್ಯಟನೆ ಮಾಡ್ತಿರೋ ಸ್ಟಾರ್ ಚಂದ್ರು, ಮತಬುಟ್ಟಿ ಭದ್ರಗೊಳಿಸಿಕೊಳ್ಳಲು ಫುಲ್ ರೌಂಡ್ಸ್​ ಹಾಕ್ತಿದ್ದಾರೆ.

publive-image

ಮಂಡ್ಯ ಹೆಸರನ್ನ ಇಂಡಿಯಾದಾದ್ಯಂತ ಮೊಳಗಿಸಲು ಶಪಥ

ಮಂಡ್ಯ ಕಾಂಗ್ರೆಸ್​ ಅಭ್ಯರ್ಥಿಯಾಗಿ ಲೋಕಸಭಾ ಅಖಾಡಕ್ಕಿಳಿದಿರೋ ವೆಂಕಟರಮಣೇಗೌಡ ಅವರು ಕೇವಲ ಚುನಾವಣೆಗೆ ಸೀಮಿತವಾಗದೇ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೂ ಪಣತೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಕೈಗೊಳ್ಳುವ ಅಭಿವೃದ್ಧಿ ಕಾರ್ಯಗಳು ಇತರೆ ಲೋಕಸಭಾ ಕ್ಷೇತ್ರಗಳಿಗೆ ಮಾದರಿಯಾಗಬೇಕು. ರಾಜಕೀಯವಾಗಿ ಮಾತ್ರವಲ್ಲ ಅಭಿವೃದ್ಧಿ ವಿಚಾರದಲ್ಲಿ ಕೂಡ ಮಂಡ್ಯ ಹೆಸರು ಇಂಡಿಯದಾದ್ಯಂತ ಮೊಳಗಬೇಕು. ಮಂಡ್ಯವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದು ಸ್ಟಾರ್ ಚಂದ್ರು ಹೇಳಿದ್ದಾರೆ.

ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ‘ಸ್ಟಾರ್​’ ರೋಡ್ ಶೋ

ಮಂಡ್ಯ ಜಿಲ್ಲೆಯ ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರೋಡ್ ಶೋ ಮೂಲಕ ಸ್ಟಾರ್​ ಚಂದ್ರು ಚುನಾವಣಾ ಪ್ರಚಾರ ನಡೆಸಿದ್ರು.. ಮಂಡ್ಯ ಜಿಲ್ಲೆ ಪ್ರಾಕೃತಿಕವಾಗಿ, ರಾಜಕೀಯವಾಗಿ ಸಾಕಷ್ಟು ಹೆಸರುವಾಸಿ.. ಜಿಲ್ಲೆಯಲ್ಲಿ ಕೃಷಿಯೇ ಜೀವಾಳ, ಈ ಭಾಗದ ರೈತರ ಕಲ್ಯಾಣಕ್ಕೆ ಕಂಕಣಬದ್ಧನಾಗಿದ್ದೇನೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿತಾಣಗಳಿದ್ದು ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಭಿವೃದ್ಧಿಪಡಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಿಕೊಡಬೇಕೆಂಬ ಕನಸು ಹೊಂದಿದ್ದೇನೆ ಎಂದ್ರು.

Advertisment

ಗೊಲ್ಲರದೊಡ್ಡಿಯ ಜುಂಜಪ್ಪ ದೇವರಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ ಸ್ಟಾರ್​ ಚಂದ್ರು ಮದ್ದೂರು ವಿಧಾನಸಭಾ ಕ್ಷೇತ್ರದಾದ್ಯಂತ ಮತಪ್ರಚಾರ ಮಾಡಿದ್ರು.. ಮದ್ದೂರು ಶಾಸಕ ಉದಯ್, ಮಂಡ್ಯ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕದಲೂರು ರಾಮಕೃಷ್ಣ, ಶಿವಲಿಂಗೇಗೌಡ ಕೆಪಿಸಿಸಿ ವಕ್ತಾರ ತೈಲೂರು ಸತ್ಯಾನಂದ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಚಿದಂಬರಂ ಸೇರಿದಂತೆ ಹಲವು ಮುಖಂಡರು ಸ್ಟಾರ್​ ಚಂದ್ರುಗೆ ಸಾಥ್ ನೀಡಿದ್ರು.

ಬಿರು ಬಿಸಿಲಿನಲ್ಲೂ ರೋಡ್​ ಶೋದಲ್ಲಿ ಜನರು ಭಾಗಿ

ಹಳ್ಳಿ ಹಳ್ಳಿಗಳಲ್ಲೂ ರೋಡ್ ಶೋ ನಡೆಸಿದ ಸ್ಟಾರ್​ ಚಂದ್ರು ಹಾಗೂ ಕಾಂಗ್ರೆಸ್​ ನಾಯಕರಿಗೆ ನೆರೆದಿದ್ದ ಜನಸ್ತೋಮ ಕಂಡು ಉತ್ಸಾಹ ಇಮ್ಮಡಿಗೊಂಡಿತ್ತು. ಸ್ಟಾರ್ ಚಂದ್ರು ಮೇಲೆ ಹೂ ಮಳೆ ಸುರಿಸಿ ಅಭಿಮಾನಿಗಳು ಅಭಿಮಾನ ಮೆರೆದದ್ರು. ಸುಡುಬಿಸಲನ್ನು ಲೆಕ್ಕಿಸದೇ ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಜನರು ಸ್ಟಾರ್​ ಚಂದ್ರು ಪರ ಘೋಷಣೆ ಮೊಳಗಿಸಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment