Advertisment

ಅಪ್ಪನ ಎದೆ ಮೇಲೆ ನಿದ್ದೆ.. ತಂದೆಗೆ ಮಗಳ ಕೈ ತುತ್ತು; ಮಂಡ್ಯದ ಹೃತಿಕ್ಷಾ ವಿಡಿಯೋ ನೋಡಿ ಹೆತ್ತವರ ಕಣ್ಣೀರು

author-image
Bheemappa
Updated On
ಅಪ್ಪನ ಎದೆ ಮೇಲೆ ನಿದ್ದೆ.. ತಂದೆಗೆ ಮಗಳ ಕೈ ತುತ್ತು; ಮಂಡ್ಯದ ಹೃತಿಕ್ಷಾ ವಿಡಿಯೋ ನೋಡಿ ಹೆತ್ತವರ ಕಣ್ಣೀರು
Advertisment
  • ಕೃಷ್ಣನ ವೇಷದಲ್ಲಿ ಮಗಳು ಓಡೋಡಿ ಬರುತ್ತಿರುವುದು ಮನಮೋಹಕ
  • ಮಗಳ ಜೊತೆಗಿನ ಎಲ್ಲಾ ಕ್ಷಣಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ ತಂದೆ
  • ಸದ್ಯ ವಿಡಿಯೋಗಳನ್ನು ನೋಡಿ ಮತ್ತಷ್ಟು ದುಃಖ ಪಡುತ್ತಿರುವ ಅಶೋಕ್

ಮಂಡ್ಯ: ಟ್ರಾಫಿಕ್ ಪೊಲೀಸರ ತಪಾಸಣೆ ವೇಳೆ ಬೈಕ್ ಅಡ್ಡಗಟ್ಟಿದ್ದರಿಂದ ಆಯತಪ್ಪಿ ಕೆಳಗೆ ಬಿದ್ದು 3 ವರ್ಷದ ಮಗು ಜೀವ ಕಳೆದುಕೊಂಡ ಹೃದಯ ವಿದ್ರಾವಕ ಘಟನೆ ನಗರದ ಸ್ವರ್ಣಸಂದ್ರದ ಹೆದ್ದಾರಿಯಲ್ಲಿ ನಡೆದಿತ್ತು. ಮಗಳನ್ನು ಕಳೆದುಕೊಂಡ ತಂದೆ ಹಾಗೂ ಕುಟುಂಬಸ್ಥರು ಇನ್ನು ದುಃಖದ ಮಡುವಿನಲ್ಲೇ ಇದ್ದಾರೆ. ಇದರ ನಡುವೆ ಮಗಳ ವಿಡಿಯೋಗಳನ್ನು ತಂದೆ ಹಂಚಿಕೊಂಡಿದ್ದು ನೋಡುಗರ ಕಣ್ಣಾಲೆಗಳು ಒದ್ದೆ ಆಗುವಂತೆ ಇದೆ.

Advertisment

publive-image

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಹಾಗೂ ವಾಣಿಶ್ರೀ ದಂಪತಿಗೆ ಹೃತಿಕ್ಷಾ (3) ಒಬ್ಬಳೇ ಒಬ್ಬ ಮಗಳು. ಹೀಗಾಗಿ ಮನೆಯ ಸಂತೋಷವೆಲ್ಲ ಈ ಕಂದಮ್ಮನ ಮೇಲೆ ಇತ್ತು. ಹೋದರೂ ಬಂದರೂ ತಂದೆ, ತಾಯಿ ಹಾಗೂ ಕುಟುಂಬಸ್ಥರು ಹೃತಿಕ್ಷಾ ಎಲ್ಲಿ ಕೇಳುತ್ತಿದ್ದರು. ಆದರೆ ಅದೊಂದು ಘಟನೆಯಿಂದ ಈಗ ಮಗಳು ಇಲ್ಲ. ಇದರಿಂದ ತಂದೆ ಅಶೋಕ್ ನೋವನ್ನು ಮರೆಯಲಾಗದೇ ಕೆಲ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.

publive-image

ಪುಟ್ಟ ಕಂದಮ್ಮ ಆಗಿದ್ದಾಗ ಮಗಳು, ತಂದೆ ಅಶೋಕ್ ಅವರ ತಲೆ ಬಳಿ ಮಲಗಿಕೊಂಡು ಕೈಕಾಲುಗಳನ್ನು ಅಲ್ಲಾಡಿಸುತ್ತ ಆಹ್ಹಾ..ಆಹ್ಹಾ.. ಎಂದು ಕೂಗುತ್ತಿದೆ. ಇನ್ನೊಂದು ವಿಡಿಯೋದಲ್ಲಿ ತಂದೆ ಮೈಮೇಲೆ ಮಲಗಿಕೊಂಡಿದ್ದು ಅಪ್ಪಾ.. ನೀನೇ ನನ್ನ ಪ್ರಪಂಚ ಎನ್ನುವಂತೆ ಮಗಳು ಚೆನ್ನಾಗಿ ನಿದ್ದೆ ಹೋಗುತ್ತಿದ್ದಾಳೆ.

ಹೃತಿಕ್ಷಾ ಆರಂಭದಲ್ಲಿ ಹಂಬೆಗಾಲಿನಲ್ಲಿ ನಡೆಯುವುದು ಕೂಡ ಮನಮೋಹಕವಾಗಿದೆ. ಮನೆಯಲ್ಲಿ ಮೆಲ್ಲಗೆ ಫೋನ್ ನೋಡುತ್ತ ಹಂಬೆಗಾಲಿನಲ್ಲಿ ಬರುತ್ತಿರುವುದು ಎಲ್ಲರನ್ನು ಬೆರಗುಗೊಳಿಸುವಂತೆ ಇದೆ. ಇಡೀ ದೃಶ್ಯವನ್ನು ಸೆಳೆಯುವುದು ಮಾತ್ರ ಮಗಳು, ತಂದೆಗೆ ತನ್ನ ಪುಟ್ಟ ಕೈಗಳಿಂದ ಊಟ ಮಾಡಿಸುತ್ತಿರುವುದು. ವಿಡಿಯೋದಲ್ಲಿ ತಂದೆ ಅಶೋಕ್ ಅವರು ಊಟ ಮಾಡುತ್ತಿರುತ್ತಾರೆ. ಈ ವೇಳೆ ಅಲ್ಲೇ ಕುಳಿತುಕೊಂಡಿದ್ದ ಮಗಳು ಹೃತಿಕ್ಷಾ ಪುಟ್ಟ ಕೈಗಳಿಂದ ತಟ್ಟೆಯಿಂದ ಅನ್ನ ತಗೊಂಡು ತಂದೆಗೆ ತಿನ್ನಿಸುತ್ತಾಳೆ. ಘಟನೆ ನಡೆದಿದ್ದಾಗ ತಂದೆ ಇದನ್ನೇ ನೆನಪು ಮಾಡಿಕೊಂಡು ಹೆಚ್ಚು ದುಃಖಿಸಿದ್ದರು.

Advertisment

publive-image

ಇನ್ನೊಂದು ವಿಡಿಯೋದಲ್ಲಿ ಮಗಳು ಕೃಷ್ಣನ ವೇಷ ಧರಿಸಿ ರಸ್ತೆಯಲ್ಲಿ ಓಡೋಡಿ ಬರುತ್ತಿರುವುದು ಅದ್ಭುತವಾಗಿದೆ. ಕ್ಯಾಮೆರಾ ಮುಂದೆ ಮಗಳು ಕೃಷ್ಣನ ವೇಷದಲ್ಲಿ ಮುದ್ದಾಗಿ ಕಾಣುತ್ತಿದ್ದು ಓಡಿ ಹೋಗಿ ಅಪ್ಪನ ಕೈ ಹಿಡಿದಿದ್ದಾಳೆ. ಹೃತೀಕ್ಷಾ ತಂದೆ ತಾಯಿಗಳೊಂದಿಗೆ ಸಂತೋಷವಾಗಿ ಕಳೆದ ಕ್ಷಣಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಆದರೆ ಹೆದ್ದಾರಿಯಲ್ಲಿ ನಡೆದಂತ ಘಟನೆಯಲ್ಲಿ ಕಣ್ಮುಚ್ಚಿರುವುದು ಪೋಷಕರಿಗೆ ತುಂಬಲಾರದ ನಷ್ಟವಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ 3 ವರ್ಷದ ಮಗುವಿನ ದುರಂತ ಹೇಗಾಯ್ತು? ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದ್ದೇನು?

publive-image

ತಂದೆ ಅಶೋಕ್ ಅವರು ಮಗಳನ್ನು ಅತಿ ಹೆಚ್ಚಾಗಿ ಹಚ್ಚಿಕೊಂಡಿದ್ದರು. ಎಲ್ಲಿಗೆ ಹೋದರೂ ಬಂದರೂ ಮಗಳ ನಗುವನ್ನು ನೋಡಿದ ಮೇಲೆ ಎಲ್ಲವನ್ನು ಮರೆತು, ಕಂದಮ್ಮನ ಜೊತೆ ಸಮಯ ಕಳೆಯುತ್ತಿದ್ದರು. ಈಗ ಮನೆ ಖಾಲಿಯಾದಂತೆ ಆಗಿ ಮನಸಿಗೆ ಇನ್ನಲ್ಲದ ನೋವು ಆಗುತ್ತಿದೆ. ತನ್ನ ಜೊತೆ ಇರುವಂತ ಕೆಲವು ಕ್ಷಣಗಳ ದೃಶ್ಯಗಳನ್ನು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದುಕೊಂಡಿದ್ದರು. ಸದ್ಯ ಈ ವಿಡಿಯೋಗಳನ್ನು ನೋಡಿ ತಂದೆ, ತಾಯಿ ಇಬ್ಬರು ಬರಿಗೈಯಲ್ಲಿ ಅಳುತ್ತಿರುವುದು ಮತ್ತಷ್ಟು ದುಃಖ ತರಿಸುವಂತಿದೆ.

Advertisment

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment