/newsfirstlive-kannada/media/post_attachments/wp-content/uploads/2025/02/MND_MANMUL.jpg)
ಮಂಡ್ಯ ಜಿಲ್ಲಾ ಹಾಲು ಒಕ್ಕೂಟ (ಮನ್‌ಮುಲ್) ದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಮತ್ತೆ ಹಸ್ತ ಪಡೆ ದಿಗ್ವಿಜಯ ಸಾಧಿಸಿದೆ. ಹೆಚ್ಚು ಸ್ಥಾನ ಗಳಿಸುವ ಮೂಲಕ ಮತ್ತೆ ಮನ್‌ಮುಲ್ ವಶಪಡೆಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮನ್‌ಮುಲ್ ಹಾಲುಂಡು ಖುಷಿ ಪಟ್ರೆ ದೋಸ್ತಿಗಳಿಗೆ ಸೋಲಿನ ರುಚಿ ತೋರಿಸಿದೆ.
ಎಲ್ಲೆಲ್ಲೂ ಕಾರ್ಯಕರ್ತರ ಸಡಗರ. ತಲೆಗೆ ಪೇಟ ಹಾಕಿಕೊಂಡು ಆ ಸಂಭ್ರಮದಲ್ಲಿ ತೇಲುತ್ತಿರುವ ನಾಯಕ.. ಈ ಗೆಲುವಿನ ರಣಕೇಕೆಗೆ ಕಾರಣವಾಗಿದ್ದು ಮನ್‌ಮುಲ್ ಚುನಾವಣೆ ಫಲಿತಾಂಶ.
ಮಂಡ್ಯ ರಾಜಕಾರಣವೇ ಅಂತದ್ದು, ಯಾವುದೇ ಎಲೆಕ್ಷನ್ ಇದ್ರೂ ಅದು ಜಿದ್ದಾಜಿದ್ದಿ ರಾಜಕಾರಣಕ್ಕೆ ಸಾಕ್ಷಿಯಾಗುತ್ತದೆ. ನಾಯಕರ ಪ್ರತಿಷ್ಠೆಗೂ ಕಾರಣವಾಗಿರುತ್ತೆ. ಅದೇ ರೀತಿ ಮಂಡ್ಯ ಮನ್‌ಮುಲ್ ಗದ್ದುಗೆಗಾಗಿ ರಾಜಕೀಯ ಪಕ್ಷಗಳ ನಡುವೆ ಕದನವೇ ಏರ್ಪಟ್ಟಿತ್ತು. ಇದೀಗ ಕೈ ಪಡೆ ಈ ಕಾಳಗದಲ್ಲಿ ಗೆದ್ದು ಗೆಲುವಿನ ನಗೆ ಬೀರಿದೆ.
ಮನ್‌ಮುಲ್ ಕಾಂಗ್ರೆಸ್ ತೆಕ್ಕೆಗೆ!
- ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ 12 ನಿರ್ದೇಶಕರ ಚುನಾವಣೆಯಲ್ಲಿ ಕೈಗೆ ಜಯ
- ಪಾಂಡವಪುರ 1, ಮಂಡ್ಯದಲ್ಲಿ 2 ಸೇರಿ 3 ಸ್ಥಾನಗಳಲ್ಲಷ್ಟೇ ಮೈತ್ರಿ ಪಡೆ ಗೆಲುವು
- ನಾಗಮಂಗಲ 2, ಶ್ರೀರಂಗಪಟ್ಟಣ-1, ಮಂಡ್ಯ 1, ಮಳವಳ್ಳಿ- 1, ಮದ್ದೂರು 1
- ಕೆ.ಆರ್ ಪೇಟೆ 2, ಮದ್ದೂರು 1 ಸ್ಥಾನ ಸೇರಿ 9 ಸ್ಥಾನಗಳಲ್ಲಿ ಕೈಪಡೆಗೆ ಗೆಲುವು
- ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ರಣ ತಂತ್ರ
- ಕಾಂಗ್ರೆಸ್ ಹೆಚ್ಚು ಸ್ಥಾನ ವಶಪಡಿಸಿಕೊಂಡು ಎದುರಾಳಿಗಳಿಗೆ ಸೋಲು
- ಗೆಲುವು ಸಾಧಿಸಿದ ನೂತನ ನಿರ್ದೇಶಕರನ್ನ ಹೊತ್ತು ಮೆರೆಸಿದ ಕಾರ್ಯಕರ್ತರು
ಇನ್ನು ಗೆಲುವಿನ ಬಗ್ಗೆ ಮಾತನಾಡಿದ ಸಚಿವ ಚಲುವರಾಯಸ್ವಾಮಿ, ಎಂಪಿ ಚುನಾವಣೆ ಗೆದ್ದ ಬಳಿಕ ಜೆಡಿಎಸ್ ನಾಯಕರು ಮಂಡ್ಯ ನಮ್ಮದೆ ಅಂದುಕೊಳ್ಳಬಹುದು. ಆದ್ರೆ ಮಂಡ್ಯ ಜಿಲ್ಲೆಯ ಜನರ ಮನಸ್ಥಿತಿಯೇ ಬೇರೆ. ಯಾವಾಗ ಯಾರನ್ನ ಗೆಲ್ಲಿಸುತ್ತಾರೆ, ಯಾರನ್ನ ಸೋಲಿಸುತ್ತಾರೆ ಅನ್ನೋದು ಗೊತ್ತಿಲ್ಲ. ನಾವು ಈಗ ಒಳ್ಳೆಯ ಕೆಲಸ ಮಾಡಿದ್ದೇವೆ. ಹೀಗಾಗಿ ಮನ್ಮುಲ್ನಲ್ಲಿ ಗೆಲ್ಲಿಸಿದ್ದಾರೆ ಅಂತ ಹೇಳಿದ್ದಾರೆ. ಇತ್ತ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಪ್ರತಿಕ್ರಿಯಿಸಿದ್ದು ಜನ ಕಾಂಗ್ರೆಸ್ಗೆ ಆಶೀರ್ವಾದ ಮಾಡಿದ್ದು, ಶಿವಕುಮಾರ್ 3ನೇ ಬಾರಿ ಗೆದ್ದಿದ್ದಾರೆ. ಮನ್‌ಮುಲ್ ಅಧ್ಯಕ್ಷ ಗಾದಿಗೇರುವ ವಿಶ್ವಾಸವಿದೆ ಎಂದಿದ್ದಾರೆ.
ಇದನ್ನೂ ಓದಿ:ಬೆಂಗಳೂರು ಅಭ್ಯರ್ಥಿಗಳಿಗೆ ಗುಡ್ನ್ಯೂಸ್.. ಭರ್ಜರಿ ಉದ್ಯೋಗ ಆಹ್ವಾನ ಮಾಡಿದ BESCOM
ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಗೆಲುವಿನ ಬಳಿಕ ರಿಸ್ಟಾರ್ಟ್ ಕನಸಿನಲ್ಲಿದ್ದ ಜೆಡಿಎಸ್‌ಗೆ ಮನ್ ಮುಲ್ ಚುನಾವಣೆ ಮೂಲಕ ಸಚಿವ ಚಲುವರಾಯಸ್ವಾಮಿ & ಟೀಂ ಬಿಗ್ ಶಾಕ್ ನೀಡಿದೆ. ಇದೀಗ ಈ ಸೋಲನ್ನ ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಹೆಚ್‌ಡಿಕೆ ಹೇಗೆ ಓವರ್ ಟೇಕ್ ಮಾಡುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ