ನಾನು ನಿನ್ನೆಯಷ್ಟೇ ಚೀನಾದಿಂದ ವಾಪಸ್ ಬಂದೆ.. ವೈರಸ್ ಬಗ್ಗೆ ಮಂಡ್ಯ ಶಾಸಕ ರವಿಗಣಿಗ ಹೇಳಿದ್ದೇನು?

author-image
admin
Updated On
ನಾನು ನಿನ್ನೆಯಷ್ಟೇ ಚೀನಾದಿಂದ ವಾಪಸ್ ಬಂದೆ.. ವೈರಸ್ ಬಗ್ಗೆ ಮಂಡ್ಯ ಶಾಸಕ ರವಿಗಣಿಗ ಹೇಳಿದ್ದೇನು?
Advertisment
  • ಹಾಂಗ್ ಕಾಂಗ್ ಏರ್‌ಪೋರ್ಟ್‌ನಲ್ಲಿ ಎಲ್ಲರೂ ಮಾಸ್ಕ್ ಧರಿಸಿದ್ದರು
  • ಚೀನಾ ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟೆಸ್ಟ್ ಮಾಡುತ್ತಿದ್ದಾರೆ
  • ಚೀನಾ ಪರಿಸ್ಥಿತಿ ಕಣ್ಣಾರೆ ಕಂಡು ಬಂದಿರುವ ಮಂಡ್ಯ ಕಾಂಗ್ರೆಸ್ ಶಾಸಕ

ಚೀನಾ ದೇಶದಾದ್ಯಂತ ಮತ್ತೊಮ್ಮೆ ಕೋವಿಡ್ 19 ವೈರಸ್ ಆತಂಕ ಮನೆ ಮಾಡಿದೆ. ಈ ಬಾರಿ ಒಂದಲ್ಲ, ಅನೇಕ ವೈರಸ್‌ಗಳು ಚೀನಾ ದೇಶಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ ಅನ್ನೋ ವರದಿಯಾಗಿದೆ. 14 ವರ್ಷದೊಳಗಿನ ಮಕ್ಕಳಲ್ಲಿ HMPV ವೈರಸ್ ಸೋಂಕು ಹೆಚ್ಚಾಗಿ ಕಂಡು ಬರುತ್ತಿದೆ.

ಚೀನಾ ವೈರಸ್ ಭೀತಿಯ ಮಧ್ಯೆ ಮಂಡ್ಯ ಕಾಂಗ್ರೆಸ್ ಶಾಸಕ ರವಿ ಗಣಿಗ ಅವರು ಚೀನಾ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ವಾಪಸ್ ಆಗಿದ್ದಾರೆ. 4 ದಿನ ಚೀನಾ ಪ್ರವಾಸದಲ್ಲಿದ್ದ ಶಾಸಕ ರವಿ ಗಣಿಗ ಅವರು ನಿನ್ನೆಯಷ್ಟೇ ಹಾಂಗ್ ಕಾಂಗ್‌ನಿಂದ ಭಾರತಕ್ಕೆ ಮರಳಿದ್ದಾರೆ.

ಇದನ್ನೂ ಓದಿ: 5 ವರ್ಷದ ಬಳಿಕ ಚೀನಾದಿಂದ ಮತ್ತೆ ವೈರಸ್ ಪಿಶಾಚಿ ಭಯ; ಏನಿದರ ಅಸಲಿಯತ್ತು? 

ಈ ಬಗ್ಗೆ ಮಾತನಾಡಿರುವ ಶಾಸಕ ರವಿ ಗಣಿಗ ಅವರು ಚೀನಾದಲ್ಲಿ ಕೋವಿಡ್ ರೀತಿಯ ಹೊಸ ವೈರಸ್ ಬಂದಿರಬಹುದು. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಎಲ್ಲಾ ಮಕ್ಕಳಿಗೆ ಟೆಸ್ಟ್ ಸೋಂಕಿನ ಟೆಸ್ಟ್ ನಡೀತಿದೆ. ಶೇಕಡಾ 80ರಷ್ಟು ಜನ ಮಾಸ್ಕ್ ಧರಿಸಿ ಓಡಾಡ್ತಿದ್ದಾರೆ. ಆದರೆ ಚೀನಾದಲ್ಲಿ ನಾವು ಕಂಡಂತೆ ಮಾಸ್ಕ್ ಕಡ್ಡಾಯ ನಿಯಮ ಜಾರಿಯಲ್ಲಿ ಇಲ್ಲ ಎಂದಿದ್ದಾರೆ.

ಮುಂದುವರಿದು ಚೀನಾ ಪರಿಸ್ಥಿತಿ ಬಗ್ಗೆ ವಿವರಿಸಿದ ರವಿ ಗಣಿಗ ಅವರು ಮಕ್ಕಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಟೆಸ್ಟ್ ಮಾಡುತ್ತಿದ್ದಾರೆ. ಯಾವುದೋ ವೈರಸ್ ಅಥವಾ ಕೋವಿಡ್ ರೀತಿಯ ವೈರಸ್ ಬಂದಿರಬಹುದು. ಹಾಗಾಗಿ ಹಾಂಗ್ ಕಾಂಗ್ ಏರ್‌ಪೋರ್ಟ್‌ನಲ್ಲೂ ಮಾಸ್ಕ್ ಧರಿಸಿದ್ದರು. ಅಲ್ಲಿನ ಪರಿಸ್ಥಿತಿ ನೋಡಿದರೆ ಕೋವಿಡ್ ರೀತಿಯ ಹೊಸ ವೈರಸ್ ಬಂದಿರಬಹುದು ಅನ್ನೋ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ.

HMPV ವೈರಸ್ ಲಕ್ಷಣಗಳು ಏನು?
ಕೆಮ್ಮು, ಜ್ವರ, ಮೂಗು ಕಟ್ಟಿಕೊಳ್ಳುವುದು, ಉಸಿರಾಟದಲ್ಲಿ ಸಮಸ್ಯೆ
ಇನ್ ಕ್ಯೂಬೇಷನ್ ಅವಧಿ ಮೂರರಿಂದ 6 ದಿನಗಳು
ವೈರಸ್‌ ತಗುಲಿದ 3 ರಿಂದ 6 ದಿನಗಳಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಳ್ಳುತ್ತವೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment