newsfirstkannada.com

ಏಪ್ರಿಲ್ 3ಕ್ಕೆ ಮಂಡ್ಯದಲ್ಲಿ ಸ್ವತಂತ್ರ ಸ್ಪರ್ಧೆ ನಿರ್ಧಾರ.. ಸುಮಲತಾ ಅಂಬರೀಶ್ ಮಹತ್ವದ ಘೋಷಣೆ

Share :

Published March 30, 2024 at 4:14pm

Update March 30, 2024 at 4:29pm

  ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಸಂಸದೆ ಸುಮಲತಾ

  ಮಂಡ್ಯ ಜನರಿಗೆ ಕೊಟ್ಟಿರುವ ವಾಗ್ದಾನ ಮೀರಿಲ್ಲ ಎಂದು ಸುಮಲತಾ ಅಂಬರೀಶ್

  ಮಂಡ್ಯ ಜನರ ಬಿಟ್ಟು ಯಾವ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ

ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ತಮ್ಮ ನಿವಾಸದಲ್ಲಿ ಬೆಂಬಲಿಗರ ಸಭೆ ನಡೆಸಿದ್ದು, ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಮಹತ್ವದ ಘೋಷಣೆ ಮಾಡಿದ್ದಾರೆ. ಸುಮಲತಾ ಅಂಬರೀಶ್‌ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಬೆಂಬಲಿಗರು ಒತ್ತಾಯಿಸಿದ್ದಾರೆ.

ಕಾರ್ಯಕರ್ತರು, ಬೆಂಬಲಿಗರನ್ನು ಉದ್ದೇಶಿಸಿ ಸಂಸದ ಸುಮಲತಾ ಅಂಬರೀಶ್ ಅವರು ಮಾತನಾಡಿದ್ದಾರೆ. ನನ್ನ ಹಾಗೂ ಅಂಬರೀಶ್ ಅಭಿಮಾನಿಗಳಿಗೆ 5 ವರ್ಷದ ರಾಜಕೀಯ ಜೀವನ ನೀಡಿದ್ದು ಮಂಡ್ಯದ ಜನ. ಇಂದು ನನ್ನ ಜೊತೆಯಲ್ಲಿ, ಅಂಬರೀಶ್ ರಾಜಕೀಯ ಜೀವನದ ಮೊದಲ ದಿನದಂದು ಇಂದಿನವರೆಗೂ ಇರುವ ಎಲ್ಲರಿಗೂ ಧನ್ಯವಾದಗಳು.

ಇದನ್ನೂ ಓದಿ: ಯಾರೇ ಆದ್ರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ -ರಮೇಶ್​ ಕುಮಾರ್, ಮುನಿಯಪ್ಪಗೆ DKS ಎಚ್ಚರಿಕೆ..!

ನನಗೆ ರಾಜಕೀಯ ಅನುಭವ ಇಲ್ಲದ ಸಂದರ್ಭದಲ್ಲಿ ನನ್ನ ಜೊತೆಗೆ ಇದ್ದೀರಿ. ಇದೇ ನನ್ನ ಶಕ್ತಿ‌. ಅಂದು ನನ್ನ ಜೊತೆಗೆ ಮಂತ್ರಿಗಳು ಇರಲಿಲ್ಲ. ನೀವೇ ಇದ್ದದ್ದು. 5 ವರ್ಷ ನಿಮ್ಮ ಕೈಲಾದ ಸೇವೆ ಮಾಡಿದ್ದೀರಿ‌ ಎಂದ್ರು. ಕಳೆದ 5 ವರ್ಷದಲ್ಲಿ ಕಣ್ಣೀರು ಹಾಕಿದ ದಿನಗಳು ಇದೆ. ನಾನು ಸ್ವಾರ್ಥದಿಂದ ನನ್ನ ಹೆಜ್ಜೆ ಹಾಕಿಕೊಳ್ಳಬಹುದಿತ್ತು. ರಾಜಕೀಯದಲ್ಲಿ ನನ್ನ ಸ್ವಾರ್ಥ ಇರಬೇಕು‌ ಅಂದಿದ್ರೆ, ನಾನು ಬೇರೆ ಮಾರ್ಗದಲ್ಲೇ ಹೋಗುತ್ತಿದೆ. ನಾನು ನನ್ನ ಮಗ ಆರಾಮವಾಗಿ ಇರಬಹುದಿತ್ತು. ಆದರೆ ನಾನು ನಿಮಗೆ ಕೊಟ್ಟಿರುವ ವಾಗ್ದಾನ ಮೀರಿಲ್ಲ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ಏಪ್ರಿಲ್ 3ಕ್ಕೆ ಮಂಡ್ಯದಲ್ಲೇ ನಿರ್ಧಾರ
ಅಂಬರೀಶ್ ಬೆಂಬಲಿಗರು, ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಸುಮಲತಾ ಅಂಬರೀಶ್ ಅವರು ಏಪ್ರಿಲ್ 3ರಂದು ಮಂಡ್ಯದಲ್ಲಿ ಸಭೆ ಮಾಡಿ ಅಲ್ಲೇ ಹೇಳುತ್ತೇನೆ. ಮಂಡ್ಯ ಜನರ ಬಿಟ್ಟು ಯಾವ ನಿರ್ಧಾರವನ್ನು ನಾನು ತೆಗೆದುಕೊಳ್ಳುವುದಿಲ್ಲ. ಇದೇ ಏಪ್ರಿಲ್ 3ಕ್ಕೆ ಮಂಡ್ಯಕ್ಕೆ ಬಂದು ಅಲ್ಲೇ ಮಾತನಾಡುತ್ತೇನೆ. ನಿಮ್ಮ ಅಭಿಪ್ರಾಯ ಸ್ವೀಕಾರ ಮಾಡಿ, ಅಲ್ಲಿಯೇ ನಿರ್ಧಾರ ಪ್ರಕಟ ಮಾಡುತ್ತೇವೆ ಎಂದು ಸುಮಲತಾ ಅಂಬರೀಶ್ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಏಪ್ರಿಲ್ 3ಕ್ಕೆ ಮಂಡ್ಯದಲ್ಲಿ ಸ್ವತಂತ್ರ ಸ್ಪರ್ಧೆ ನಿರ್ಧಾರ.. ಸುಮಲತಾ ಅಂಬರೀಶ್ ಮಹತ್ವದ ಘೋಷಣೆ

https://newsfirstlive.com/wp-content/uploads/2024/03/sumalatha-7.jpg

Load More