newsfirstkannada.com

ಹೆಚ್​​​ಡಿಕೆಗೆ ಬಿಗ್​​ ಶಾಕ್​​; ಕಾಂಗ್ರೆಸ್ ಸೇರ್ತಾರಾ ಸಿ.ಎಸ್ ಪುಟ್ಟರಾಜು..? ಏನಿದು ಸ್ಟೋರಿ? ​​

Share :

Published August 29, 2023 at 6:13am

  ಮಂಡ್ಯದಲ್ಲಿ ರಾಜಕೀಯ ಶತ್ರುಗಳ ನಡುವೆ ದೋಸ್ತಿ!

  ಮತ್ತೆ ಒಂದಾಗ್ತಾರ ರಾಜಕೀಯ ಬದ್ದ ವೈರಿಗಳು..?

  ಜೆಡಿಎಸ್‌, ಬಿಜೆಪಿ ಹಾಲಿ-ಮಾಜಿ ಶಾಸಕರಿಗೆ ಗಾಳ?

ರಾಜ್ಯದಲ್ಲಿ ಆಪರೇಷನ್‌ ಹಸ್ತದ ಸದ್ದು ಮತ್ತಷ್ಟು ಜೋರಾಗಿದೆ. ಕೇಸರಿ ಮನೆಯನ್ನ ಒಡೆಯಲು ‘ಕೈ’ ತಂತ್ರ ಹೆಣೆಯುತ್ತಿದೆ ಎನ್ನುತ್ತಿರೋ ಹೊತ್ತಲ್ಲಿ ದಳಮಳ ಶುರುವಾಗಿದೆ. ಲೋಕ ಕದನ ಕಣಕ್ಕೂ ಮುನ್ನವೇ ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಹಸ್ತದ ಗುಲ್ಲು ಎದ್ದಿದೆ. ದಳ ಸಾಮ್ರಾಜ್ಯದ ಸೇನಾಧಿಪತಿಗಳೇ ಹಸ್ತಲಾಘವ ಮಾಡ್ತಾರೆ ಎಂಬ ಸುದ್ದಿ ಕೇಳಿ ದಳಪತಿಗಳೇ ದಂಗಾಗಿದ್ದಾರೆ.

ಮಂಡ್ಯದಲ್ಲಿ ರಾಜಕೀಯ ಶತ್ರುಗಳ ನಡುವೆ ಶುರುವಾಯ್ತು ದೋಸ್ತಿ!
‘ದಳ’ ತೊರೆದು ‘ಹಸ್ತ’ ಲಾಘವ ಮಾಡ್ತಾರಾ ಸಿ.ಎಸ್. ಪುಟ್ಟರಾಜು?

ಮಂಡ್ಯ ರಾಜಕಾರಣದಲ್ಲಿ ಭದ್ರಕೋಟೆ ರಚಿಸಿ ಅಸ್ತಿತ್ವ ಸ್ಥಾಪಿಸಿದ್ದ ದಳ ನಾಯಕ ಸಿ.ಎಸ್. ಪುಟ್ಟರಾಜು. ಆದ್ರೀಗ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ದರ್ಶನ್‌ ಪುಟ್ಟಣ್ಣಯ್ಯ ಮುಂದೆ ಮಂಡಿಯೂರಿದ್ದಾರೆ. ಇದೀಗ ಲೋಕ ಕದನದ ಹೊತ್ತಲ್ಲಿ ದಳ ತೊರೆದು ಕೈ ಹಿಡಿಯಲು ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಮೇಲುಕೋಟೆಯ ರಾಜಕೀಯ ಬದ್ಧವೈರಿಗಳಾದ ದರ್ಶನ್ ಪುಟ್ಟಣ್ಣಯ್ಯ-ಸಿ.ಎಸ್‌. ಪುಟ್ಟರಾಜು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಲಯನ್ಸ್ ಕ್ಲಬ್ ಕಾರ್ಯಕ್ರಮದಲ್ಲಿ ಇಬ್ಬರ ದೋಸ್ತಿ ಅನಾವರಣವಾಗಿದೆ. ಜೊತೆಗೆ ಆಪರೇಷನ್ ಹಸ್ತದ ಹಲ್‌ಚಲ್ ನಡೀತಿರೋ ಸಮಯದಲ್ಲಿ ಹಲವು ಚರ್ಚೆಗಳನ್ನ ಹುಟ್ಟು ಹಾಕಿದೆ.

ಜೆಡಿಎಸ್‌ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಕಾಂಗ್ರೆಸ್ ಸೇರುವ ಮಾತು ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ರಿಂಗಣಿಸುತ್ತಿದೆ. ಈ ಹೊತ್ತಲ್ಲಿ ಸಿ.ಎಸ್ ಪುಟ್ಟರಾಜು ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ಪುಟ್ಟರಾಜು ತೆನೆ ಇಳಿಸಿ ‘ಹಸ್ತ’ ಲಾಘವ ಮಾಡೋದು ಫಿಕ್ಸ್ ಆಯ್ತಾ ಎಂಬ ಚರ್ಚೆ ಶುರುವಾಗಿದೆ. ಅಲ್ಲದೇ ‘ಲೋಕ’ ಚುನಾವಣೆಗೆ ಪುಟ್ಟರಾಜು ಮಂಡ್ಯ ‘ಕೈ’ಅಭ್ಯರ್ಥಿಯಾಗಿ ಕಣಕ್ಕಿಳಿಯೋ ಸಾಧ್ಯತೆ ಇದೆ ಎನ್ನಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಸಿ.ಎಸ್. ಪುಟ್ಟರಾಜು, ದರ್ಶನ್ ನಡುವೆ ರಾಜಕೀಯ ಶತ್ರುತ್ವ ಮಾಯವಾಗಿದ್ದು, ನಗುನಗುತ್ತಾ ಕೈ ಹಿಡಿದುಕೊಂಡು ಇಬ್ಬರೂ ದೋಸ್ತಿ ಪ್ರದರ್ಶನ ಮಾಡಿದ್ದಾರೆ. ಈ ದೋಸ್ತಿ ಬೆಸುಗೆ ಪುಟ್ಟರಾಜು ಕಾಂಗ್ರೆಸ್ ಸೇರೋ ಮುನ್ಸೂಚನೆನಾ ಎಂಬ ಪ್ರಶ್ನೆ ಎದ್ದಿದೆ. ಅಲ್ಲದೇ ಈ‌ ಬಾರಿ ‘ಕೈ’ ಲೋಕಸಭಾ ಅಭ್ಯರ್ಥಿಗೆ ರೈತಸಂಘ‌ ಸಪೋರ್ಟ್ ನೀಡುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ಪುಟ್ಟರಾಜುರನ್ನ ಎಂಪಿ ಅಭ್ಯರ್ಥಿ ಮಾಡೋ ಪ್ಲಾನ್‌ನಲ್ಲಿ ಹಸ್ತ ಪಾಳಯವಿದ್ದು, ಹೀಗಾಗಿ ಹಳೆಯದನ್ನು ಮರೆತು ಪುಟ್ಟರಾಜು, ದರ್ಶನ್ ಒಂದಾದ್ರಾ ಎಂಬ ಪ್ರಶ್ನೆ ಎದ್ದಿದೆ.

ತುಮಕೂರು ಜಿಲ್ಲೆಯಲ್ಲೂ ಸದ್ದಿಲ್ಲದೇ ಆಪರೇಷನ್ ಹಸ್ತ?
ಜೆಡಿಎಸ್‌, ಬಿಜೆಪಿ ಹಾಲಿ-ಮಾಜಿ ಶಾಸಕರಿಗೆ ಡಿಕೆ ಗಾಳ?

ಮಂಡ್ಯದಲ್ಲಿ ಸದ್ದಿಲ್ಲದೇ ಪುಟ್ಟರಾಜುಗೆ ಗಾಳ ಹಾಕಿರೋ ಟ್ರಬಲ್ ಶೂಟರ್ ಡಿಕೆಶಿ, ಇತ್ತ ಕಲ್ಪತರು ನಾಡಲ್ಲೂ ಆಪರೇಷನ್ ಕಲರವ ಸ್ಟಾರ್ಟ್ ಮಾಡಿರೋ ಸುದ್ದಿ ಹಬ್ಬಿದೆ. ತೆರೆ ಮರೆಯಲ್ಲಿ ಡಿಕೆ ಸಹೋದರರು ಜೆಡಿಎಸ್‌, ಬಿಜೆಪಿ ಹಾಲಿ-ಮಾಜಿ ಶಾಸಕರನ್ನ ಸೆಳೆಯಲು ಯತ್ನಿಸುತ್ತಿದ್ದಾರೆ ಎನ್ನಲಾಗ್ತಿದೆ. ಬಿಜೆಪಿಯ ತುಮಕೂರು ಗ್ರಾಮೀಣ ಶಾಸಕ ಸುರೇಶ್ ಗೌಡಗೆ ಡಿ.ಕೆ. ಸುರೇಶ್ ಗಾಳ ಹಾಕಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಯಾಕಂದ್ರೆ ಕಳೆದ 2 ದಿನದ ಹಿಂದಷ್ಟೇ ಡಿ.ಕೆ ಸುರೇಶ್‌ರನ್ನ ಸುರೇಶ್ ಗೌಡ ಸದಾಶಿವನಗರದ ಸಂಸದರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಚರ್ಚೆ ನಡೆಸಿದ್ರು. ಮತ್ತೊಂದೆಡೆ ಚಿಕ್ಕನಾಯಕನಹಳ್ಳಿ ಜೆಡಿಎಸ್ ಶಾಸಕ ಸುರೇಶ್ ಬಾಬುರನ್ನೂ ಕಾಂಗ್ರೆಸ್‌ಗೆ ಕರೆತರಲು ಡಿಕೆ ಸುರೇಶ್‌ ಮುಂದಾಗಿದ್ದಾರೆ ಎನ್ನಲಾಗ್ತಿದೆ. ಇನ್ನೂ ಜೆಡಿಎಸ್ ಮಾಜಿ ಶಾಸಕ ಗೌರಿಶಂಕರ್ ಮಾಜಿ ಸಚಿವ ಜೆ.ಸಿ ಮಾಧುಸ್ವಾಮಿ ಸೇರಿ ಹಲವರಿಗೆ ಡಿಕೆ ಬ್ರದರ್ಸ್ ಗಾಳ ಹಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಆಪರೇಷನ್ ಹಸ್ತವೋ..? ಆಪರೇಷನ್ ಕಮಲವೋ?
ರಾಜಕಾರಣದಲ್ಲಿ ಪಕ್ಷ ನಿಷ್ಠೆ ಉಳಿದಿಲ್ಲ ಎಂದ ಹೆಚ್‌ಡಿಕೆ

ಇನ್ನೂ ಲೋಕಕದನದ ಹೊತ್ತಲ್ಲಿ ಕಾಂಗ್ರೆಸ್ ಆಪರೇಷನ್ ಹಸ್ತ ಮಾಡ್ತಿದೆ ಎಂಬ ಚರ್ಚೆ ದಳಪತಿಗಳನ್ನ ದಂಗಾಗಿಸಿದೆ. ಇರೋ 19 ಶಾಸಕರನ್ನ ಹಿಡಿದಿಟ್ಟುಕೊಳ್ಳೋದೆ ದೊಡ್ಡ ಸವಾಲಾಗಿದೆ. ಇದ್ರ ಮಧ್ಯೆ ಆಪರೇಷನ್​​​ ರಾಜಕಾರಣ’ದ ಬಗ್ಗೆ ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ ಕೆಂಡಕಾರಿದ್ದಾರೆ. ಯಾವ ಪಕ್ಷದಲ್ಲೂ ಪಕ್ಷ ನಿಷ್ಠೆ ಉಳಿದಿಲ್ಲ ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ.

ಆಪರೇಷನ್‌ ಹಸ್ತವೋ ಅಥವಾ ಆಪರೇಷನ್‌ ಕಮಲವೋ ಇವತ್ತು ರಾಜಕಾರಣದಲ್ಲಿ ಪಕ್ಷನಿಷ್ಠೆ ಉಳಿದಿಲ್ಲ. ಯಾವ ಪಕ್ಷದಲ್ಲೂ ಉಳಿದಿಲ್ಲ. ಅವರವರ ಸ್ಥಾನಮಾನವನ್ನು ಪಡೆದುಕೊಳ್ಳುವುದಕ್ಕೆ ಎಲ್ಲಿ ಹೋದರೆ ಒಳ್ಳೆಯದು ಎಂದು ತೀರ್ಮಾನ ತೆಗೆದುಕೊಂಡು ಹೋಗುವ ಕಾಲ ಇದಾಗಿದೆ.

– ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ

ಒಟ್ಟಾರೆ, ರಾಜ್ಯದಲ್ಲಿ ಆಪರೇಷನ್ ಹಸ್ತದ ಗುಲ್ಲು ಮತ್ತಷ್ಟು ಹೆಚ್ಚಾಗ್ತಿದೆ. ಬಿಜೆಪಿ ನಾಯಕರ ಘರ್‌ವಾಪ್ಸಿ ಬಗ್ಗೆ ಹರಿದಾಡ್ತಿದ್ದ ಮಾತೀಗ ದಳಮನೆಯ ತಳಮಳಕ್ಕೆ ಕಾರಣವಾಗಿದೆ. ಆದ್ರೆ, ಆಪರೇಷನ್ ಹಸ್ತ ನಡೀತಿದ್ಯಾ? ಇಲ್ವಾ ಅನ್ನೋದು ಲೋಕಕದನ ಕೌತುಕದ ವೇಳೆ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್​​​ಡಿಕೆಗೆ ಬಿಗ್​​ ಶಾಕ್​​; ಕಾಂಗ್ರೆಸ್ ಸೇರ್ತಾರಾ ಸಿ.ಎಸ್ ಪುಟ್ಟರಾಜು..? ಏನಿದು ಸ್ಟೋರಿ? ​​

https://newsfirstlive.com/wp-content/uploads/2023/08/HD-Kumaraswamy.jpg

Load More