ಮರ ಕತ್ತರಿಸೋ ಯಂತ್ರದಿಂದ ಜೀವ ತೆಗೆದ ಕೇಸ್‌; ಕ್ಯಾತನಹಳ್ಳಿ ಕಿರಾತಕನ ಹಿಸ್ಟರಿ ಕೇಳಿ ಪೊಲೀಸರು ಶಾಕ್!

author-image
Bheemappa
Updated On
ಆನ್​ಲೈನ್​ ಗೇಮ್​ನಿಂದ ಭಾರೀ ಸಾಲ ಮಾಡಿಕೊಂಡಿದ್ದ; ದುಡ್ಡಿಗಾಗಿ ಅಮಾಯಕನ ಜೀವವನ್ನೇ ತೆಗೆದು ಹಾಕಿದ ಕಿರಾತಕ
Advertisment
  • ಮೊದಲು ಬೇರೆ ಮನೆನ ಟಾರ್ಗೆಟ್ ಮಾಡಿ, ಅದನ್ನು ಬಿಟ್ಟಿದ್ದು ಯಾಕೆ?
  • ಬಾಗಿಲು ಹಾಕಿ ಪ್ರಾಣ ಉಳಿಸಿಕೊಂಡ ರಮೇಶ್ ಪತ್ನಿ ಯಶೋದಮ್ಮ
  • ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದ ಒಂಟಿ ಮನೆ ಟಾರ್ಗೆಟ್​ ಮಾಡಿದ್ದ ಕಿರಾತಕ

ಮಂಡ್ಯ: ಮರ ಕತ್ತರಿಸುವ ಯಂತ್ರದಿಂದ ವ್ಯಕ್ತಿಯ ಜೀವ ತೆಗೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯ ಈ ಹಿಂದಿನ ಮಾಹಿತಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಆನ್​ಲೈನ್ ಗೇಮ್ ಸುಳಿಗೆ ಸಿಲುಕಿ ಸಾಲ ಮಾಡಿಕೊಂಡಿದ್ದ ಕಿರಾತಕ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ.

ಕ್ಯಾತನಹಳ್ಳಿ ಕಿರಾತಕ!

ಮಂಡ್ಯದ ಕ್ಯಾತನಹಳ್ಳಿಯಲ್ಲಿ ಮರ ಕುಯ್ಯುವ ಯಂತ್ರದಿಂದ ವ್ಯಕ್ತಿಯ ಪ್ರಾಣ ತೆಗೆದಿದ್ದ ಆರೋಪಿ ಮೊಹಮ್ಮದ್ ಇಬ್ರಾಹಿಂ ಮಂಡ್ಯದ ಶ್ರೀರಂಗಪಟ್ಟಣದ ನಿವಾಸಿಯಾಗಿದ್ದಾನೆ. ಆನ್​​ಲೈನ್​ನಲ್ಲಿ ಗೇಮ್ಸ್ ಆಡಿ.. ಆಡಿ ಸಾಲದ ಸುಳಿಗೆ ಸಿಲುಕಿದ್ದನು. ಲಕ್ಷಾಂತರ ರೂಪಾಯಿ ಸಾಲ ತೀರಿಸುವುದು ಮೊಹಮ್ಮದ್ ಇಬ್ರಾಹಿಂಗೆ ದೊಡ್ಡ ಸವಾಲಾಗಿತ್ತು. ಹೀಗಾಗಿ ದರೋಡೆ ಪ್ಲಾನ್ ಮಾಡಿ ಒಂಟಿ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದನು. ವಿಚಿತ್ರ ಎಂದರೆ ದರೋಡೆಗಾಗಿ ಮರ ಕತ್ತರಿಸುವ ಯಂತ್ರದೊಂದಿಗೆ ಮನೆಗಳಿಗೆ ಕಳ್ಳತನ ಮಾಡಲು ಹೋಗುತ್ತಿದ್ದನು.

ಇದನ್ನೂ ಓದಿ: ಇಂದು ಮಂಡ್ಯ ಸಾಹಿತ್ಯ ಸಮ್ಮೇಳನದ ಸಮಾರೋಪ.. ಕೊನೆ ದಿನ ಏನೇನು ಇರಲಿದೆ?

publive-image

ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮಕ್ಕೆ ಹೋಗುವ ಮೊದಲು ಕೆನ್ನಾಳು ಗ್ರಾಮದಲ್ಲಿ ದರೋಡೆಗೆ ಯತ್ನ ಮಾಡಿದ್ದನು. ಆದರೆ ಮನೆಯಲ್ಲಿ ಜನ ಹಾಗೂ ಸಿಸಿಟಿವಿ ಇದ್ದಿದ್ದರಿಂದ ಅಲ್ಲಿಂದ ವಾಪಸ್ ಆಗಿದ್ದನು. ಇದಾದ ಮೇಲೆ ಕ್ಯಾತನಹಳ್ಳಿಯ ರಾಜ್ಯ ಹೆದ್ದಾರಿ ಪಕ್ಕದಲ್ಲಿದ್ದ ಒಂಟಿ ಮನೆ, ಅಲ್ಲದೇ ವಯಸ್ಸಾದ ದಂಪತಿ ಇದ್ದಿದ್ದರಿಂದ ಆಯ್ಕೆ ಮಾಡಿಕೊಂಡಿದ್ದನು. ಮರ ಕುಯ್ಯುವ ಯಂತ್ರದಿಂದ ರಮೇಶ್​ ತೋಟದ ಮನೆಗೆ ಬಂದು ದರೋಡೆಗೆ ಇಳಿದಿದ್ದನು.

ಈ ವೇಳೆ ರಮೇಶ್ ದರೋಡೆ ಮಾಡಲು ಬಿಟ್ಟಿಲ್ಲ, ಅಡ್ಡಗಟ್ಟಿದ್ದಾನೆ. ಆದರೆ ಆರೋಪಿ ಮೊಹಮ್ಮದ್ ಇಬ್ರಾಹಿಂ, ಮರ ಕುಯ್ಯುವ ಯಂತ್ರದಿಂದ ರಮೇಶರನ್ನ ಮನಬಂದಂತೆ ಕತ್ತರಿಸಿ ಮುಗಿಸಿದ್ದಾನೆ. ಈ ವೇಳೆ ರಮೇಶ್ ಪತ್ನಿ ಯಶೋದಮ್ಮ ಮನೆಯಿಂದ ಹೊರ ಬಂದು ಬಾಗಿಲು ಹಾಕಿ, ಅಪಾಯದಿಂದ ಪಾರಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment