/newsfirstlive-kannada/media/post_attachments/wp-content/uploads/2025/03/mandya-122.jpg)
ಮಂಡ್ಯ: ಮೂರು ದಿನದ ಹಿಂದೆ ಹಸೆಮಣೆ ಏರಿದ್ದ ಯುವಕ ಹೃದಯಾಘಾತದಿಂದ ನಿಧನರಾದ ಘಟನೆ ಜಿಲ್ಲೆಯ ಕೆ.ಆರ್.ಪೇಟೆಯಲ್ಲಿ ನಡೆದಿದೆ. ಶಶಾಂಕ್(28), ಮೃತ ವರ.
ಪುರಸಭೆ ಸದಸ್ಯ ಕೆ.ಸಿ.ಮಂಜುನಾಥ್ ಪುತ್ರನಾಗಿದ್ದ ಶಶಾಂಕ್, ಕಳೆದ ಭಾನುವಾರ ಹಸೆಮಣೆ ಏರಿದ್ದ. ಜಾರ್ಖಂಡ್ ಮೂಲದ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ. ಮದುವೆಯಾದ ಬೆನ್ನಲ್ಲೇ ಶಶಾಂಕ್ ಇಹಲೋಕ ತ್ಯಜಿಸಿದ್ದಾನೆ.
ಇಂದು ಕೆ.ಆರ್.ಪೇಟೆಯಲ್ಲಿ ಶಶಾಂಕ್​ನ ಅಂತ್ಯಸಂಸ್ಕಾರ ನಡೆಯಲಿದೆ. ಮಗನ ಮದುವೆ ಸಂಭ್ರಮದಲ್ಲಿದ್ದ ಪೋಷಕರು ಕಂಗಾಲಾಗಿದ್ದಾರೆ. ಖುಷಿಯಿಂದ ತೇಲಾಡುತ್ತಿದ್ದ ಮದುವೆ ಮನೆಯಲ್ಲಿ ದುಃಖ ಆವರಿಸಿದೆ. ಸಂಬಂಧಿಕರೆಲ್ಲ ವಿಷಯ ತಿಳಿದು ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಂದು ನಾವಿಕನ ಕುಟುಂಬ 30 ಕೋಟಿ ಆದಾಯ ಗಳಿಸಿದೆ; ಕುಂಭಮೇಳದ ಸಕ್ಸಸ್ ಸ್ಟೋರಿ ಹೇಳಿದ ಯೋಗಿ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ