newsfirstkannada.com

7,000 ಆಸನ ವ್ಯವಸ್ಥೆ.. 100 ಸಿಸಿಟಿವಿ.. ಹೇಗಿದೆ ಬೆಂಗಳೂರಲ್ಲಿ ಗಣರಾಜ್ಯೋತ್ಸವದ ತಯಾರಿ..!?

Share :

Published January 26, 2024 at 7:36am

  ದೇಶದಲ್ಲಿ 75ನೇ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ

  ಬೆಳಗ್ಗೆ 9 ಗಂಟೆಯಿಂದ ಮಾಣಿಕ್ ಷಾ ಮೈದಾನದಲ್ಲಿ ಕಾರ್ಯಕ್ರಮ

  ರಾಜ್ಯಪಾಲರು, ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 75ನೇ ಗಣರಾಜ್ಯೋತ್ಸವದ ಅದ್ಧೂರಿ ಆಚರಣೆಗಾಗಿ ಮಾಣಿಕ್ ಷಾ ಪರೇಡ್ ಮೈದಾನವು ಸಂಪೂರ್ಣವಾಗಿ ಸಿದ್ಧಗೊಂಡಿದೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮವನ್ನು ರಾಜ್ಯಪಾಲರು ಥಾವರ್ ಚಂದ್​ ಗಹಲೋಟ್​ ಉದ್ಘಾಟಿಸಲಿದ್ದಾರೆ.

ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಸುಮಾರು 7,000 ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿದ್ದು, ಭದ್ರತಾ ಪಾರ್ಕಿಂಗ್ ಸೇರಿದಂತೆ ಹಲವು ವ್ಯವಸ್ಥೆ ಮಾಡಲಾಗಿದೆ. ವಿಶೇಷ ಆಹ್ವಾನಿತರಿಗಾಗಿ ಹಳದಿ ಕಾರ್ಡ್ ವಿತರಿಸಲಾಗಿದೆ.

ಮಾಣಿಕ್ ಷಾ ಗ್ರೌಂಡ್ ಸುತ್ತ ಮುತ್ತ ಕಾರ್ಯಕ್ರಮದ ಭದ್ರತೆಗಾಗಿ 100 ಸಿಸಿಟಿವಿ ಅಳವಡಿಸಿ, ಹೈ ಸೆಕ್ಯೂರಿಟಿ ನಿಯೋಜನೆ ಮಾಡಲಾಗಿದೆ. ಬೆಳಗ್ಗೆ 8:30ರಿಂದ 10:30ರವರೆಗೆ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಮೈದಾನದ ಸುತ್ತಮುತ್ತ ವಾಹನ ನಿಲುಗಡೆಗೆ ನಿಷೇಧಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

7,000 ಆಸನ ವ್ಯವಸ್ಥೆ.. 100 ಸಿಸಿಟಿವಿ.. ಹೇಗಿದೆ ಬೆಂಗಳೂರಲ್ಲಿ ಗಣರಾಜ್ಯೋತ್ಸವದ ತಯಾರಿ..!?

https://newsfirstlive.com/wp-content/uploads/2024/01/REPUBLIC-DAY-1.jpg

Load More