ಇದಪ್ಪಾ ಚಾಲೆಂಜ್ ಅಂದ್ರೆ.. 86KG ತೂಕವಿದ್ದ ‘ಮಂಗಳ ಗೌರಿ ಮದುವೆ’ ಬಳ್ಳಿ ಸಖತ್ ಸ್ಲಿಮ್​ ಆಗಿದ್ದೇಗೆ..?​ ​

author-image
Veena Gangani
Updated On
ಇದಪ್ಪಾ ಚಾಲೆಂಜ್ ಅಂದ್ರೆ.. 86KG ತೂಕವಿದ್ದ ‘ಮಂಗಳ ಗೌರಿ ಮದುವೆ’ ಬಳ್ಳಿ ಸಖತ್ ಸ್ಲಿಮ್​ ಆಗಿದ್ದೇಗೆ..?​ ​
Advertisment
  • ಮಂಗಳ ಗೌರಿ ಸೀರಿಯಲ್​ ಮೂಲಕ ಫೇಮಸ್ ಆಗಿದ್ದ ಕೃತಿ ​
  • ಕೃತಿ ಬೆಟ್ಟದ್ ಸ್ಲಿಮ್​ ಫೋಟೋ ನೋಡಿ ದಂಗಾದ ನೆಟ್ಟಿಗರು
  • ರಾಧಾ ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಕೃತಿ ಎಂಟ್ರಿ

ಮಂಗಳ ಗೌರಿ ಮದುವೆ ಸೀರಿಯಲ್​ ಮೂಲಕ ಸಖತ್ ಫೇಮಸ್​ ಆಗಿದ್ದ ಬಳ್ಳಿ ಒಂದೇ ಒಂದು ಫೋಟೋ ಮೂಲಕ ಶಾಕ್​ ಕೊಟ್ಟಿದ್ದಾರೆ. ಹೌದು, ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಮಂಗಳ ಗೌರಿ ಮದುವೆ, ಲಕ್ಷ್ಮೀ ಬಾರಮ್ಮ ಸೀರಿಯಲ್​ನಲ್ಲಿ ನಟಿಸಿದ್ದ ಕೃತಿ ಬೆಟ್ಟದ್ ಅವರು ಸಖತ್ ಸ್ಲಿಮ್​ ಆಗಿ ಶಾಕ್​ ಕೊಟ್ಟಿದ್ದಾರೆ.

ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

publive-image

ನಟಿ ಕೃತಿ ಬೆಟ್ಟದ್ ಸೋಷಿಯಲ್​ ಮೀಡಿಯಾದಲ್ಲಿ ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರೋ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ಅದರಲ್ಲಿ ನಟಿ ಕೃತಿ ಬೆಟ್ಟದ್ ಬರೋಬ್ಬರಿ 20ಕೆಜಿ ಸಣ್ಣ ಆಗಿದ್ದಾರೆ. ಮೊದಲು ಜಿಮ್​ಗೆ ಸೇರಿದಾಗ 84kg ತೂಕ ಹೊಂದಿದ್ದರು. ತಿಂಗಳು ಕಳೆದಂತೆ ಕೃತಿ ಅವರು 20kg ತೂಕ ಇಳಿಸಿಕೊಂಡಿದ್ದಾರೆ. ನಟಿಯ ಸ್ಲಿಮ್​ ಲುಕ್‌ಗಿ ಫ್ಯಾನ್ಸ್‌ ಕೂಡ ಸಂತಸ ವ್ಯಕ್ತಪಡಿಸಿದ್ದಾರೆ.

publive-image

ಇನ್ನೂ, ನಟಿ ಕೃತಿ ಬೆಟ್ಟದ್ ಇತ್ತೀಚಿಗಷ್ಟೇ ಮುಕ್ತಾಯ ಆಗಿರೋ ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ಚಿಂಗಾರಿ ಪಾತ್ರದಲ್ಲಿ ನಟಿಸಿದ್ದರು. ಕಾವೇರಿ ಮಾಡುವ ಕುತಂತ್ರಿ ಕೆಲಸಗಳಿಗೆ ಸಪೋರ್ಟ್ ಮಾಡುವ ಪಾತ್ರದಲ್ಲಿ ನಟಿಸಿದ್ದರು. ರಾಧಾ ಧಾರಾವಾಹಿಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಕೃತಿ ಡಾನ್ ಆಗಿ ಕಿರುತೆರೆ ಮಿಂಚಿದ್ದಾರೆ.

publive-image

ಅಷ್ಟೇ ಅಲ್ಲದೇ ಮೈಲಾರಿ, ಕೂಲ್, ಡೆಡ್ಲಿ-2, ಝೂಮ್, ಡ್ರಾಮಾ, ವಿಕ್ಟರಿ 2, ಉತ್ಸಾಹಿ ಸಿನಿಮಾಗಳಲ್ಲಿ ಅಭಿನಯಸಿದ್ದಾರೆ. ಜೊತೆಗೆ ಭಜೋ ಬಿ ಕರ್ ವಾಲೇ ಎಂಬ ಹಿಂದಿ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment